ಗುರುವಾರ , ಮೇ 13, 2021
40 °C

ಕೋವಿಡ್‌ ಹಿನ್ನೆಲೆಯಲ್ಲಿ ಅದ್ಧೂರಿಗೆ ಕಡಿವಾಣ: ಶ್ರೀರಾಮ ನವಮಿ ಸಂಭ್ರಮ; ರಾಮನಾಮ ಜಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಶ್ರೀರಾಮ ಮಂದಿರ ಮತ್ತು ಅಂಬಾಭವಾನಿ ದೇವಸ್ಥಾನದಲ್ಲಿ ಶ್ರೀರಾಮನವಮಿಯನ್ನು ಬುಧವಾರ ಆಚರಿಸಲಾಯಿತು.

ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳನ್ನು ವಿಶೇಷವಾಗಿ ಆಲಂಕರಿಸಿ, ಪೂಜೆ, ಹೋಮ, ಹವನ ನೆರವೇರಿಸಲಾಯಿತು. ಭಕ್ತರು ರಾಮನಾಮ ಜಪ ಮಾಡುವ ಮೂಲಕ ಶ್ರೀರಾಮ ನವಮಿ ಆಚರಿಸಿದರು.

ಶ್ರೀರಾಮನವಮಿ ಉತ್ಸವ ಸಮಿತಿ ವತಿಯಿಂದ ಅಂಬಾಭವಾನಿ ದೇವಸ್ಥಾನದಲ್ಲಿ ಶ್ರೀರಾಮ
ನವಮಿಯನ್ನು ಸರಳವಾಗಿ ಆಚರಿಸಲಾಯಿತು.

ಉತ್ಸವ ಸಮಿತಿ ಅಧ್ಯಕ್ಷ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಮಾತನಾಡಿ, ಶ್ರೀರಾಮ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ರಾಜ್ಯಭಾರ ಮಾಡಿದರು. ತಮ್ಮದಲ್ಲದ ತಪ್ಪಿಗೆ 14 ವರ್ಷ ವನವಾಸ ಅನುಭವಿಸಿ ಮುಂದಿನ ಪೀಳಿಗೆಗೆ ಸತ್ಯೆ ಹಾಗೂ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಹೇಗೆ ಜೀವನ ನಡೆಸಬೇಕೆಂಬುದನ್ನು ತಿಳಿಸಿಕೊಟ್ಟ ಮಹಾನ್‌ ಪುರುಷ ಶ್ರೀರಾಮನ ಆದರ್ಶ ಪ್ರಾಯ ಗುಣಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಯಾರಿಗೂ ಖೇಡು ಬಯಸದೇ ಸರಳವಾಗಿ ಜೀವನ ನಡೆಸಿಕೊಂಡು ಹೋಗಬೇಕು ಎಂದರು.

ಶಿವಾನಂದ ಭುಯ್ಯಾರ, ಸಂದೀಪ ಪಾಟೀಲ, ಅಪ್ಪು ಪೆದ್ದಿ, ಮಂಜು ಸೌದಿ, ಸಂತೋಷ ಯಂಕಪ್ಪಗೋಳ, ಸಮೀರ ಕುಲಕರ್ಣಿ, ಅರ್ಜುನ ಕೋಟೆಕರ, ನಾರಾಯಣಸಿಂಗ್‌ ಹಜೇರಿ, ರಾಜಶೇಖರ ಬಜಂತ್ರಿ, ದೀಪಕ ಕಾಳೆ, ಸತೀಶ ಗಾಯಕವಾಡ, ಪ್ರಲ್ಹಾದ ಕಾಂಬಳೆ, ಹುಚ್ಚಪ್ಪ ಕವಿಶೆಟ್ಟಿ, ಆನಂದ ಮುಚ್ಚಂಡಿ, ಶರಣು ಪೂಜಾರಿ ಇದ್ದರು.

ಆನ್‌ಲೈನ್‌ನಲ್ಲಿ ಶ್ರೀರಾಮ ನಾಮ ಜಪ: ಶ್ರೀರಾಮ ನವಮಿಯ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಆನ್‌ಲೈನ್ ಮೂಲಕ ಸಾಮೂಹಿಕ ಶ್ರೀರಾಮ ನಾಮಜಪ ಯಜ್ಞ ನಡೆಯಿತು. 2900 ಕ್ಕೂ ಅಧಿಕ ಮಂದಿ ಆನ್‌ಲೈನ್‌ನಲ್ಲಿ ಭಾಗವಹಿಸಿ, ವೀಕ್ಷಣೆ ಮಾಡಿದರು.

ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೋಗೇರ ಮಾತನಾಡಿ, ಸದ್ಯದ ಸಂಕಷ್ಟದ ಕಾಲವನ್ನು ಎದುರಿಸಲು ಆಧ್ಯಾತ್ಮಿಕ ಪ್ರಗತಿಗಾಗಿ ರಾಜ್ಯದಾದ್ಯಂತ ಶ್ರೀರಾಮನಾಪ ಜಪಯಜ್ಞವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

25 ನಿಮಿಷಗಳ ಕಾಲ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮಜಪ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು