ಮಂಗಳವಾರ, ಜೂನ್ 15, 2021
22 °C

ವಿಜಯಪುರ ಜಿಲ್ಲೆಯಾದ್ಯಂತ ಅಬ್ಬರದ ಗಾಳಿ, ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಚಂಡಮಾರುತದ ಪರಿಣಾಮ ಶನಿವಾರ ಜಿಲ್ಲೆಯಾದ್ಯಂತ ಅಬ್ಬರದ ಗಾಳಿಯೊಂದಿಗೆ ಧಾರಾಕಾರ ಮಳೆಯಾಯಿತು.

ಬೆಳಿಗ್ಗೆಯಿಂದಲೇ ರಭಸದ ಗಾಳಿ ಬೀಸುತ್ತಿತ್ತು. ಮಧ್ಯಾಹ್ನದ ಬಳಿಕ ಮೋಡಗಳು ದಟ್ಟೈಸಿದವು. ಬಳಿಕ ಆಗಾಗ ಧಾರಾಕಾರ ಮಳೆ ಸುರಿಯುವ ಮೂಲಕ ಬೇಸಿಗೆಯಲ್ಲಿ ಮುಂಗಾರು ವಾತಾವರಣ ನಿರ್ಮಾಣವಾಗಿತ್ತು.

ವಿಜಯಪುರ ನಗರದ ಪ್ರಮುಖ ವೃತ್ತದಲ್ಲಿ ವಾಹನ ಚಾಲಕರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಅಳವಡಿಸಿದ್ದ ನೆರಳಿನ ಪರದೆಗಳು ಗಾಳಿಯ ಅಬ್ಬರಕ್ಕೆ ಹರದಿ, ಬಿದ್ದಿತು. ಮಳೆಯ ಪರಿಣಾಮ ಮಲೆನಾಡಿನಂತೆ ನಗರ ಕಂಡುಬಂದಿತು. 

ಸಿಂದಗಿ, ಹೊರ್ತಿ, ಕಲಕೇರಿ, ಕೊಲ್ಹಾರ, ಬಸವನ ಬಾಗೇವಾಡಿ, ಆಲಮಟ್ಟಿ, ತಾಳಿಕೋಟೆ, ತಾಲತವಾಡ, ಮುದ್ದೇಬಿಹಾಳದಲ್ಲೂ ಗಾಳಿಯೊಂದಿಗೆ ಮಳೆ ಸುರಿಯಿತು.

ಗಾಳಿಯ ಪರಿಣಾಮ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಯಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.