ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣದ ಜೊತೆ ಸಂಸ್ಕಾರವಿದ್ದಾಗ ಬೆಲೆ’

Last Updated 14 ಮೇ 2022, 11:14 IST
ಅಕ್ಷರ ಗಾತ್ರ

ವಿಜಯಪುರ: ಮನುಷ್ಯನಿಗೆ ಶಿಕ್ಷಣವಿದ್ದರೆ ಮಾತ್ರ ಬೆಲೆ ಬರಲು ಸಾಧ್ಯವಿಲ್ಲ, ಶಿಕ್ಷಣದ ಜೊತೆ ಸಂಸ್ಕಾರವಿದ್ದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ ಎಂದುಎಕ್ಸಲೆಂಟ್ ವಿದ್ಯಾ ಸಮೂಹ ಸಂಸ್ಥೆ ಅಧ್ಯಕ್ಷ ಬಸವರಾಜ ಕವಲಗಿ ಹೇಳಿದರು.

ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ನಡೆದ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಂತಿ ಕುಟೀರದ ಮಹಾರಾಜರ ಆಶಯದಂತೆ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ನೀತಿವಂತ, ಬುದ್ಧಿವಂತ ಹಾಗೂ ಆರೋಗ್ಯವಂತರಾಗಬೇಕು. ಸರ್ಕಾರವು ಸಹ ಮಕ್ಕಳಿಗೆ ಸಂಸ್ಕಾರ ಬೆಳೆಸುವಂತಹ ಬೇಸಿಗೆ ಶಿಬಿರಗಳನ್ನು ಏರ್ಪಡಿಸಿದರೆ ಸಮಾಜದ ಅಭಿವೃದ್ಧಿ ಖಂಡಿತವಾಗಿಯೂ ಆಗುತ್ತದೆ ಎಂದರು.

ಪ್ರಸ್ತುತ ದಿನಮಾನಗಳಲ್ಲಿ ಅನೇಕ ಬೇಸಿಗೆ ಶಿಬಿರಗಳು ನಡೆಯುತ್ತವೆ ಆದರೆ, ಶಾಂತಿ ಕುಟೀರದಲ್ಲಿ ನಡೆಯುವ ಬೇಸಿಗೆ ಶಿಬಿರವು ವಿಶಿಷ್ಠ ಮತ್ತು ವಿಭಿನ್ನವಾಗಿರುತ್ತದೆ ಎಂದು ಹೇಳಿದರು.

ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳನ್ನು ಬೋಧಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಮಾರ್ಗದರ್ಶನ ನೀಡಿ ಮಕ್ಕಳನ್ನು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿಸುತ್ತಿರುವುದು ಶ್ಲಾಘನೀಯ ಎಂದರು.

ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಎನ್.ಎಂ. ಬಿರಾದಾರ, ಮಕ್ಕಳಿಗೆ ಪ್ರಾಮಾಣಿಕವಾಗಿ ಬದುಕು ಕಟ್ಟಿಕೊಳ್ಳಲು ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.

ಶಿಬಿರದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರದ ಜೊತೆಗೆ ಶಿಲ್ಡ್‌ ಅನ್ನು ವಿತರಿಸಲಾಯಿತು.ವಿದ್ಯಾರ್ಥಿಗಳು ವಿವಿಧ ಯೋಗಾಸನ, ನೃತ್ಯ, ಕೋಲಾಟ, ಲೇಸಿಂ ನೃತ್ಯ ಪ್ರದರ್ಶಿಸಿದರು.

ಜ್ಯೋತಿ ಪಾಟೀಲ್, ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಅಧ್ಯಕ್ಷರಾದ ಲಕ್ಷ್ಮೀ ಬಾಯಿ ಎಸ್. ನಾನಾವಟೆ, ಆಶ್ರಮದ ಮುಖ್ಯಸ್ಥರಾದ ಕೃಷ್ಣಾ ಸಂಪಗಾವಂಕಾರ್, ರಮೇಶ್ ಕನ್ನೂರು, ಭಾರತೀಯ ಸುರಾಜ್ಯ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಕುಲಕರ್ಣಿ, ಶಾಂತಿ ಕುಟೀರ ಟ್ರಸ್ಟ್‌ನ ಅಧ್ಯಕ್ಷ ಗೋವಿಂದ ಬಾಹೇತಿ, ಕುಮಾರ ಎಸ್. ನಾನಾವಟೆ, ಷಣ್ಮುಖರಾವ್ ಜಗತಾಪ್‍ರಾವ್‍, ಶ್ರೀನಿವಾಸ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT