ತಾಳಿಕೋಟೆ: ಪಟ್ಟಣದ ಬಸವನಗರದಲ್ಲಿ ಪೊಲೀಸ್ ಠಾಣೆ ಬಳಿಯಲ್ಲಿ ಕನಕಗಿರಿಯವರ ಮನೆಯಿಂದ ಮೋಲಾ ಮೇಸ್ತ್ರಿಯವರ ಮನೆಗೆ ಹೋಗುವ ರಸ್ತೆಯ ಆರಂಭದಲ್ಲಿಯೇ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯಲ್ಲಿ ನೀರು ನಿಲ್ಲುತ್ತದೆ.

ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ನೂರಾರು ಜನರು, ಈ ನೀರಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಮಳೆ ನೀರು, ಚರಂಡಿ ನೀರು ನಳ ಬಂದಾಗ ನಲ್ಲಿ ನೀರು ಇವೆಲ್ಲ ಸೇರಿಕೊಂಡು ಇಲ್ಲೊಂದು ನೀರಿನ ಹೊಂಡ ನಿರ್ಮಾಣವಾಗುತ್ತದೆ. ಇತ್ತೀಚೆಗೆ 24X7 ಯೋಜನೆಯ ಪೈಪ್ ಲೈನ್ ಹಾಕುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಹದೆಗೆಟ್ಟಿದೆ. ಸದಾ ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗಿ ನಾನಾ ರೋಗಗಳ ಉಲ್ಬಣಕ್ಕೂ ಕಾರಣವಾಗಿದೆ. ಆದ್ದರಿಂದ ಮಳೆ ನೀರು, ಚರಂಡಿ ನೀರು ಹರಿದುಹೋಗಲು ತಕ್ಕ ವ್ಯವಸ್ಥೆ ಮಾಡಿಕೊಡಲು ಕೋರಿಕೆ.

–ಕುರಿ ಅಕ್ಕನವರು, ಮೋಲಾಸಾಬ ಶೇಕ್, ಈರಯ್ಯ ಮಠ, ಅರ್ಜುನ ರಾಠೋಡ, ಅನಿಲ ಕಲಾ, ಸುಭಾಸ ಕಲಾಲ, ಪರಶುರಾಮ ಪೂಜಾರಿ, ಓಣಿಯ ನಿವಾಸಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.