ತಾಳಿಕೋಟೆ: ಪಟ್ಟಣದ ಎಸ್ ಕೆ ಪಿಯು ಕಾಲೇಜ್ ಮೈದಾನದಲ್ಲಿ ಸ್ಥಳೀಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿರುವ ಎರಡು ದಿನಗಳ ತಾಳಿಕೋಟಿ ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಷನ್-2 ಪಂದ್ಯಾವಳಿಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಚೇರ್ಮನ್ ವಿ.ಸಿ.ಹಿರೇಮಠ ಶನಿವಾರ ಉದ್ಘಾಟಿಸಿದರು.
ಬಹುಮಾನ ವಿತರಣೆ ಇಂದು
ತಾಳಿಕೋಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಯುತ್ತಿರುವ ಎರಡು ದಿನಗಳ ತಾಳಿಕೋಟಿ ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಜನ್-2 ಪಂದ್ಯಾವಳಿಯ ಬಹುಮಾನ ವಿತರಣೆ ಸಮಾರಂಭವು ಡಿ.22ರಂದು ಸಂಜೆ 4ಕ್ಕೆ ನೆರವೇರಲಿದೆ. ಅಧ್ಯಕ್ಷತೆಯನ್ನು ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ಗುರುರಾಜ ಮಾಣೆ ವಹಿಸುವರು. ಅಂತರರಾಷ್ಟ್ರೀಯ ಕ್ರೀಡಾಪಟು ಸಂಜೀವ ಹಜೇರಿ ಅವರನ್ನು ಗೌರವಿಸಲಾಗುವುದು.