ಬುಧವಾರ, ಜನವರಿ 20, 2021
26 °C
ಹಿರೇಮಸಳಿ ಗ್ರಾಮದ ನೂತನ ಗ್ರಂಥಾಲಯ ಉದ್ಘಾಟನೆ

ಶಿಕ್ಷಣದಿಂದ ದೇಶದ ಪ್ರಗತಿ: ಯಶವಂತರಾಯಗೌಡ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಹೀಗಾಗಿ ಶಾಸಕರ ನಿಧಿಯನ್ನು ಸಮುದಾಯ ಭವನಗಳಿಗೆ ಬದಲಾಗಿ ಶಿಕ್ಷಣಕ್ಕೆ ಮೀಸಲಿಡಲು ತೀರ್ಮಾನಿಸಿದ್ದೇನೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಿದ್ದಪ್ಪ ಭೀಮರಾಯ ಕಲ್ಲೂರ ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕರ ನಿಧಿ ₹2 ಕೋಟಿಯಲ್ಲಿ ₹ 70 ಲಕ್ಷಕ್ಕೂ ಅಧಿಕ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವೆ. ಮುಂದೆಯೂ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಶಾಸಕರ ನಿಧಿ ಮೀಸಲಿಡುವೆ ಎಂದ ಅವರು ಹೇಳಿದರು.

ಹಿರೇಮಸಳಿ ನೂತನ ಗ್ರಂಥಾಲಯಕ್ಕೆ ₹ 2 ಲಕ್ಷ ಮೊತ್ತದಲ್ಲಿ ಆಯ್ದ ಪುಸ್ತಕ ಖರೀದಿಸಿ ಕೊಡುವುದಾಗಿ ಭರವಸೆ ನೀಡಿದರು.

ಇಂಡಿ ವಿಧಾನಸಭೆ ಕ್ಷೇತ್ರ ಸರ್ವಾಂಗೀಣ ಪ್ರಗತಿ ಸಾಧಿಸುತ್ತಿದೆ. ಲಿಂಬೆ ಅಭಿವೃದ್ಧಿ ನಿಗಮ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದಾಗಿ ಸಾಕಷ್ಟು ಅನುಕೂಲವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವೆ. ಗ್ರಾಮಸ್ಥರ ಮನವಿ ಮೇರೆಗೆ ಹಿರೇಮಸಳಿ ಹಳ್ಳದ‌ ಸೇತುವೆ ನಿರ್ಮಿಸುವ ಭರವಸೆ ನೀಡಿದರು.

ಮಾಜಿ ಶಾಸಕ ಆರ್.ಆರ್. ಕಲ್ಲೂರ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಶಾಸಕನಾಗಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿರುವೆ. ಇದೀಗ ಶಾಸಕ ಯಶವಂತರಾಯಗೌಡ ಪಾಟೀಲ ಆ ಅಭಿವೃದ್ಧಿ ಕಾರ್ಯ ಮುನ್ನಡೆಸುತ್ತಿದ್ದಾರೆ. ಅವರು ಇನ್ನೊಮ್ಮೆ ಶಾಸಕರಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮೆರೆಯಬೇಕು ಎಂದರು.

ಶರಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಖ್ಯಾತ ವೈದ್ಯ ಡಾ.ಎಂ.ಎಸ್. ಕಲ್ಲೂರ, ಸಿದ್ರಾಯ ಭಾವಿಕಟ್ಟಿ, ಎಸ್. ಬಿ. ಕಲ್ಲೂರ, ಪುಂಡಲಿಕ ಕಪಾಲಿ, ಎಂ.ಐ. ಬಗಲಿ, ಪೀರು ಮನಮಿ, ಮಹಾದೇವಪ್ಪ ಏವೂರ, ಪರಶುರಾಮ ಭಾಸಗಿ, ಶಿಕ್ಷಕ ಐ.ಎಸ್. ಮಾಶಾಳ, ಪ್ರವೀಣ ಮನಮಿ, ಪಿಡಿಒ ಸಿದ್ರಾಮ ಸಿನಿಖೇಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.