ವಿಜಯಪುರ: ಸಾಹಿತ್ಯದಲ್ಲೂ ಜಾತಿ ವಾಸನೆ ಸೂಸುತ್ತಿರುವುದು ದುರಂತವೇ ಸರಿ. ಇಂದಿನ ಸಾಹಿತ್ಯ ಕ್ಷೇತ್ರದಲ್ಲಿರುವ ತಾರತಮ್ಯ, ಗೊಂದಲಗಳು ರಾಜಕೀಯ ಕ್ಷೇತ್ರವನ್ನು ಮೀರಿಸುವಂತಿದೆ ಎಂದು ಬಂಡಾಯ ಸಾಹಿತಿ ಡಾ. ಸತ್ಯಾನಂದ ಪಾತ್ರೋಟ ಹೇಳಿದರು.

ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಭಾನುವಾರ ಸಾಹಿತಿ ಪ್ರೊ ದೊಡ್ಡಣ್ಣ ಭಜಂತ್ರಿ ಅವರ ಮೂರು ಕೃತಿಗಳ ಲೋಕಾರ್ಪಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಬುರ್ಗಿ ವಿವಿ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ ಎಚ್.ಟಿ. ಪೋತೆ ಮಾತನಾಡಿ, ಅಕ್ಷರ ಕಲಿಸಿದ ಗುರುವಿನ ಸಾಹಿತ್ಯ ಕೃತಿಗೆ ಮುನ್ನುಡಿ ಬರೆದು, ಲೋಕಾರ್ಪಣೆ ಗೊಳಿಸಿದ್ದು ಅಪರೂಪದ ಕ್ಷಣ ಎಂದರು.

ಪ್ರೊ ದೊಡ್ಡಣ್ಣ ಭಜಂತ್ರಿ ಅವರ ‘ಜಾನಪದ ಸಂಭ್ರಮ’ ‘ಸೂಜಿ ಮಲ್ಲಿಗೆ’ ‘ಸಂಗತ’ ಕೃತಿಗಳ ಕುರಿತು ಮೋಹನ ಕಟ್ಟಿಮನಿ, ಡಾ. ವೈ. ಎಂ. ಯಾಕೊಳ್ಳಿ, ಡಾ. ರಮೇಶ ತೇಲಿ ಅವರು ಪರಿಚಯಿಸಿದರು.

ಲೇಖಕ ದೊಡ್ಡಣ್ಣ ಭಜಂತ್ರಿ ಮಾತನಾಡಿ, ‘ನಾನು ಇಲ್ಲಿಯವರೆಗೆ ಬರೆದ ಸಾಹಿತ್ಯದ ವಿವಿಧ ಲೇಖನಗಳು, ಕ್ರೂಢೀಕರಿಸಿ ನನ್ನ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡುವ ಉದ್ದೇಶದಿಂದ ಡಾ. ಎಚ್. ಟಿ. ಪೋತೆ ಮತ್ತು ಡಾ. ಅಶೋಕ ನರೋಡೆಯವರ ಪ್ರೇರಣೆಯಿಂದ ಈ ಕೃತಿಗಳು ಲೋಕಾರ್ಪಣೆ ಗೊಂಡಿವೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳುವಂತೆ ಒಂದು ಪುಸ್ತಕ ಪ್ರಕಟವಾಗಬೇಕಾದರೆ ಒಂದು ಮಗು ಜನಿಸುದಂತೆ ಎನ್ನುವ ಮಾತು ಸತ್ಯವಾದದು ಎಂದರು.

ಪ್ರಮುಖರಾದ ವಿದ್ಯಾಧರ ಸಾಲಿ, ಪಿ.ಎಸ್.ಕಡೆಮನಿ, ಡಾ. ಮಾಗನಗೇರಿ, ಅನಿಲ ಹೊಸಮನಿ, ಅಭಿಷೇಕ ಚಕ್ರವರ್ತಿ, ಸುಜಾತಾ ಚಲುವಾದಿ, ಇಂದುಮತಿ ಲಮಾಣಿ, ವಿದ್ಯಾವತಿ ಅಂಕಲಗಿ, ಡಾ. ಎಂ. ಎಸ್. ಮದಭಾವಿ, ಡಾ.ವಿ. ಡಿ. ಐಹೊಳಿ, ಡಾ. ಸಂಗಮೇಶ ಮೆತ್ರಿ, ಜಂಬೂನಾಥ ಕಂಚಾಣಿ, ಶಾನಾಯಿ ವಾದಕ ಗಿರಿಮಲ್ಲಪ್ಪ ಭಜಂತ್ರಿ, ವಿ. ಎಸ್. ಹಿರೇಮಠ, ಶಾರದಾ ಐಹೊಳ್ಳಿ, ಮನು ಪತ್ತಾರ, ಡಾ. ಸುಭಾಷ್ ಕೊಣ್ಣೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.