ದೇವರಹಿಪ್ಪರಗಿ: ‘ವೀರಶೈವ, ಲಿಂಗಾಯತ ಎಂಬ ಭೇದಗಳಿಗೆ ಕಿವಿಗೊಡದೇ, ನಾವೆಲ್ಲ ಒಂದೇ ಎಂಬ ಭಾವದಿಂದ ಮುನ್ನಡೆಯಬೇಕು’ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀ ಹೇಳಿದರು.

ತಾಲ್ಲೂಕಿನ ಹರನಾಳ ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿಯಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನದ ಲೋಕಾರ್ಪಣೆ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ರೆಡ್ಡಿ ಸಮುದಾಯದವರು ಎಲ್ಲರ ಏಳಿಗೆಯನ್ನು ಬಯಸುವವರು. ಮಹಾಸಾದ್ವಿ ಮಲ್ಲಮ್ಮ ಕೊರಳಲ್ಲಿ ಲಿಂಗ ಧರಿಸಿ ಲಿಂಗ ಸಂಸ್ಕೃತಿ ಬೆಳೆಸಿದವಳು. ಆದ್ದರಿಂದ ಸಮುದಾಯ ಯಾವುದೇ ಪ್ರಚೋದನೆಗಳಿಗೆ ಒಳಗಾಗವಾರದು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಶರಣಬಸಪ್ಪ ದರ್ಶನಾಪೂರ, ‘ರಡ್ಡಿ ಸಮುದಾಯ ಎಲ್ಲ ಸಮುದಾಯಗಳೊಂದಿಗೆ ಸಹಕಾರದಿಂದ ಇದ್ದು ಎಲ್ಲರ ವಿಶ್ವಾಸಕ್ಕೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಕಾರ ನೀಡುವುದು ಅಗತ್ಯ’ ಎಂದರು.

ಶಾಸಕರಾದ ರಾಜುಗೌಡ ಪಾಟೀಲ, ಶರಣಗೌಡ ಕಂದಕೂರ, ಮಾಜಿಶಾಸಕ ಸೋಮನಗೌಡ ಪಾಟೀಲ ಮಾತನಾಡಿದರು.

ವೈದ್ಯ ಪ್ರಭುಗೌಡ ಲಿಂಗದಳ್ಳಿ ಸ್ವಾಗತಿಸಿದರು. ಯಶವಂತ ಬಡಿಗೇರ ಪ್ರಾರ್ಥಿಸಿದರು. ಶಂಕರಗೌಡ ಕೋಟಿಖಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಂದಗಿಯ ಪ್ರಭುಸಾರಂಗದೇವಶ್ರೀ, ಯಂಕಂಚಿಶ್ರೀ, ಆಲಮೇಲ ಚಂದ್ರಶೇಖರಶ್ರೀ, ಕನ್ನೋಳ್ಳಿ ಸಿದ್ಧಲಿಂಗಶ್ರೀ, ಮಹಾಂತೇಶ ಬಿರಾದಾರ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ, ವಿಜಯಪುರ ಹೇ.ಮ. ಸಂಸ್ಥೆ ಅಧ್ಯಕ್ಷ ಸುರೇಶ ದೇಸಾಯಿ, ಮಲ್ಲಮ್ಮ ದೇವಸ್ಥಾನ ಸಮಿತಿಯ ಭೀಮನಗೌಡ ಬಿರಾದಾರ, ನಿಂಗನಗೌಡ ಹುಲಸಗುಂದ, ವಿಠ್ಠಲ ಯಾತಗಿರಿ, ಸಂಗನಗೌಡ ಹುಲಸಗುಂದ, ಪ್ರಕಾಶ ಯಾತಗಿರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವನಗೌಡ ಯಾತಗಿರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.