ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಢರಪುರಕ್ಕೆ ರೈಲು ಸಂಚಾರ ಆರಂಭ

Published 5 ಸೆಪ್ಟೆಂಬರ್ 2023, 14:17 IST
Last Updated 5 ಸೆಪ್ಟೆಂಬರ್ 2023, 14:17 IST
ಅಕ್ಷರ ಗಾತ್ರ

ವಿಜಯಪುರ: ಮೈಸೂರು–ಸೋಲಾಪುರ–ಮೈಸೂರು ನಡುವೆ ನಿತ್ಯ ಸಂಚರಿಸುವ ‘ಗೋಳಗುಮ್ಮಟ ಎಕ್ಸ್‌ಪ್ರೆಸ್‌’ ರೈಲು (16535/16536) ಮಹಾರಾಷ್ಟ್ರದ ಪಂಢರಪುರದವರೆಗೆ ಸಾಗಲಿದ್ದು, ಸಂಸದ ರಮೇಶ ಜಿಗಜಿಣಗಿ ಮಂಗಳವಾರ ಹಸಿರು ನಿಶಾನೆ ತೋರಿದರು.

ಮೈಸೂರಿನಿಂದ ಇಲ್ಲಿನ ರೈಲು ನಿಲ್ದಾಣಕ್ಕೆ ಬಂದ ರೈಲು ಪ್ರಯಾಣಿಕರನ್ನು ಹತ್ತಿಸಿಕೊಂಡು ಪಂಢರಪುರದತ್ತ ಹೊರಡುವ ಮುನ್ನ ಶ್ವೇತ ವಸ್ತ್ರಧಾರಿ ವಿಠಲನ ಭಕ್ತರು ತಾಳ, ತಂಬೂರಿ, ಹಾರ್ಮೋನಿಯಂ ನುಡಿಸುವ ಮೂಲಕ ಅಭಂಗಗಳನ್ನು ಹಾಡುತ್ತಾ ನರ್ತಿಸಿದರು.

ಮಹಾರಾಷ್ಟ್ರದ ಪಂಢರಪುರದವರೆಗೆ ‘ಗೋಳಗುಮ್ಮಟ ಎಕ್ಸ್‌ಪ್ರೆಸ್‌’ ರೈಲು ಸಂಚಾರಕ್ಕೆ ಮಂಗಳವಾರ ಸಂಸದ ರಮೇಶ ಜಿಗಜಿಣಗಿ ಹಸಿರು ನಿಶಾನೆ ತೋರಿದರು
–ಪ್ರಜಾವಾಣಿ ಚಿತ್ರ
ಮಹಾರಾಷ್ಟ್ರದ ಪಂಢರಪುರದವರೆಗೆ ‘ಗೋಳಗುಮ್ಮಟ ಎಕ್ಸ್‌ಪ್ರೆಸ್‌’ ರೈಲು ಸಂಚಾರಕ್ಕೆ ಮಂಗಳವಾರ ಸಂಸದ ರಮೇಶ ಜಿಗಜಿಣಗಿ ಹಸಿರು ನಿಶಾನೆ ತೋರಿದರು –ಪ್ರಜಾವಾಣಿ ಚಿತ್ರ

ಹಣೆ ಮೇಲೆ ‘ಗೋಪಿ ಚಂದನ’ ಧರಿಸಿದ ಸಂಸದ ರಮೇಶ ಜಿಗಜಿಣಗಿ ವಿಠಲನ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಸಕ ವಿಠಲ ಕಟಕಧೋಂಡ, ನೈರುತ್ಯ ರೈಲ್ವೆ ಹುಬ್ಬಳ್ಳಿ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಸಂತೋಷ್‌ ಕುಮಾರ್‌ ವರ್ಮಾ, ಸಹಾಯಕ ವಾಣಿಜ್ಯ ವ್ಯವಸ್ಥಾಪಕಿ ನಿವೇದಿತಾ ಬಾಲರಡ್ಡಿ, ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ದಾಮೋದರ ದಾಸ ರಾಠಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT