ವಿಜಯಪುರ: ಕರ್ತವ್ಯದ ವೇಳೆ ದರ್ಪ, ದೌರ್ಜನ್ಯ ತೋರದೆ ನ್ಯಾಯಬದ್ಧವಾಗಿ ಯಾವುದೇ ರಾಗ, ದ್ವೇಷವಿಲ್ಲದೆ ಉತ್ತಮ ಕೆಲಸ ನಿರ್ವಹಿಸಬೇಕು ಎಂದುಬೆಳಗಾವಿ ಉತ್ತರ ವಲಯದ ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದವಿಜಯಪುರ ತಾತ್ಕಾಲಿಕ ಪೊಲೀಸ್ ತರಬೇತಿ ಕೇಂದ್ರದ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷಣಾರ್ಥಿಗಳು ಹಾಗೂ ಬಾಗಲಕೋಟೆ ತಾತ್ಕಾಲಿಕ ಪೊಲೀಸ್ ತರಬೇತಿಶಾಲೆಯ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ನಡೆಯಬೇಕು, ಕೆಲಸವನ್ನು ಪ್ರೀತಿಸಬೇಕು. ಖಾಕಿ ಬಟ್ಟೆ ಧರಿಸುವ ಗೌರವ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಿಮಗೆ ಖಾಕಿ ಬಟ್ಟೆ ಹಾಕಲು ಪ್ರೇರೇಪಿಸಿದ ನಿಮ್ಮ ಪರಿವಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.

ಕಾರಾಗೃಹ ಇಲಾಖೆಗೆ ನೇಮಕವಾದವರು ಕರ್ತವ್ಯದ ವೇಳೆ ಕಾರಾಗೃಹ ಬಂಧಿಗಳ ಮನಪರಿವರ್ತನೆ ಮಾಡುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ಇಲಾಖೆಗೆ ಹೊಸದಾಗಿ ಸೇರ್ಪಡೆಯಾದವರಿಗೆ ನಾಲ್ಕೈದು ವರ್ಷಗಳಲ್ಲಿ ಕ್ವಾಟರ್ಸ್ ಲಭಿಸಲಿದೆ. ಆ ಸಂದರ್ಭದಲ್ಲಿ ತಮ್ಮ ಪರಿವಾರ ಮತ್ತು ಕೆಲಸವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಇಲಾಖೆ ಮತ್ತು ಕುಟುಂಬಕ್ಕೆ ಗೌರವ ತರುವ ಕೆಲಸ ಮಾಡಬೇಕು ಎಂದು ಹೇಳಿದರು.

ತರಬೇತಿ ಅವಧಿಯಲ್ಲಿ ಪ್ರತಿಯೊಬ್ಬರ ಮಾನಸಿಕ, ದೈಹಿಕ ಮತ್ತು ವ್ಯಕ್ತಿತ್ವ ವಿಕಸನದ ಕೊರತೆಯನ್ನು ನೀಗಿಸಲಾಗಿದೆ. ಇನ್ನು ಮುಂದೆ ಹೊಸದಾಗಿ ಯಾವುದೇ ಕೊರತೆ ಬೆಳೆಸಿಕೊಳ್ಳಬಾರದು. ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ನೌಕರಿ ನಿಮ್ಮ ಕೈಯಲ್ಲೇ ಇರುತ್ತದೆ ಎಂದರು.

ಟಿಪಿಟಿಎಸ್ ಪ್ರಾಂಶುಪಾಲ ಡಾ.ರಾಮ ಅರಸಿದ್ದಿ ಅವರುಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ತರಬೇತಿ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದವರಿಗೆ ಐಜಿಪಿ ರಾಘವೇಂದ್ರ ಸುಹಾಸ್ಬಹುಮಾನ ವಿತರಿಸಿದರು.

ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.