ಭಾನುವಾರ, ಏಪ್ರಿಲ್ 11, 2021
33 °C
ಹಾಲುಮತ ಸಮಾಜದ ಗ್ರಾ.ಪಂ. ಸದಸ್ಯರಿಗೆ ಸನ್ಮಾನ

‘ಸಂಘಟಿತರಾದರೆ ಸಮಾಜದ ಪ್ರಗತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದ್ದೇಬಿಹಾಳ: ಹಾಲುಮತ ಸಮಾಜದ ಕುರುಬರು ಒಂದಾಗಿ ಒಗ್ಗಟ್ಟಿನಿಂದ ನಡೆದರೆ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.

ಅವರು ಭಾನುವಾರ ಪಟ್ಟಣದ ಮಾತೋಶ್ರೀ ಸಂಗನಬಸಮ್ಮ ಮದರಿ ಮಂಗಲ ಕಾರ್ಯಾಲಯದಲ್ಲಿ ತಾಲ್ಲೂಕು ಕುರುಬರ ಸಂಘದ ಆಶ್ರಯದಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಹಾಲುಮತ ಕುರುಬ ಸಮಾಜದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಕುರುಬರು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಂಘಟಿತರಾಗಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಈಗ ಗ್ರಾಮ ಪಂಚಾಯಿತಿಗೆ ಆಯ್ಕೆಯಾದಂತೆಯೇ, ತಾಲ್ಲೂಕು ಪಂಚಾಯಿತಿಗೆ, ಜಿಲ್ಲಾ ಪಂಚಾಯಿತಿಗೆ, ಕೊನೆಗೆ ಶಾಸಕರಾಗಿ ಆಯ್ಕೆಯಾಗುವತನಕ ಒಂದಾಗಿ ನಡೆಯಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ಹಾಲುಮತ ಕುರುಬ ಸಮಾಜವರು ಸಂಘಟಿತರಾಗಬೇಕು. ಕುರುಬ ಸಮಾಜ ಸೇರಿದಂತೆ ತಾಲ್ಲೂಕಿನ ಯಾವುದೇ ಸಮಾಜದ ಕಡುಬಡವರ ಶಿಕ್ಷಣಕ್ಕಾಗಿ ತಾವು ಪ್ರಾರಂಭಿಸಿರುವ ಮೂರು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದರು.

ಸಭೆಯನ್ನುದ್ದೇಶಿಸಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ, ವಾಣಿಜ್ಯ ತೆರಿಗೆ ಅಧಿಕಾರಿ ಸಂಗಮೇಶ ಜೂಲಗುಡ್ಡ, ರೈತಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಡಾ.ಸವಿತಾ ಒಡೆಯರ, ಪ್ರಾಚಾರ್ಯರಾದ ಎಸ್.ಕೆ.ಹರನಾಳ, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕ್ವಾರಿ, ಕೆಂಚಪ್ಪಣ್ಣ ಬಿರಾದಾರ, ಮಲಕೇಂದ್ರಗೌಡ ಪಾಟೀಲ, ಎಸ್.ಎಸ್.ಹುಲ್ಲೂರ, ಎಂ.ಎನ್.ತಳ್ಳಿಕೇರಿ ಮಾತನಾಡಿದರು.

ಗುಡದಪ್ಪ ಕಮರಿ, ಬಿ.ಕೆ.ಬಿರಾದಾರ, ಸಿದ್ದಾಪೂರ ಒಡೆಯರ ಸ್ವಾಮೀಜಿ, ಸಂತೋಷ ನಾಯ್ಕೋಡಿ, ಸಂಗಮ್ಮ ದೇವರಳ್ಳಿ, ಶ್ರೀದೇವಿ ಮದರಿ, ನಿಂಗಪ್ಪಗೌಡ ಬಪ್ಪರಗಿ, ಡಾ.ಸಿ.ಎಚ್.ನಾಗರಬೆಟ್ಟ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು