ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಪ್ಪ ಹರ್ಡೇಕರ ಪುತ್ಥಳಿ ಅನಾವರಣ

Published 30 ಜೂನ್ 2023, 13:32 IST
Last Updated 30 ಜೂನ್ 2023, 13:32 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಸ್ಥಾಪಿಸಿರುವ ಕರ್ನಾಟಕದ ಗಾಂಧಿ ಮಂಜಪ್ಪ ಹರ್ಡೇಕರ ಅವರು ಚರಕದಿಂದ ನೂಲುತ್ತಿರುವ ಅಂದಾಜು ₹ 2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಿಮೆಂಟ್‌ ಪುತ್ಥಳಿಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಶುಕ್ರವಾರ ಅನಾವರಣಗೊಳಿಸಿದರು.

 ಪತ್ರಕರ್ತ ಶಂಕರ ಜಲ್ಲಿ ಮಾತನಾಡಿ, ‘ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧವಾಗಿರುವ ಮಂಜಪ್ಪ ಹರ್ಡೇಕರ ಅವರ ಕರ್ಮಭೂಮಿಯಲ್ಲಿ ಪುತ್ಥಳಿ ಸ್ಥಾಪಿಸಿದ್ದು ಸ್ವಾಗತಾರ್ಹ.  ಪತ್ರಕರ್ತರಾಗಿ ಹಲವಾರು ಪತ್ರಿಕೆಯನ್ನು ಆರಂಭಿಸಿ ಮುನ್ನೆಡೆಸಿ, ಕಾಗದವನ್ನು ಸ್ವತಃ ತಯಾರಿಸಿ ಅಕ್ಷರ ಜ್ಞಾನವನ್ನು ಪ್ರಚುರಪಡಿಸಿದ್ದರು’ ಎಂದರು.

ರಮೇಶ ರೇಶ್ಮಿ, ರಮೇಶ ಆಲಮಟ್ಟಿ, ಎಂ.ಡಿ.ಬಾಗಲಕೋಟೆ, ವಿ.ಎಂ.ಯಾಳವಾರ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಎಸ್.ಐ. ಗಿಡ್ಡಪ್ಪಗೋಳ, ಎನ್.ಎಸ್.ಬಿರಾದಾರ, ಮಲ್ಲೇಶಿ ರಾಠೋಡ, ಮಾರುತಿ ವಡ್ಡರ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT