ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ: ಮೇಲ್ಮನವಿ ನ್ಯಾಯಾಲಯ ಪೀಠ ಸ್ಥಾಪನೆ

Published : 26 ಸೆಪ್ಟೆಂಬರ್ 2024, 15:46 IST
Last Updated : 26 ಸೆಪ್ಟೆಂಬರ್ 2024, 15:46 IST
ಫಾಲೋ ಮಾಡಿ
Comments

ಸಿಂದಗಿ: ‘ಪಟ್ಟಣದ ನ್ಯಾಯಾಲಯದ ವಕೀಲರ ಬಹುದಿನಗಳ ಆಗ್ರಹದ ಮೇರೆಗೆ ಇಂಡಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಮೇಲ್ಮನವಿ ನ್ಯಾಯಾಲಯ ಪೀಠವನ್ನು ಸಿಂದಗಿಯಲ್ಲಿ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವೆ’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಇಲ್ಲಿಯ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ವಕೀಲರ ಸಂಘ ಹಮ್ಮಿಕೊಂಡಿದ್ದ ಉಪವಿಭಾಗಾಧಿಕಾರಿಗಳ ಇಂಡಿ ಮೇಲ್ಮನವಿ ನ್ಯಾಯಾಲಯ ಸಿಂದಗಿ ಪೀಠವನ್ನು ಉದ್ಘಾಟಿಸಿ ಮಾತನಾಡಿದ ಅವರು, ‌‘ಈ ಪೀಠದ ಸ್ಥಾಪನೆಯಿಂದಾಗಿ ಇಂಡಿ ಪಟ್ಟಣಕ್ಕೆ ಹೋಗುವ ತೊಂದರೆ ತಪ್ಪುತ್ತದೆ. ಸಿವಿಲ್ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳಲು ಸಹಕಾರಿಯಾಗಲಿದೆ’ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿದರು. ಹೆಚ್ಚುವರಿ ಸರ್ಕಾರಿ ವಕೀಲ ಬಿ.ಬಿ.ನೆಲ್ಲಗಿ, ಸಿಂದಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ದೇವರಹಿಪ್ಪರಗಿ ತಹಶೀಲ್ದಾರ್ ಪ್ರಕಾಶ ಸಿಂದಗಿ, ಆಲಮೇಲ ತಹಶೀಲ್ದಾರ್ ವಿಜಯಕುಮಾರ ಕೊರಲಗುಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT