ಕೊಲ್ಹಾರ: ಶಿಕ್ಷಕರು ಹಾಗೂ ಸೈನಿಕರು ಈ ದೇಶದ ಸಂಪತ್ತು ಎಂದು ಬಸವನ ಬಾಗೇವಾಡಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್ ಎಸ್ ಅವಟಿ ಹೇಳಿದರು.

ತಾಲ್ಲೂಕಿನ ಹಣಮಾಪೂರದ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರ ಬೀಳ್ಕೊಡುಗೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೂರು ದಶಕಗಳ ಕಾಲ ಮಕ್ಕಳಿಗೆ ಒಳ್ಳೆಯ ಕ್ರೀಡಾ ತರಬೇತಿ ನೀಡಿ, ಅವರನ್ನು ರಾಜ್ಯ ಮಟ್ಟದಲ್ಲಿ ಗ್ರಾಮದ ಗುರುತಿಸುವಂತೆ ಮಾಡಿದ ದೈಹಿಕ ಶಿಕ್ಷಕರಾದ ಎಸ್ ಎಂ ಬರಗಿ ಹಾಗೂ ಕೆ.ಜಿ. ಹಳ್ಳೂರ ಅವರ ಶ್ರಮ ಅಪಾರವಾದದ್ದು ಎಂದರು.

ಮೆರವಣಿಗೆ: ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರಾದ ಎಸ್.ಎಂ. ಬರಗಿ, ಕೆ.ಜಿ. ಹಳ್ಳೂರ ಹಾಗೂ ನಿವೃತ್ತ ಯೋಧರಾದ ಈರಣ್ಣ ಹಳ್ಳೂರ, ಮಲ್ಲಪ್ಪ ಮಡಿವಾಳ ಅವರನ್ನು ಎತ್ತಿನ ಗಾಡಿಯಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಮುಖ್ಯ ಶಿಕ್ಷಕ ಆರ್.ಎಸ್. ತುಂಗಳ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮುಖ್ಯ ಶಿಕ್ಷಕ ಸಂಗಮೇಶ ಪೂಜಾರಿ, ನಿವೃತ್ತ ದೈಹಿಕ ಶಿಕ್ಷಕ ಎಸ್.ಎಂ.ಬರಗಿ, ಕೆ.ಜಿ. ಹಳ್ಳೂರ ಮಾತನಾಡಿದರು. ಸಂಗಮೇಶ ಕುಬಕಡ್ಡಿ, ಬಾಲಪ್ಪ ಗೂಗಿಹಾಳ ವಿದ್ಯಾರ್ಥಿಗಳ ಅನಿಸಿಕೆ ಹೇಳಿದರು.

ಎಸ್.ಎಲ್. ಪವಾರ ಶಿಕ್ಷಕರ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ವೇ.ಮೂ. ರುದ್ರಸ್ವಾಮಿ ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ನಾಗನಗೌಡ ಬಿರಾದಾರ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆ ಅಧ್ಯಕ್ಷ ವಿ.ಡಿ. ಕೊರಣ್ಣವರ, ಎಸ್.ಎಂ. ಬರಗಿ, ದ್ರಾಕ್ಷಾಯಣಿ ಬರಗಿ, ಕೆ.ಜಿ. ಹಳ್ಳೂರ, ಸುನೀತಾ ಹಳ್ಳೂರ, ಎಸ್.ಎಸ್. ಅವಟಿ, ಸಂಗಮೇಶ ಪೂಜಾರಿ, ಮುತ್ತು ಸಾಹುಕಾರ ಹಳ್ಳೂರ, ಬಾಬು ನರಿಯವರ, ನಿಂಗನಗೌಡ ಪಾಟೀಲ, ಹಣಮಂತಗೌಡ ಕುಪಕಡ್ಡಿ, ಎಂ.ಜಿ. ಪಾಟೀಲ, ಎಂ.ಕೆ. ಚೌದ್ರಿ, ಈರಣ್ಣ ಹಳ್ಳೂರ, ಎಂ.ಎಂ. ಮಡಿವಾಳರ, ಆರ್.ಎಸ್. ತುಂಗಳ, ಮುತ್ತಪ್ಪ ಮುರನಾಳ, ದಾದಮಿ ಅಂಗಡಿ ಉಪಸ್ಥಿತರಿದ್ದರು. ಶಿಕ್ಷಕ ಆರ್.ಟಿ. ಸಜ್ಜನ ಸ್ವಾಗತಿಸಿದರು. ಶಿಕ್ಷಕ ವಿಜಯ ನಿರೂಪಿಸಿದರು. ಶಿಕ್ಷಕ ಪಿ.ಎನ್. ಕೂಡಗಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.