ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ | ಬಾಲಕ ಸಾವು ಪ್ರಕರಣ: ಟ್ರ್ಯಾಕ್ಟರ್‌ ಚಾಲಕನಿಗೆ 6 ತಿಂಗಳ ಜೈಲು

Published 28 ಏಪ್ರಿಲ್ 2024, 15:53 IST
Last Updated 28 ಏಪ್ರಿಲ್ 2024, 15:53 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಟ್ರ್ಯಾಕ್ಟರ್ ಹಾಯ್ದು ಬಾಲಕನೊಬ್ಬ ಸಾವಿಗೀಡಾಗಿದ್ದ ಘಟನೆಯ ಆರೋಪಿಗೆ ಇಲ್ಲಿಯ ಕೋರ್ಟ್‌ ಶಿಕ್ಷೆ ಪ್ರಕಟಿಸಿದೆ.

ತಾಳಿಕೋಟಿ ತಾಲ್ಲೂಕಿನ ಮಿಣಜಗಿ-ಮುದ್ದೇಬಿಹಾಳ ರಸ್ತೆಯಲ್ಲಿ 2018ರ ಜ. 28ರಂದು ಅತಿ ವೇಗದಿಂದ ಬಂದ ಟ್ರ್ಯಾಕ್ಟರ್ ಶಾಂತಾಬಾಯಿ ಜಾಧವ ಅವರ ಪುತ್ರ 11 ವರ್ಷದ ಆಕಾಶ ಎಂಬಾತನ ಮೇಲೆ ಹರಿದು ಆತ ಮೃತಪಟ್ಟಿದ್ದ.

ಆರೋಪ ಸಾಬೀತಾಗಿದ್ದರಿಂದ ರಾಮನಗೌಡ ಮಾಲಿಪಾಟೀಲ್ ಎಂಬಾತನಿಗೆ ಇಲ್ಲಿಯ ಸಿವಿಲ್ ನ್ಯಾಯಾಧೀಶರಾದ ಸಂಪತಕುಮಾರ್ ಬಳೂಲಗಿಡದ ಅವರು 6 ತಿಂಗಳ ಸಾದಾ ಜೈಲು ಹಾಗೂ ₹ 6000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದ ಹಾಗೂ ಫಿರ್ಯಾದಿ ಪರ ಸರ್ಕಾರಿ ವಕೀಲರಾದ ಬಸವರಾಜ ಆಹೇರಿ ವಕಾಲತ್ತು ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT