ನಾಲತವಾಡ: ನಾರಾಯಣಪುರದಿಂದ ಮುದ್ದೇಬಿಹಾಳ ಕಡೆಗೆ ಸಾಗುತ್ತಿದ್ದ ಈಶಾನ್ಯ ಕರ್ನಾಟಕ ಸಾರಿಗೆ ಬಸ್, ಬುಧವಾರ ಸಂಜೆ ಆರೇಶಂಕರ ಕ್ರಾಸ್ ಹತ್ತಿರ ಬೈಕ್ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪಟ್ಟಣ ಪಂಚಾಯ್ತಿಯಲ್ಲಿ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದ ನಾಲತವಾಡ ಪಟ್ಟಣದ 5ನೇ ವಾರ್ಡ್ ನಿವಾಸಿ ಸಂಗಪ್ಪ ಬಸಪ್ಪ ಗೌಡೂರ (28) ಮೃತರು. ಅವರು, ಪರಿಚಯದ ಮಹಿಳೆಯೊಂದಿಗೆ ಬೈಕ್ನಲ್ಲಿ ಆರೇಶಂಕರ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ನಲ್ಲಿ ದ್ದ ಮಹಿಳೆಗೆ ಲಘುವಾಗಿ ಗಾಯಗಳಾಗಿವೆ.

ಮುದ್ದೇಬಿಹಾಳ ಪಿಎಸ್ಐ ಸಂಜೀವ ತಿಪ್ಪಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಮವಾರ ದಿನವೇ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಇದು ಮಾಸುವ ಮುನ್ನವೇ ಬುಧವಾರ ಮತ್ತೇ ಈ ಸರಣಿ ಅಪಘಾತ ನಡೆದಿದೆ. ಮೂರು ದಿನಗಳಲ್ಲಿ ನಾಲತವಾಡ ಪಟ್ಟಣದಲ್ಲಿ ಮೂವರು ರಸ್ತೆ ಅಪಘಾತದಿಂದ ದುರ್ಮರಣಕ್ಕೆ ಈಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.