ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಭುವನೇಶ್ವರಿ ಸರ್ವಾಧ್ಯಕ್ಷೆ

Last Updated 11 ಮಾರ್ಚ್ 2022, 15:36 IST
ಅಕ್ಷರ ಗಾತ್ರ

ವಿಜಯಪುರ: ಮಾರ್ಚ್‌ 26 ಹಾಗೂ 27 ರಂದು ನಗರದಕಂದಗಲ್‌ ಹನುಮಂತರಾಯ ರಂಗಮಂದಿರಲ್ಲಿ ನಡೆಯುವ ವಿಜಯಪುರ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಭುವನೇಶ್ವರಿ ಮೇಲಿನಮಠಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಡಾ.ಭುವನೇಶ್ವರಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಡಾ. ಭುವನೇಶ್ವರಿ ಅವರು ಸಿಂದಗಿ ತಾಲ್ಲೂಕಿನ ಕೊರವಾರದಲ್ಲಿ ಜನಿಸಿದ್ದಾರೆ. ಹೈದರಾಬಾದ್‌ನ ಸೆಂಟ್ರಲ್ ಯುನಿರ್ವಸಿಟಿಯಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 5ನೇ ರ‍್ಯಾಂಕ್ ಪಡೆದು, ಕಂಪ್ಯೂಟರ್‌ನಲ್ಲಿ ಕನ್ನಡದ 45 ಸಾವಿರಕ್ಕೂ ಹೆಚ್ಚು ಶಬ್ದಗಳನ್ನು ಸಂಶೋಧಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಕನ್ನಡದಲ್ಲಿ ಕ್ರಮಬದ್ದವಾದ ಅಂಕಿತನಾಮಗಳನ್ನು ಗುರುತಿಸುವ ನಿಯಮಾವಳಿಗಳನ್ನು ರಚಿಸಿದ್ದಾರೆ.

ರಾಜ್ಯ ಸರ್ಕಾರದಿಂದ 2016-17ರಲ್ಲಿ ಕಿತ್ತೂರರಾಣಿ ಚನ್ನಮ್ಮ ಪ್ರಶಸ್ತಿಯನ್ನು ಪಡೆದಿದ್ದಾರೆ.

ವಿಜಯಪುರದ ಬಿ.ಎಲ್.ಡಿ.ಇ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗಣಕಯಂತ್ರ ವಿಭಾಗದಲ್ಲಿ 25 ವರ್ಷ ಸೇವೆ ಕೊಲ್ಹಾಪುರದ ಸಂಜಯ ಘೋಡಾವತ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ 3 ವರ್ಷ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾಗಿ, ಪಂಢರಪೂರದ ಸ್ವೇರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗದಲ್ಲಿ 2 ವರ್ಷ ಸೇವೆ. ಪ್ರಸಕ್ತ ಬೆಂಗಳೂರಿನ ಬಿ.ಎಂ.ಎಸ್.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಭುವನೇಶ್ವರಿ ಅವರ 425 ಸಂಶೋಧನೆಯ ಪ್ರಬಂಧಗಳನ್ನು ವಿಶ್ವದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಮಂಡನೆಯಾಗಿವೆ. ಕನ್ನಡದಲ್ಲಿ ಶಬ್ದಾಗಾರ ಸಂಶೋಧನೆ ಮಾಡಿದ (ಮಾರ್ಪಾಲಾಜಿಕಲ್ ಪ್ರಬಂಧ) ರಾಜ್ಯದಲ್ಲಿಯೇ ಪ್ರಥಮರಾಗಿದ್ದಾರೆ.

ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿಪದಾಧಿಕಾರಿಗಳಾದ ಡಾ. ಭಾರತಿ ಪಾಟೀಲ, ಡಾ. ವಿ.ಡಿ. ಐಹೊಳ್ಳಿ, ಮಹಾದೇವ ರೆಬಿನಾಳ, ಕೆ. ಸುನಂದಾ, ಡಾ. ಸಂಗಮೇಶ ಮೇತ್ರಿ, ವಿದ್ಯಾವತಿ ಅಂಕಲಗಿ, ಡಾ.ಸುಜಾತಾ ಚಲವಾದಿ, ಅಭಿಷೇಕ ಚಕ್ರವರ್ತಿ, ದಿಲಾವರ ಖಾಜಿ, ದುಂಡಪ್ಪ ನಾಯಕ, ಮಹಮ್ಮದಗೌಸ್‌ ಹವಾಲ್ದಾರ, ರಾಜಶೇಖರ ಕುಚಬಾಳ, ನಿಂಗಣ್ಣ ರೊಳ್ಳಿ, ಕಬೂಲ ಕೊಕಟನೂರ, ಡಾ. ರಮೇಶ ತೇಲಿ, ಸಿದ್ರಾಮಯ್ಯ ಲಕ್ಕುಂಡಿಮಠ, ಡಾ. ಆನಂದ ಕುಲಕರ್ಣಿ, ಆರ್.ಎಲ್. ಕೊಪ್ಪದ, ರಮೇಶ ಆಸಂಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT