ವಿಜಯಪುರ: ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ (07377/07378) ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ಮುಂದಿನ ಡಿಸೆಂಬರ್ ವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಈ ರೈಲುಗಳು ಈಗಿರುವ ಮಾರ್ಗ, ನಿಲುಗಡೆಗಳು ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಯಲಿವೆ. ಅಲ್ಲದೆ, ಜುಲೈ 1ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಪರಿಷ್ಕೃತ ವೇಳಾಪಟ್ಟಿ ಇಂತಿದೆ:

07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ನಿಂದ ಮಧ್ಯಾಹ್ನ 2.35ಕ್ಕೆ ಹೊರಡುವ ಬದಲು 4.45ಕ್ಕೆ ಹೊರಡಲಿದೆ. ನಂತರ ರೈಲು ಸುಬ್ರಹ್ಮಣ್ಯ ರೋಡ್ಗೆ 6.50ಕ್ಕೆ, ಸಕಲೇಶಪುರಕ್ಕೆ ರಾತ್ರಿ 9.20ಕ್ಕೆ, ಹಾಸನಕ್ಕೆ ರಾತ್ರಿ 10.20ಕ್ಕೆ, ಅರಸೀಕೆರೆಗೆ ರಾತ್ರಿ 11.20ಕ್ಕೆ, ಕಡೂರಿಗೆ ರಾತ್ರಿ 11.59ಕ್ಕೆ, ಬೀರೂರಿಗೆ ರಾತ್ರಿ 12.08ಕ್ಕೆ, ದಾವಣಗೆರೆಗೆ ರಾತ್ರಿ 1.48ಕ್ಕೆ, ಹರಿಹರಕ್ಕೆ 2.03ಕ್ಕೆ, ರಾಣಿಬೆನ್ನೂರಿಗೆ 2.25ಕ್ಕೆ, ಬ್ಯಾಡಗಿಗೆ 2.44ಕ್ಕೆ ಮತ್ತು ಎಸ್ಎಂಎಂ ಹಾವೇರಿಗೆ 3 ಗಂಟೆಗೆ ಆಗಮಿಸಲಿದೆ.

ಹುಬ್ಬಳ್ಳಿಗೆ ಬೆಳಿಗ್ಗೆ 4.40ಕ್ಕೆ, ಅಣ್ಣಿಗೇರಿಗೆ ಬೆಳಿಗ್ಗೆ 5.20, ಗದಗಕ್ಕೆ ಬೆಳಿಗ್ಗೆ 6.15ಕ್ಕೆ, ಹೋಳೆ ಆಲೂರಿಗೆ 7.07, ಬಾದಾಮಿಗೆ 7.29ಕ್ಕೆ, ಗುಳೇದಗುಡ್ಡ ರೋಡ್ಗೆ 7.43, ಬಾಗಲಕೋಟೆಗೆ ಬೆಳಿಗ್ಗೆ 7.56, ಆಲಮಟ್ಟಿಗೆ ಬೆಳಿಗ್ಗೆ 8.37 ಮತ್ತು ಬಸವನ ಬಾಗೇವಾಡಿ ರೋಡ್ಗೆ 8.59ಕ್ಕೆ ಹಾಗೂ ವಿಜಯಪುರಕ್ಕೆ ಬೆಳಿಗ್ಗೆ 11.15ಕ್ಕೆ ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.