ಪ್ರಜಾವಾಣಿ ವಾರ್ತೆ

ಇಂಡಿ: ಕೊಯ್ಲಿಗೆ ಬಂದಿದ್ದ ಬೆಲೆ ಬಾಳುವ ಕಬ್ಬು ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಲಚ್ಯಾಣ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ನಡೆದಿದೆ.

ಈ ಅಗ್ನಿ ಅವಘಡದಲ್ಲಿ ಇಲ್ಲಿನ ಮಲ್ಲಿಕಾರ್ಜುನ ಮುಜಗೊಂಡ ಅವರ 4 ಎಕರೆ ಕಬ್ಬು ಸುಟ್ಟು ಕರಕಲಾಗಿ ಸುಮಾರು ₹ 3 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ.

ಕಬ್ಬಿನ ಪಡದ ಮಧ್ಯೆ ಹಾದು ಹೋದ ಅಧಿಕ ಒತ್ತಡದ ವಿದ್ಯುತ್ ತಂತಿ ಬೆಳಿಗ್ಗೆ 10ರ ಸುಮಾರು ಆಕಸ್ಮಿಕವಾಗಿ ಗಾಳಿಯಲ್ಲಿ ಜೋಡಣೆಯಾಗಿ ವಿದ್ಯುತ್ ಶಾರ್ಟ ಸರ್ಕಿಟ್ ಉಂಟಾಯಿತು. ಉತ್ಪತ್ತಿಯಾದ ಬೆಂಕಿಯ ಕಿಡಿಯು ತಂತಿಯ ಕೆಳಭಾಗದ ಒಣಗಿದ ರವದಿ ತುಂಬಿದ ಕಬ್ಬಿನ ಗದ್ದೆಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ.

ಇಂಡಿಯ ಅಗ್ನಿಶಾಮಕ ದಳದವರಿಗೆ ಮಾಲೀಕರು ದೂರವಾಣಿ ಕರೆ ಮಾಡಿದರು. ಪಕ್ಕದ ಜಮೀನಿನ ಬೋರವೆಲ್ ನೀರನ್ನು ಬಳಸಿ ಮತ್ತು ಅಗ್ನಿ ಶಾಮಕ ದಳದವರೂ ಸ್ಥಳಕ್ಕೆ ಧಾವಿಸಿ 2 ಎಕರೆ ಕಬ್ಬನ್ನು ಉಳಿಸಿದರು. ಗ್ರಾಮ ಲೆಕ್ಕಾಧಿಕಾರಿ ಅವಜಿ ಹಾಗೂ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇಂಡಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.