ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ | ಟಗರಿನ ಕಾಳಗ: ನೀರಲಕೇರಿ ಬಲರಾಮನಿಗೆ ಬಹುಮಾನ

Published 17 ಏಪ್ರಿಲ್ 2024, 15:30 IST
Last Updated 17 ಏಪ್ರಿಲ್ 2024, 15:30 IST
ಅಕ್ಷರ ಗಾತ್ರ

ಮುದ್ದೇಬಿಹಾಳ : ತಾಲ್ಲೂಕಿನ ಖಿಲಾರಹಟ್ಟಿ ಕಾಡಸಿದ್ಧೇಶ್ವರ ಹಾಗೂ ಬೀರಲಿಂಗೇಶ್ವರ ಜಾತ್ರೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಟಗರಿನ ಕಾಳಗದಲ್ಲಿ ನೀರಲಕೇರಿ ಬಲರಾಮ ಟಗರು ಎರಡು ಹಾಗೂ ನಾಲ್ಕು ಹಲ್ಲಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವು.

ಎರಡು ಹಲ್ಲಿನ ಟಗರಿನ ಕಾಳಗ ಸ್ಪರ್ಧೆಯಲ್ಲಿ ನಿರಲಕೇರಿ ಬಲರಾಮ ಪ್ರಥಮ, ಬಿಜ್ಜೂರಿನ ಬೆಳ್ಳಿಚುಕ್ಕಿ ದ್ವಿತೀಯ, ಆನೆಸೂರಿನ ದ್ಯಾಮವ್ವದೇವಿ ಟಗರು ತೃತೀಯ ಸ್ಥಾನ ಪಡೆದವು.

4 ಹಲ್ಲಿನ ಟಗರಿನ ಕಾಳಗದಲ್ಲಿ ನಿರಲಕೇರಿ ಬಲರಾಮ ಪ್ರಥಮ, ಶಿರೋಳದ ಪಿ.ಕೆ.ಸರ್ಜಾ ದ್ವಿತೀಯ,ಕಾನಿಕೇರಿಯ ಎಸ್.ಆರ್.ಎಸ್ ಟಗರು ತೃತೀಯ ಸ್ಥಾನ ಪಡೆದವು. ಟಗರಿನ ಕಾಳಗದ ಸ್ಪರ್ಧೆಯ ವಿಜೇತರಿಗೆ ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕಿರಣ್ ಮದರಿ, ಮುಖಂಡ ಅಂಬರೀಶ ಮದರಿ, ಬಿ.ಎನ್.ಮದರಿ, ಬಸವರಾಜ ಗೂಡಲಮನಿ, ನೀಲಪ್ಪ ಮದರಿ ಬಹುಮಾನ ವಿತರಿಸಿದರು. ಗುರಣ್ಣ ಹಾದಿಮನಿ, ಮುತ್ತು ಮದರಿ, ಆಕಾಶ ಮದರಿ, ವಿನೋದ ಮದರಿ, ಪ್ರಜ್ವಲ್ ಮೇಟಿ,ಪವನ್ ಮೇಟಿ ಸ್ಪರ್ಧೆ  ನಡೆಸಿಕೊಟ್ಟರು.

ತೆರಬಂಡಿ ಸ್ಪರ್ಧೆ ಫಲಿತಾಂಶ :

ಜಾತ್ರೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಅಂಬಳನೂರು
ಮಾರುತೇಶ್ವರ ಪ್ರಸನ್ನ ಎತ್ತುಗಳ ಜೋಡಿ ಪ್ರಥಮ ಬಹುಮಾನವಾಗಿ ಎಚ್.ಎಫ್.ಡಿಲಕ್ಸ್ ಬೈಕ್‌ ಅನ್ನು ತಮ್ಮದನ್ನಾಗಿಸಿಕೊಂಡವು. ಶಿರೋಳದ ಕಾಡಸಿದ್ದೇಶ್ವರ ಪ್ರಸನ್ನ ಎತ್ತುಗಳ ಜೋಡಿ ದ್ವಿತೀಯ ಬಹುಮಾನವಾಗಿ ₹30,000 ನಗದು ಪಡೆದುಕೊಂಡರೆ , ರೂಢಗಿಯ ಲಕ್ಷ್ಮಿ ಎತ್ತುಗಳ ಜೋಡಿ ತೃತೀಯ, ಕೊಲ್ಲೂರಿನ ಕುಮಾರೇಶ್ವರ ಪ್ರಸನ್ನ ಎತ್ತುಗಳು ನಾಲ್ಕನೇ ಸ್ಥಾನ, ಬ್ಯಾಲ್ಯಾಳದ ಸಂಗನಗೌಡ ಗ್ವಾತಗಿ ಎತ್ತುಗಳು ಐದನೇ ಬಹುಮಾನ, ಮೆಟಗುಡ್ಡದ ಕಾಶಿಲಿಂಗೇಶ್ವರ ಪ್ರಸನ್ನ ಎತ್ತುಗಳು ಆರನೇ ಬಹುಮಾನ ಪಡೆದುಕೊಂಡವು.

ಸ್ಪರ್ಧೆಯನ್ನು ಗುರಣ್ಣ ಹಾದಿಮನಿ, ಈರಣ್ಣ ಗೂಡಲಮನಿ, ಭೀಮಣ್ಣ ಮೇಟಿ,ರಾಘವೇಂದ್ರ ಕದ್ದಿನಹಳ್ಳಿ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT