ಬಸವನಬಾಗೇವಾಡಿ: ಮನೆಯಲ್ಲಿನ ತ್ಯಾಜ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕವೇ ಎಲ್ಲರೂ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಬಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ಧೀನ್ ಸೌದಾಗರ ಹೇಳಿದರು.

ಬಸವನಬಾಗೇವಾಡಿ ಪುರಸಭೆಯಿಂದ ಪಟ್ಟಣದ ಬಸವ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಸ್ವಚ್ಛ ಭಾರತ ಮಿಷನ್ 2.0 ಯೋಜನೆಯಡಿ ಐ.ಇ.ಸಿ ಮತ್ತು ಸಾಮರ್ಥ್ಯಾಭಿವೃದ್ಧಿ ಘಟಕದಡಿ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸಬೇಕು. ಆಗ ಮನೆಯಲ್ಲಿ ಅಪಾಯಕಾರಿ ತ್ಯಾಜ್ಯದ ಪ್ರಮಾಣ ಕಡಿಮೆಯಾಗುತ್ತದೆ. ಉಳಿದ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಮನೆಯ ತಾರಸಿಯಲ್ಲೇ ನಮಗೆ ಬೇಕಾದ ತರಕಾರಿ ಗಿಡಗಳನ್ನು ಬೆಳೆದುಕೊಳ್ಳಬಹುದು. ಇದರಿಂದ ಪರಿಸರ ಸಂರಕ್ಷಣೆಯ ಜತೆಗೆ ನಮ್ಮ ಆರ್ಥಿಕ ಹೊರೆಯೂ ತಗ್ಗುತ್ತದೆ ಎಂದು ಸಲಹೆ ನೀಡಿದರು.

ಪಟ್ಟಣದ ವೀರಭದ್ರೇಶ್ವರ ನಗರದಲ್ಲಿ ನೂರಾರು ಮನೆಗಳಲ್ಲಿ ನಿವಾಸಿಗಳು ಪೈಪ್ ಕಾಂಪೋಸ್ಟಿಂಗ್ ವಿಧಾನ ಅಳವಡಿಕೊಂಡು ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಪಟ್ಟಣದ ಎಲ್ಲಾಮನೆಗಳಿಗೆ ಈ ಯೋಜನೆ ಅಳವಡಿಸಿಕೊಳ್ಳುವ ಕಾರ್ಯವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ವೀರಭದ್ರೇಶ್ವರ ನಗರದ ನಿವಾಸಿಗಳಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಾಗಾರದಲ್ಲಿ ಬಸವನಬಾಗೇವಾಡಿ ಪುರಸಭೆ ಸೇರಿದಂತೆ ಮನಗೂಳಿ, ಕೊಲ್ಹಾರ ಹಾಗೂ ನಿಡಗುಂದಿ ಪಟ್ಟಣ ಪಂಚಾಯಿತಿಗಳ ಸ್ವಚ್ಛತಾ ಸಿಬ್ಬಂದಿಗೆ ವೈಜ್ಞಾನಿಕ ಕಸ ವಿಲೇವಾರಿ ಕುರಿತು ತರಬೇತಿ ನೀಡಲಾಯಿತು.

ಬಸವನಬಾಗೇವಾಡಿ ಪುರಸಭೆ ಮುಖ್ಯಾಧಿಕಾರಿ ವಿದ್ಯಾದರ ಕಲಾದಗಿ, ಕೊಲ್ಹಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೊಳ, ಉಪಾಧ್ಯಕ್ಷ ರಾಜಮಾ ನದಾಫ, ಮುಖ್ಯಾಧಿಕಾರಿ ವೀರೇಶ ಹಟ್ಟಿ, ನಿಡಗುಂದಿ ಪ.ಪಂ ಅಧ್ಯಕ್ಷ ದೇಸಾಯಿ ಜಂಬಕ್ಕ ವಿಭೂತಿ, ಮುಖ್ಯಾಧಿಕಾರಿ ಪ್ರತಾಪ್ ಕೊಡಗೆ, ಮನಗೂಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶೇಖಪ್ಪಗೌಡ ಬಿರಾದಾರ, ಮುಖ್ಯಾಧಿಕಾರಿ ನಿಖಿಲಗೌಡ ಪಾಟೀಲ, ಬೆಂಗಳೂರು ತರಬೇತುದಾರರಾದ ನಗ್ಮಾ, ಶಶಿನಿ ಸೇರಿದಂತೆ ವಿವಿಧ ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳು ಹಾಗೂ ನೂರಾರು ಸ್ವಚ್ಛತಾ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.