ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಶಾಸಕ ಬಸನಗೌಡ ಪಾಟೀಲ ಏಕೆ ಸ್ಪಂದಿಸುತ್ತಿಲ್ಲ? ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯತ್ನಾಳ ಅಡ್ಡ ಬರುತ್ತಿರುವುದು ಖಂಡನೀಯ ಎಂದು ಎಸ್.ಡಿ.ಪಿ.ಐ ಜಿಲ್ಲಾ ಘಟಕದ ಅಧ್ಯಕ್ಷ ಅತಾವುಲ್ಲಾ ದ್ರಾಕ್ಷಿ ಹೇಳಿದರು.

ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ 45 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ಶನಿವಾರ ಎಸ್.ಡಿ.ಪಿ.ಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಬೆಂಬಲ ಘೋಷಿಸಿ ಅವರು ಮಾತನಾಡಿದರು.

ಜಿಲ್ಲಾ ಆಸ್ಪತ್ರೆ 150 ಎಕರೆ ಜಾಗದಲ್ಲಿ ಎಲ್ಲ ಮೂಲ ಸೌಕರ್ಯಗಳು ಇದ್ದರೂ ಶಾಸಕ ಯತ್ನಾಳ ಅವರು ತಮ್ಮ ತೆಕ್ಕೆಗೆ ತೆಗೆದುಕೊಂಡು ಲೂಟಿ ಹೊಡೆಯೋ ಪ್ರಯತ್ನ ಮಾಡ್ತಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್.ಡಿ.ಪಿ.ಐ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಯೇಷಾ ಮುಲ್ಲಾ ಮಾತನಾಡಿ, ಹೋರಾಟ ನಡೆಯುತ್ತಿರುವ ಈ ಸ್ಥಳಕ್ಕೆ ನಮ್ಮ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ನಾಯಕರು ಬಂದು ಹೋಗಿದ್ದಾರೆ. ಹೋರಾಟಗಾರರು ರಕ್ತ ಸಹಿ ಚಳವಳಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಕಳುಹಿಸಿದರು ಕೂಡ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿರುವುದು ಖಂಡನೀಯ ಎಂದರು.

ನಮ್ಮ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕಾಗಿದೆ, ಪಿಪಿಪಿ ಹೆಸರಿನಲ್ಲಿ ವ್ಯವಹಾರ ಮಾಡುವಂತ ಕಾಲೇಜು ನಮಗೆ ಬೇಡ ಎಂದು ಹೇಳಿದರು.

ಎಸ್.ಡಿ.ಪಿ.ಐ ಪದಾಧಿಕಾರಿಗಳಾದ ಬಂದೇನವಾಜ್ ಬಗಲಿ, ಮಶಾಕ್ ವಾಲಿಕಾರ್, ಮೆಹಬೂಬ್ ಕೋಲಾರ, ಅಬ್ದುಲ್ ಇನಾಮದಾರ, ಮೊಹಮ್ಮದ್ ರಫೀಕ್ ನಾಯದರ್, ಜಮಾಲ್ ಅಹ್ಮದ್ ಮುಲ್ಲಾ, ಅರ್ಬಾರ್ ರಿಸಲ್ದಾರ್, ಶಯಬಾಜ್ ವಾಲಿಕಾರ್, ಯೂಸುಫ್ ಬಿಜಾಪುರ, ಇಮ್ರಾನ್, ಎಂ.ಎಂ. ಪುಣೆಕಾರ್, ಅಬ್ದುಲ್ ಹಮೀದ್ ಶೈಖ್, ಅರಬಜ್ ಚೌಧರಿ, ಜುನೈದ್ ಜಮಾದರ್, ಬಂದೇನವಾಜ್, ಮುನಾಫ್ ಪಠಾಣ್, ಮಹಿಳಾ ಸದಸ್ಯರಾದ ನಾಜಿಯಾ ಮುಲ್ಲಾ, ನಗ್ಮಾ ಮುಲ್ಲಾ, ಸೀತಾರಾ ತಾಳಿಕೋಟಿ, ಅಸ್ಮಾ ಕಲಾದಗಿ, ರುಮಾನಾ ಮುಲ್ಲಾ, ಕೈನಾತ್ ಮುಲ್ಲಾ, ಮಜನ್ ಗಳಿವಳೇ, ತಬಸ್ಸುಮ್ ಜಹಾಗೀರದಾರ, ಯಸ್ಮಿನ್ ಮುಲ್ಲಾ, ವಿದ್ಯಾರ್ಥಿಗಳಾದ ಅಂಜನಾ ಚವ್ಹಾಣ್, ಸುಶ್ಮಿತಾ ರಾಥೋಡ, ಶಿಲ್ಪಾ ರಾಥೋಡ, ಗಂಗೂಬಾಯಿ ರಾಥೋಡ, ಪ್ರಿಯಾಂಕಾ ರಾಥೋಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.