ಸಿಂದಗಿ: ತಾಲ್ಲೂಕಿನಲ್ಲಿ ಮುಂಗಾರು ಮಳೆಯಿಲ್ಲದೇ 29850 ಹೆಕ್ಟೆರ್ ಪ್ರದೇಶ ಬೆಳೆ ನಾಶಗೊಂಡಿದೆ. ಇದರಿಂದಾಗಿ 70584 ರೈತರಿಗೆ ₹ 29.90 ಕೋಟಿ ಹಣ ಬಿಡುಗಡೆಗೊಳ್ಳಬೇಕಿದ್ದು, ಈಗ ₹ 18.86 ಕೋಟಿ ಕೇಂದ್ರ ಸರ್ಕಾರದಿಂದ ಅನುದಾನ ಬಂದಿದೆ. ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ಸಭೆಯ ಗಮನಕ್ಕೆ ತಂದರು.

ಶಾಸಕ ರಮೇಶ ಭೂಸನೂರ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಒಟ್ಟು 16 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದರಲ್ಲಿ ಐದು ಜನ ರೈತ ಕುಟುಂಬಕ್ಕೆ ಮೊದಲ ಹಂತದಲ್ಲಿ ಇಬ್ಬರಿಗೆ ತಲಾ ₹ 2ಲಕ್ಷ ಎರಡನೇ ಹಂತದಲ್ಲಿ ಮೂವರಿಗೆ ₹ 5 ಲಕ್ಷ ಪರಿಹಾರ ಹಣ ವಿತರಿಸಲಾಗಿದೆ. ಐದು ಪ್ರಕರಣಗಳು ತಿರಸ್ಕೃತಗೊಂಡಿದ್ದು ಎರಡು ಬಾಕಿ ಇವೆ ಎಂದು ಕೃಷಿ ಅಧಿಕಾರಿ ಸ್ಪಷ್ಟಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಮೇಶ ಭೂಸನೂರ, ಬೆಳೆಹಾನಿ ಪರಿಹಾರ ಹಣವನ್ನು ಒಂದು ವಾರದ ಒಳ ಗಾಗಿ ರೈತರ ಖಾತೆಗೆ ಜಮೆ ಮಾಡುವ ಕಾರ್ಯ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

504 ಹೆಕ್ಟೆರ್ ತೋಟಗಾರಿಕೆ ಪ್ರದೇಶದ ಬೆಳೆ ನಾಶವಾಗಿದ್ದು, ಒಟ್ಟು ₹ 81.67 ಪರಿಹಾರ ಹಣ ಪೈಕಿ 590 ರೈತರಿಗೆ ₹ 55 ಲಕ್ಷ ಬಿಡುಗಡೆಗೊಂಡಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಷ್ಮಾ ಹೇಳಿದರು.

ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗಣಿಹಾರ ರಸ್ತೆ ಸಂಪೂರ್ಣ ಹದಗೆಟ್ಟರೂ ಕಣ್ಣು ಮುಚ್ಚಿ ಕುಳಿತಿದ್ದೇಕೆ. ಈ ರಸ್ತೆ ನನ್ನ ಮರ್ಯಾದೆ ಕಳೆಯುತ್ತಿದೆ ಎಂದು ಶಾಸಕರು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಎಇಇ ಇಲಾಳ, ಕುಡಿಯುವ ನೀರಿನ ಕ್ರಿಯಾ ಯೋಜ ನೆಗೆ ಅನುಮೋದನೆ ಸಿಕ್ಕಿಲ್ಲ ಎಂದರು. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಆನೆ ಮಡು ಪ್ರೊಜೆಕ್ಟ್ ಪೂರ್ಣಗೊಂಡು ಹತ್ತು ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಅಲ್ಲದೇ ಸಿಆರ್ಎಫ್, ಟಾಸ್ಕ್ ಪೋರ್ಸ್ ಯೋಜನೆ ಅಡಿ ತಲಾ ₹ 50 ಲಕ್ಷ ಮತ್ತು ಇನ್ನೊಂದು ₹ 70 ಲಕ್ಷದ ಕುಡಿಯುವ ನೀರಿನ ಯೋಜ ನೆಯ ಪ್ರಸ್ತಾವ ಸರ್ಕಾರದ ಎದುರು ಇದೆ ಅನುಮೋದನೆ ಸಿಗಬೇಕಿದೆ. ಚಿಕ್ಕ ಸಿಂದಗಿ, ಕುಮಸಗಿ ಮತ್ತು ಬಂದಾಳ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಯೊಜನೆ ಕೈಗೆತ್ತಿಕೊಳ್ಳಲಾಗಿದ್ದು, ಬಂದಾಳ ಘಟಕ ಮಳೆ–ಗಾಳಿಗೆ ಕಿತ್ತು ಹೋಗಿದೆ.

ಕೇಂದ್ರದಿಂದ ಕುಡಿಯುವ ನೀರಿಗಾಗಿ ಬರಬೇಕಿರುವ ಶೇ 70ರಷ್ಟು ಅನುದಾನದಲ್ಲಿ ಶೇ 30ರಷ್ಟು ಕಡಿತ ಮಾಡಲಾಗಿದೆ ಎಂದು ಎಇಇ ಇಲಾಳ ಶಾಸಕರಿಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಚಿಕ್ಕಸಿಂದಗಿ ಗ್ರಾಮಕ್ಕೆ ಮಾತ್ರ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬ ರುವ ದಿನಗಳಲ್ಲಿ ದೇವರ ಹಿಪ್ಪರಗಿ ಮತ ಕ್ಷೇತ್ರದ ಅಧಿಕ ಹಳ್ಳಿಗಳಿಗೆ ಟ್ಯಾಂಕರ್ ಪ್ರಾರಂಭಿಸಬೇಕಾಗುತ್ತದೆ ಎಂದು ತಹಶೀಲ್ದಾರ್ ಜಿ.ಎಸ್.ಮಳಗಿ ಹೇಳಿದರು.

ಜಾನುವಾರುಗಳಿಗೆ ಮೇವಿನ ಕೊರತೆ ಬಾರದಿರಲೆಂದು ದೇವರಹಿಪ್ಪರಗಿಯಲ್ಲಿ ಮೇವು ಸಂಗ್ರಹಣೆ ಮಾಡಲಾಗಿದೆ. ಸಬ್ಸೀಡಿ ದರದಲ್ಲಿ ಒಂದು ಜಾನುವಾರಿಗೆ 3 ಕೆ.ಜಿ ಮೇವು ನೀಡಲಾಗುವುದು ಎಂದರು.

ನಗರದಲ್ಲಿ ₹ 1 ಕೋಟಿ ವೆಚ್ಚ ಮಾಡಿರುವ ಅಂಬೇಡ್ಕರ್ ಭವನ ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು. ಇದೇನು ಪಂಚವಾರ್ಷಿಕ ಯೊಜನೆ ಅಡಿ ಬರುತ್ತದೆ ಹೇಗೆ? ಅಲ್ಲದೇ ನಗರದ ಬಾಬು ಜಗಜೀವನರಾಂ ಭವನ ಕಾಮಗಾರಿಗಾಗಿ ಮೂರು ವರ್ಷಗಳ ಹಿಂದೆಯೇ ಭೂಮಿಪೂಜೆ ಆದರೂ ಕಾಮಗಾರಿ ಶುರು ಆಗಿಲ್ಲವೇಕೆ?

ಈ ಬಗ್ಗೆ ದಲಿತ ಸಂಘಟನೆಗಳು ಪ್ರಯತ್ನ ಮಾಡು ವುದು ಬಿಟ್ಟು ನಮ್ಮ ಮೇಲೆ ದಬಾಯಿ ಸಲು ಬರುತ್ತಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾ ಮೇಲಿನಮನಿ, ನಾಮ ನಿರ್ದೇಶನ ಸದಸ್ಯರಾದ ಚಂದ್ರಕಾಂತ ಸಿಂಗೆ, ಅಶೋಕ ಸುಲ್ಫಿ, ನಿಂಗಪ್ಪ ಶೆಟ್ಟಿ, ಶಿವಯೋಗೆಪ್ಪ ಹುಡೇದ ಇದ್ದರು.

ಪಿಡಿಓಗಳು ಸಮರ್ಪಕ ಕರ್ತವ್ಯ ಮಾಡುತ್ತಿಲ್ಲ. ಏನಾದರೂ ಅಂದ್ರೆ ಅನ್ಯಾಯ ಎಂದು ಸಂಘಟನೆ ಮುಂದಿಟ್ಟುಕೊಂಡು ಪ್ರತಿಭಟಿಸುತ್ತಾರೆ.
-ರಮೇಶ ಭೂಸನೂರ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.