ವಿಜಾಪುರ: ವಿಜಾಪುರ ನಗರದಲ್ಲಿ ಸೈಕ್ಲಿಂಗ್ ವೆಲ್ಲೊಡ್ರೋಮ್ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ 2 ಕೋಟಿಗೆ ರೂಪಾಯಿಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರಿನಿವಾಸ್ ತಿಳಿಸಿದ್ದಾರೆ.
ವಿಜಾಪುರದಲ್ಲಿ ಸೈಕ್ಲಿಂಗ್ ವೆಲ್ಲೊಡ್ರೋಮ್ ನಿರ್ಮಿಸುವ 4.23 ಕೋಟಿ ರೂಪಾಯಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಈ ಮೊತ್ತದ ಪೈಕಿ ಮೊದಲನೇ ಕಂತಾಗಿ 2 ಕೋಟಿ ರೂಪಾಯಿಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಅವರು ಹೇಳಿದ್ದಾರೆ.
ನಗರದ ಸೈಕ್ಲಿಂಗ್ ವೆಲ್ಲೊಡ್ರೋಮ್ಗೆ ಹಣ ಮಂಜೂರು ಮಾಡಿಸಿದ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ ಕೃತಜ್ಞತೆ ಸಲ್ಲಿಸಿದ್ದಾರೆ.