ಮಡಿಕೇರಿ: ಇಂದು ಫೆಬ್ರುವರಿ 18 ರಾಮಕೃಷ್ಣ ಪರಮಹಂಸರ ಜನ್ಮದಿನ. ಜಗತ್ತಿಗೆ ಬೆಳಕು ನೀಡಿದ ಇವರಿಗೂ, ಕೊಡಗಿಗೂ ಇದೆ ಅವಿನಾಭಾವ ಸಂಬಂಧ. ಇವರ ಹೆಸರಿನಲ್ಲೆ ಇರುವ ಮಾತ್ರವಲ್ಲ ಇವರ ತತ್ವಾದರ್ಶಗಳನ್ನು ಮುಂದುರಿಸುತ್ತಿರುವ ಆಶ್ರಮ ಕೊಡಗು ಜಿಲ್ಲೆಯಲ್ಲಿರುವುದು ವಿಶೇಷ. ಹಾಗಾಗಿ, ಪ್ರತಿ ವರ್ಷ ರಾಮಕೃಷ್ಣಪರಮಹಂಸರ ಜಯಂತಿ ಸದ್ದಿಲ್ಲದೇ ಇಲ್ಲಿ ಆಚರಣೆಯಾಗುತ್ತಿದೆ.

ಕೊಡಗಿನ ಗಡಿಭಾಗ ಪೊನ್ನಂಪೇಟೆಯಲ್ಲಿ ರಾಮಕೃಷ್ಣ ಶಾರದಾಶ್ರಮ ಇದೆ. ರಾಜ್ಯದಲ್ಲಿರುವ ಕೆಲವೇ ಕೆಲವು ರಾಮಕೃಷ್ಣ ಆಶ್ರಮಗಳಲ್ಲಿ ಇಂದು ಒಂದು ಎಂಬುದು ವಿಶೇಷ.

ಪೊನ್ನಂಪೇಟೆಯಲ್ಲಿ ಈ ರಾಮಕೃಷ್ಣ ಶಾರದಾಶ್ರಮ ಶುರುವಾಗಿದ್ದು 1927ರಲ್ಲಿ. ಇನ್ನೊಂದೇ ವರ್ಷ ಕಳೆದರೆ ಅಪರೂಪದ ಈ ಆಶ್ರಮ ಸ್ಥಾಪನೆಯಾಗಿ 100 ವರ್ಷವಾಗಲಿದೆ. ಶತಗಮಾನೋತ್ಸವದ ಹೊಸ್ತಿಲಿನಲ್ಲಿರುವ ಅಪರೂಪದ ಆಶ್ರಮ ಎಂಬ ಕೀರ್ತಿಗೂ ಇದು ಪಾತ್ರವಾಗಿದೆ.

ಇಷ್ಟು ಮಾತ್ರವೇ ಅಲ್ಲ, ಇದರ ಹೆಗ್ಗಳಿಕೆ ಹೇಳುತ್ತಾ ಹೋದರೆ ಸಾಲುಗಳು ಮುಗಿಯುವುದೇ ಇಲ್ಲ. ರಾಮಕೃಷ್ಣಾಶ್ರಮಗಳ ಪೈಕಿ ಅಲೋಪಥಿ ಪದ್ಧತಿಯ ಆಸ್ಪತ್ರೆ ಹಾಗೂ ಪ್ರಕೃತಿ ಚಿಕಿತ್ಸೆ ನೀಡುವ ನ್ಯಾಚರೋಪತಿ ಮತ್ತು ಯೋಗ ಆಸ್ಪತ್ರೆ ಎರಡನ್ನೂ ಹೊಂದಿರುವ ದಕ್ಷಿಣ ಭಾರತದ ಏಕೈಕ ಆಶ್ರಮ ಎಂಬ ಹೆಗ್ಗಳಿಕೆಗೂ ಈ ಆಶ್ರಮ ಪಾತ್ರವಾಗಿದೆ. ಇಲ್ಲಿ ರೋಗಿಗಳಿಗೆ ಅಲೋಪಥಿ ಚಿಕಿತ್ಸೆಯೂ ಲಭ್ಯ, ಪ್ರಕೃತಿ ಚಿಕಿತ್ಸೆಯೂ ಲಭ್ಯವಿದೆ.

ಇಂತಹ ಆಶ್ರಮದ ಸ್ಥಾಪಕರೂ ಕೊಡಗಿನಲ್ಲಿ ಮಾತ್ರವಲ್ಲ ದೇಶದಲ್ಲೆ ಮಹತ್ವದ ಸ್ಥಾನ ಗಳಿಸಿದ್ದಾರೆ. ಈ ಮಠದ ಸ್ಥಾಪಕರಲ್ಲಿ ಒಬ್ಬರಾದ ಸ್ವಾಮಿ ಶಾಂಭವಾನಂದ ಅವರು ಮೊದಲ ಜೇನು ಕೃಷಿಕರ ಸಹಕಾರ ಸಂಘವನ್ನು ಸ್ಥಾಪಿಸಿದರು ಮಾತ್ರವಲ್ಲ ಕೊಡಗಿನಲ್ಲಿ ಆಗ ಹೆಚ್ಚಾಗಿ ಹರಡಿದ್ದ ಮಲೇರಿಯಾ ನಿರ್ಮೂಲನೆಗಾಗಿ ಅವಿರತ ದುಡಿದಿದ್ದರು. ಈ ಮೂಲಕ ಅವರು ಇಲ್ಲಿನ ಜೇನು ಕೃಷಿಯನ್ನು ಆ ಕಾಲದಲ್ಲೇ ಸಹಕಾರ ಕ್ಷೇತ್ರದ ಪರಿಧಿಯೊಳಗೆ ತಂದರು. ಇದು ಮುಂದೆ ಇತರ ಜೇನು ಸಹಕಾರ ಸಂಘಗಳ ಉಗಮಕ್ಕೆ ಕಾರಣವಾಯಿತು.

ಆ ಕಾಲದಲ್ಲಿ ಈ ಆಶ್ರಮ ಎಷ್ಟು ಪ್ರಸಿದ್ಧಿ ಪಡೆದಿತ್ತು ಎಂದರೆ, ಇಲ್ಲಿಗೆ 1934ರಲ್ಲಿ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು. ಇಲ್ಲಿ ಅವರ ಹಸ್ತಾಕ್ಷರವನ್ನು ಇನ್ನೂ ಜತನದಿಂದ ಕಾಪಾಡಿಕೊಳ್ಳಲಾಗಿದೆ. ನಂತರ, 1957ರಲ್ಲಿ ಭೂದಾನ ಚಳವಳಿಯ ವಿನೋಬಾ ಬಾವೆ ಅವರು ಈ ಆಶ್ರಮಕ್ಕೆ ಭೇಟಿ ನೀಡಿದ್ದರು. ರಾಷ್ಟ್ರದ ಮಹೋನ್ನತ ನಾಯಕರು ಭೇಟಿ ನೀಡುವಂತಹ ಆಶ್ರಮ ಇದಾಗಿತ್ತು ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಿಲ್ಲ.

ಈ ಆಶ್ರಮವನ್ನು 1927ರಲ್ಲಿ ನಿರ್ಮಲಾನಂದ ಸ್ವಾಮೀಜಿ ಹಾಗೂ ಶಾಂಭವಾನಂದರು ಸ್ಥಾಪಿಸಿದರೂ, 2008ರವರೆಗೂ ಇದರ ಪ್ರಾರ್ಥನಾ ಮಂದಿರವು ಹೆಂಚಿನ ಚಾವಣಿ ಹೊಂದಿತ್ತು. 2007–08ರಲ್ಲಿ ಆಶ್ರಮದ ಅಧ್ಯಕ್ಷರಾಗಿದ್ದ ಜಗದಾತ್ಮಾನಂದ ಸ್ವಾಮೀಜಿ ಕೊಡಗು ಮತ್ತು ದೇಶದ ಜನರ ಬೆಂಬಲದೊಂದಿಗೆ ಹೆಂಚಿನ ಮನೆಯ ಕಟ್ಟಡ ಕೆಡವಿ ಅದೇ ಜಾಗದಲ್ಲಿ ರಾಮಕೃಷ್ಣ, ಶಾರದಾಮಾತೆ ಮತ್ತು ಸ್ವಾಮಿ ವಿವೇಕಾನಂದರು ಇರುವ ಬೃಹತ್ ಆಲಯ ನಿರ್ಮಿಸಿದರು.

ಈಗ ಈ ಆಶ್ರಮವು ಹಾಡಿ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅವರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು, ಶುದ್ಧ ಕುಡಿಯುವ ನೀರಿನ ಸೌಕರ್ಯ ಒದಗಿಸುವುದು, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಠ್ಯಪುಸ್ತಕಗಳನ್ನು ನೀಡುವುದು ಸೇರಿದಂತೆ ಹಲವು ಸೇವಾಪರ ಚಟುವಟಿಕೆಗಳನ್ನು ಆಶ್ರಮ ನಡೆಸುತ್ತಿದೆ.

ಇಲ್ಲಿರುವ 25 ಹಾಸಿಗೆ ಸಾಮರ್ಥ್ಯದ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ ಎಕ್ಸರೆ, ದಂತ ಚಿಕಿತ್ಸೆ, ಇಸಿಜಿ ಮೊದಲಾದ ಸೌಲಭ್ಯಗಳಿವೆ. ರೋಗಿಗಳಿಗೆ ಕನಿಷ್ಠ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 25 ಹಾಸಿಗೆ ಸಾಮರ್ಥ್ಯದ ವಿವೇಕಾನಂದ ಆರೋಗ್ಯಧಾಮದಲ್ಲಿ ಪ್ರಕೃತಿ ಮತ್ತು ಯೋಗ ಚಿಕಿತ್ಸೆ ನೀಡಲಾಗುತ್ತಿದೆ.

ಆಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದಜಿ ಮಹಾರಾಜ್ ಅವರೊಂದಿಗೆ ಇತರ ಮೂವರು ಕಿರಿಯ ಸ್ವಾಮೀಜಿಗಳೂ ಇದ್ದಾರೆ. ಆಶ್ರಮದಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಶಾರದಾಮಾತೆ ಹಾಗೂ ಇತರ ಧಾರ್ಮಿಕ ಪುರುಷರ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ನೂರಾರು ಪುಸ್ತಕಗಳಿವೆ.

ಇವುಗಳಲ್ಲಿ ಕುವೆಂಪು ಅವರ ರಾಮಕೃಷ್ಣ ಪರಮಹಂಸ ಪುಸ್ತಕ ಮಹತ್ವದ್ದು. ಶ್ರೀರಾಮಕೃಷ್ಣ ವಚನ ವೇದ ಎಂಬ ಎರಡು ಬೃಹತ್ ಸಂಪುಟಗಳು, ಸ್ವಾಮಿ ಶಾರದಾನಂದ ಅವರು ಬರೆದಿರುವ ರಾಮಕೃಷ್ಣ ಲೀಲಾಪ್ರಸಂಗ, ರಾಮಕೃಷ್ಣ ಉಪದೇಶಾಮೃತ, ಸ್ವಾಮಿ ಪುರುಷೋತ್ತಮನಂದ ಅವರ ಯುಗಾವತಾರ ಶ್ರೀರಾಮಕೃಷ್ಣ ಎಂಬ 2 ಸಂಪುಟಗಳು, ಸ್ವಾಮಿ ಸೋಮನಾಥನಂದ ಅವರ ಭಗವಾನ್ ರಾಮಕೃಷ್ಣ, ಗುರುದೇವ ರಾಮಕೃಷ್ಣ, ರಾಮಕೃಷ್ಣ ಸಂಕ್ಷಿಪ್ತ ಜೀವನ, ಸುಂದರಿ ಮೇದಪ್ಪ ಅವರು ಕೊಡವ ಭಾಷೆಯಲ್ಲಿ ಬರೆದಿರುವ ಶ್ರೀ ರಾಮಕೃಷ್ಣ ಕರುಣಾಸಿಂಧು ಹೀಗೆ ಇನ್ನೂ ಅನೇಕ ಪುಸ್ತಕಗಳು ಮಾರಾಟಕ್ಕೂ ಇವೆ, ನೋಡಲು ಲಭ್ಯವಿವೆ.

ರಾಮಕೃಷ್ಣ ಪರಮಹಂಸರ ಅಮೃತಶಿಲೆಯ ಮೂರ್ತಿ

ಆಶ್ರಮದಲ್ಲಿ ರಾಮಕೃಷ್ಣ ಪರಮಹಂಸ ಅವರ ಅಮೃತಶಿಲೆಯ ಮೂರ್ತಿ ಇರುವುದು ವಿಶೇಷ. 2009ರಲ್ಲಿ ಇಲ್ಲಿ ಜಗದಾತ್ಮನಂದ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಆತ್ಮಸ್ಥಾನದ ಮಹಾರಾಜ್ ಅವರು ಶ್ರೀರಾಮಕೃಷ್ಣ ವಿಶ್ವಭಾವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿದರು. ಇಲ್ಲಿಯೇ ರಾಮಕೃಷ್ಣ ಪರಮಹಂಸ ಅವರ ಮೂರ್ತಿ ನೋಡುಗರ ಮನದಲ್ಲಿ ಶಾಂತಿ ಮೂಡಿಸುತ್ತಿದೆ.

ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಸ್ವಾಮಿ ಪರಹಿತಾನಂದ ಜಿ ಮಹಾರಾಜ್ ಅವರು, ‘ಆಶ್ರಮವು ರಾಮಕೃಷ್ಣಪರಮಹಂಸ ಅವರ ತತ್ವಾದರ್ಶದ ಹಾದಿಯಲ್ಲಿ ಮುನ್ನಡೆಯುತ್ತಿದೆ. 99 ವರ್ಷ ಪೂರೈಸಿ 100ನೇ ವರ್ಷಕ್ಕೆ ಹೆಜ್ಜೆ ಇರಿಸುತ್ತಿದೆ. ಈ ವೇಳೆ ಆಶ್ರಮದಲ್ಲಿರುವ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸಾರ್ವಜನಿಕರು ಇದಕ್ಕೆ ಸರ್ವ ರೀತಿಯಲ್ಲೂ ಸಹಕಾರ ನೀಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.