ಶನಿವಾರ, ನವೆಂಬರ್ 28, 2020
24 °C

ಯಾದಗಿರಿ: ಸಾರ್ವಜನಿಕ ಶೌಚಾಲಯ ಬಳಿ ಇಟ್ಟಿದ್ದ 3 ದಿನದ ನವಜಾತ ಶಿಶು ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಸುರಪುರ ನಗರದ ಸಾರ್ವಜನಿಕ ಶೌಚಾಲಯ ಬಳಿ 3 ದಿನಗಳ ಹಿಂದೆ ಜನಿಸಿದ ನವಜಾತು ಶಿಶುವನ್ನು ಬಿಟ್ಟು ಹೋಗಿರುವುದನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಗಂಡು ಮಗುವನ್ನು ಸಾರ್ವಜನಿಕರೊಬ್ಬರು ಕಾಪಾಡಿ ತಮ್ಮ ಮನೆಯಲ್ಲಿ ಸಂರಕ್ಷಣೆ ಮಾಡಿದ್ದರು. ಪೊಲೀಸ್ ಅಧಿಕಾರಿಗಳ ಮೂಲಕ ಮಾಹಿತಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿಯವರು ಮಗುವನ್ನು ವಶಕ್ಕೆ ಪಡೆದು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲೆ ಮಾಡಿದ್ದಾರೆ.

ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಲಾಗಿದೆ. ಮಗುವನ್ನು ಕಲಬುರ್ಗಿ ಅಮೂಲ್ಯ ಶಿಶು ಗೃಹಕ್ಕೆ ಮಂಗಳವಾರ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.