ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಆದರ್ಶ ಗ್ರಾಮಕ್ಕೆ 37 ಗ್ರಾಮಗಳು ಆಯ್ಕೆ

ತಲಾ ₹40 ಲಕ್ಷ ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ಕಾಮಗಾರಿಯ ಯೋಜನೆ
Last Updated 12 ಆಗಸ್ಟ್ 2020, 16:24 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 37 ಗ್ರಾಮಗಳು ಆಯ್ಕೆಯಾಗಿದ್ದು, ತಲಾ ಒಂದು ಗ್ರಾಮದಲ್ಲಿ ₹40 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ತಲಾ ₹1 ಲಕ್ಷ ಆಡಳಿತಾತ್ಮಕ ವೆಚ್ಚಕ್ಕೆ ನಿಗದಿ ಮಾಡಲಾಗಿದೆ.

2018–19ರಲ್ಲಿ 10 ಗ್ರಾಮ, 2019–20ರಲ್ಲಿ 10 ಗ್ರಾಮ, ಈಗ ಹೆಚ್ಚುವರಿಯಾಗಿ ಮತ್ತೆ 17 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಮೊದಲಕಂತಿನಲ್ಲಿ ₹37.80 ಲಕ್ಷ, ಎರಡನೇ ಕಂತಿನಲ್ಲಿ ₹139.42 ಕೋಟಿ ಸೇರಿದಂತೆ ಒಟ್ಟು 177.22 ಕೋಟಿ ಅನುದಾನ ಬಂದಿದೆ.ಈಗಾಗಲೇ ಕ್ರಿಯಾಯೋಜನೆ ರೂಪಿಸಿ ಹಣ ಹಂಚಿಕೆ ಮಾಡಲಾಗಿದ್ದು, ಮತ್ತೆ ಹೆಚ್ಚುವರಿ ಗ್ರಾಮಗಳನ್ನು ಆಯ್ಕೆ ಮಾಡಿದ್ದರಿಂದ ಅನುದಾನ ಹಂಚಿಕೆ ನಡೆಯಲಿದೆ.

ಈಚೆಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅಧ್ಯಕ್ಷತೆಯಲ್ಲಿ ಈ ಯೋಜನೆಯ ಕುರಿತ ಸಭೆ ನಡೆದಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಕ್ರಿಯಾ ಯೋಜನೆ ಸಲ್ಲಿಸಲು ಆಗಸ್ಟ್‌ 14ರಂದು ಗಡುವು ನೀಡಲಾಗಿದೆ. ಆನಂತರ ಅಧಿಕಾರಿಗಳು ನೀಡುವ ಯೋಜನೆಯಂತೆ ಅಭಿವೃದ್ಧಿಗೆ ಚಾಲನೆ ಸಿಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌. ಚನ್ನಬಸಪ್ಪ ಹೇಳುತ್ತಾರೆ.

ಆದರ್ಶ ಗ್ರಾಮದ ಉದ್ದೇಶ: ಪರಿಶಿಷ್ಟ ಜಾತಿ ಜನರು ಹೆಚ್ಚುಇರುವ ಗ್ರಾಮಗಳ ಅಭಿವೃದ್ಧಿಗೊಳಿಸುವುದು, ಗ್ರಾಮದಲ್ಲಿ ಈಗಾಗಲೇ ವಿವಿಧ ಯೋಜನೆಗಳಲ್ಲಿ ಬಾಕಿ ಉಳಿದಿರುವ ಅಗತ್ಯ ಕಾಮಗಾರಿ ಗುರುತಿಸುವುದು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೊಳಿಸುವುದುಆದರ್ಶ ಗ್ರಾಮದ ಉದ್ದೇಶವಾಗಿದೆ.

ಪ್ರಮುಖ ಕಾಮಗಾರಿಗಳು: ಕುಡಿಯುವ ನೀರು, ಗ್ರಾಮ ನೈರ್ಮಲ್ಯೀಕರಣ, ಕಸ ವಿಲೇವಾರಿ, ಅಂಗನವಾಡಿ, ಶಾಲೆಗಳಲ್ಲಿ ಶೌಚಾಲಯ ದುರಸ್ತಿ, ಸಿಸಿ ರಸ್ತೆ ನಿರ್ಮಾಣ, ಸೌರ ವಿದ್ಯುತ್ ಮತ್ತು ಬೀದಿ ದೀಪಗಳ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ನಿರ್ಮಾಣಕ್ಕೆ ಅವಕಾಶವಿದೆ.

***

ಯಾವ್ಯಾವ ಗ್ರಾಮಗಳು ಆಯ್ಕೆ

ಪಿಎಂ ಆದರ್ಶ ಗ್ರಾಮಕ್ಕೆ 2018–19 ಮತ್ತು 2019–20ರಲ್ಲಿ 37 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಯಾದಗಿರಿ ತಾಲ್ಲೂಕಿನ ಮುದ್ನಾಳ, ಕಂಚಗಾರನಹಳ್ಳಿ, ಕಮಲನಗರ, ಭೀಮನಗರ, ಸುಭಾಷ ನಗರ, ವಿಶ್ವಾಸಪುರ, ಲಿಂಗೇರಿ, ಬೋರಬಂಡ, ಸಮ್ನಾಪುರ, ಬಾಲಾಜಿನಗರ, ಅಶೋಕ ನಗರ, ಜವಾಹರನಗರ, ವೆಂಕಟೇಶ್ವರ ನಗರ,ಶಹಾಪುರ ತಾಲ್ಲೂಕಿನ ಗುಂಡಳ್ಳಿ, ಬೀರನೂರ, ಹತ್ತಿಗೂಡರ, ಹಾರಣಗೇರಾ, ಉಕ್ಕಿನಾಳ, ಕರ್ಕಿಹಳ್ಳಿ, ಅನಕಸೂಗೂರ,ಸುರಪುರ ತಾಲ್ಲೂಕಿನ ಬರದೇವನಾಳ, ಜೋಗುಂಡಬಾವಿ, ರಾಮನಗರ, ಸೇವಾನಗರ, ರಾಜುನಗರ, ಶಿವಾಜಿ ನಗರ, ಕೃಷ್ಣಾನಗರ, ದೇವತಿನಗರ, ಮೈಲಾಪುರ, ಭಾಗ್ಯನಗರ, ಧರ್ಮಾಪುರ, ಹನುಮನಗರ, ಕಂಗಂಡನಹಳ್ಳಿ, ರಾಯನಪಾಳ್ಯ, ಯರಕಿಹಾಳ, ಜೈರಾಮನಗರ, ಜಮಲಾಪುರಗ್ರಾಮಗಳು ಆಯ್ಕೆಯಾಗಿವೆ. ಸಮಾಜ ಕಲ್ಯಾಣ ಇಲಾಖೆ ಅನುದಾನದಡಿ ತಲಾ ₹40 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಮೂಲಕ ಆದರ್ಶ ಗ್ರಾಮಗಳನ್ನು ರೂಪಿಸುವ ಹೊಣೆ ಸಮಾಜ ಕಲ್ಯಾಣ ಇಲಾಖೆಯ ಮೇಲಿದೆ.

***

ಗ್ರಾಮಕ್ಕೆ ಅಗತ್ಯವಾದ ಕಾಮಗಾರಿ ಮಾಡಬೇಕು. ಅದು ಗ್ರಾಮಕ್ಕೆ ಅವಶ್ಯವಿದ್ದರೆ ಮಾತ್ರ ಅನುದಾನ ನೀಡಬೇಕು. ಶೌಚಾಲಯ, ರಸ್ತೆ ಸೇರಿ ವಿವಿಧ ಕಾಮಗಾರಿ ಕೈಗೊಳ್ಳಬಹುದು ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

***

20 ಗ್ರಾಮಗಳಲ್ಲಿ ಗ್ರಾಮಮಟ್ಟದ ಸಭೆಯ ನಡಾವಳಿಯಂತೆ ಎನ್‌ಜಿಒ ಸಂಸ್ಥೆಗಳ ಮೂಲಕ ಮನೆಮನೆ ಸರ್ವೆ ಮಾಡಿಸಲಾಗಿದೆ, ಎಸ್‌.ಎಸ್‌. ಚನ್ನಬಸಪ್ಪ, ಸಮಾಜ ಕಲ್ಯಾಣ ಇಲಾಖೆಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT