ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳಾದ ಮನಸ್ಸಿನಿಂದ ಸಮಾಜಕ್ಕೆ ಹಾನಿ

Last Updated 7 ಜನವರಿ 2018, 6:28 IST
ಅಕ್ಷರ ಗಾತ್ರ

ಯಾದಗಿರಿ: ‘ಮನುಷ್ಯನ ಮಾನಸಿಕ ಸ್ಥಿತಿ ಹಾಳಾದರೆ ಅದರ ದುಷ್ಪರಿಣಾಮ ಕೇವಲ ವ್ಯಕ್ತಿಗಷ್ಟೇ ಅಲ್ಲ; ಸಮಾಜಕ್ಕೂ ವ್ಯಾಪಿಸುತ್ತದೆ’ ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ಅಭಿಪ್ರಾಯಪಟ್ಟರು. ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶರವೇಗದಲ್ಲಿ ಸಂಭವಿಸುತ್ತಿರುವ ತಾಂತ್ರಿಕ ಪ್ರಗತಿಯಿಂದಾಗಿ ದಿನದಿಂದ ದಿನಕ್ಕೆ ಮನುಷ್ಯ ಮನೋವ್ಯಾಕುಲಕ್ಕೆ ಒಳಗಾಗುತ್ತಿದ್ದಾನೆ. ಮಾನಸಿಕ ಆರೋಗ್ಯ ಹದಗೆಟ್ಟಂತೆಲ್ಲ ವ್ಯಕ್ತಿಯ ಆರೋಗ್ಯದ ಜತೆಗೆ ಸಮಾಜದ ಸ್ವಾಸ್ಥ್ಯ ಕೂಡ ಹಾಳಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಇಂಥಾ ಸ್ಥಿತಿಯತ್ತ ಹೆಜ್ಜೆ ಹಾಕುತ್ತಿರುವ ನಾವು ಇನ್ನಾದರೂ ಜಾಗರೂಕರಾಗದಿದ್ದರೆ ಉಳಿಗಾಲ ಅಸಾಧ್ಯ. ಹಾಗಾಗಿ, ಮಾನಸಿಕ ಆರೋಗ್ಯ ಉತ್ತಮಗೊಳ್ಳಬೇಕಾದರೆ ಕ್ರೀಡೆ, ಕಸರತ್ತಿನಂತಹ ದೈಹಿಕ ಶ್ರಮ ನಿರಂತರವಾಗಿರಬೇಕು’ ಎಂದು ಕಿವಿಮಾತು ಹೇಳಿದರು.

‘ಒಂದೆಡೆ ಹಲವು ಗಂಟೆ ಕಾಲ ಕುಳಿತು ಒತ್ತಡದ ಕಾರ್ಯಭಾರ ನಿಭಾಯಿ ಸುವ ಸರ್ಕಾರಿ ನೌಕರರು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆ ದೇಹದ ಜತೆಗೆ ಮಾನಸಿಕ ಚೈತನ್ಯವನ್ನೂ ನೀಡುತ್ತದೆ. ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ನಾನಾ ರೋಗಗಳಿಂದಲೂ ಮುಕ್ತಿ ಸಿಗುತ್ತದೆ’ ಎಂದು ತಿಳಿಸಿದರು.

‘ದೇಹದ ಜತೆಗೆ ಮನಸ್ಸು ದಣಿಯು ತ್ತದೆ. ಮನಸ್ಸಿನ ದಣಿವಾರಿಸದಿದ್ದರೆ ಆಲೋಚನಾ ಕ್ರಮದಲ್ಲಿ ವಿಕಾರತೆ ಉಂಟಾಗುತ್ತದೆ. ಕ್ರಮೇಣ ಮನಸ್ಸು ದರ್ಬಲವಾಗುತ್ತಾ ಹೋಗುತ್ತದೆ. ಶರೀರ ಎಷ್ಟೇ ಗಟ್ಟಿಯಾಗಿದ್ದರೂ, ಮನಸ್ಸು ಆನಾರೋಗ್ಯವಾಗಿದ್ದರೆ ಸಮಾಜದಲ್ಲಿ ಶಾಂತಿ ಕದಡುತ್ತದೆ. ಈಗ ರಾಜ್ಯದಲ್ಲಿ ಘಟಿಸುತ್ತಿರುವ ಘಟನೆಗಳಿಗೆ ಅನಾರೋಗ್ಯಕ್ಕೀಡಾದ ಮನಸ್ಸುಗಳೇ ಕಾರಣ’ ಎಂದರು.

‘ಸೃಜನಶೀಲ, ಕ್ರಿಯಾಶೀಲ ಮನಸ್ಸುಗಳಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅಂತಹ ಉತ್ತಮ ಮನಸ್ಸು ಹೊಂದಬೇಕಾದರೆ ದೇಹಕ್ಕೆ ಶ್ರಮ ಬೇಕು. ಅದನ್ನೂ ಕ್ರೀಡಾಂಗಣದಲ್ಲಿ ಸುಲಭವಾಗಿ ಪಡೆಯಬಹುದು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿತಿ ಸಮಿತಿ ಅಧ್ಯಕ್ಷೆ ಸರಸ್ವತಿ, ‘ಯುಡಾ’ ಅಧ್ಯಕ್ಷ ರಾಮರಡ್ಡಿ ತಂಗಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಷು ಎಸ್.ರಾಥೋಡ, ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಶಶಿಕಾಂತ ಕಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT