ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಪಿಯು ಪರೀಕ್ಷೆಗೆ ಬೇರೆ ಜಿಲ್ಲೆಯ 549 ವಿದ್ಯಾರ್ಥಿಗಳು

ಮುಂಬೈನಿಂದ ಬರುವ ಪಿಯು ವಿದ್ಯಾರ್ಥಿನಿಗೂ ಪರೀಕ್ಷೆಗೆ ಅವಕಾಶ
Last Updated 13 ಜೂನ್ 2020, 19:31 IST
ಅಕ್ಷರ ಗಾತ್ರ

ಯಾದಗಿರಿ: ಪದವಿ ಪೂರ್ವ ಶಿಕ್ಷಣ ಇಲಾಖೆಜೂನ್ 18 ರಂದು ನಡೆಸುವದ್ವಿತೀಯ ಪಿಯು ಆಂಗ್ಲ ಭಾಷೆಯ ಪರೀಕ್ಷೆಗೆ ಬೇರೆ ಜಿಲ್ಲೆಯ 549 ಸೇರಿದಂತೆ 6,457 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಲಾಕ್‌ಡೌನ್‌ ಕಾರಣಯಾದಗಿರಿಜಿಲ್ಲೆಯ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಮಾಡಿದ ಕಾಲೇಜುಗಳಿಗೆ ತೆರಳಲು ಆಗದೆ ಇರುವುದರಿಂದ 548 ಅಂತರ ಜಿಲ್ಲೆಯವಿದ್ಯಾರ್ಥಿಗಳು, ಒಬ್ಬ ವಿದ್ಯಾರ್ಥಿನಿ ಮಾತ್ರ ಅಂತರ ರಾಜ್ಯದಿಂದ ಬಂದು ಪರೀಕ್ಷೆ ಬರೆಯಲಿದ್ದಾಳೆ.

‘ಯಾದಗಿರಿ ಜಿಲ್ಲೆಯ ವಿದ್ಯಾರ್ಥಿನಿ ಮಂಗಳೂರಿನಲ್ಲಿ 5 ವಿಷಯಗಳ ಪರೀಕ್ಷೆ ಮುಗಿದ ನಂತರ ಮುಂಬೈಗೆ ತೆರಳಿದ್ದಾಳೆ. ಈಗ ಬಾಕಿ ಇರುವ ಒಂದು ಪರೀಕ್ಷೆಯನ್ನುಜಿಲ್ಲೆಯಲ್ಲಿ ಬರೆಯಲು ಸರ್ಕಾರದಿಂದಅನುಮತಿ ತೆಗೆದುಕೊಂಡಿದ್ದಾಳೆ. ಹೀಗಾಗಿ ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಪಾಸ್‌ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಡಿಡಿಪಿಯುಚಂದ್ರಕಾಂತ ಜಿ.ಹಿಳ್ಳಿ ಮಾಹಿತಿ ನೀಡಿದರು.

ಬೆಂಗಳೂರು, ಮಂಗಳೂರು, ಕಲಬುರ್ಗಿ, ಬೀದರ್‌, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಜಿಲ್ಲೆಯ ವಿದ್ಯಾರ್ಥಿಗಳು ಈಗಾಗಲೇ 5 ವಿಷಯಗಳ ಪರೀಕ್ಷೆ ಬರೆದಿದ್ದಾರೆ. ಆದರೆ, ಲಾಕ್‌ಡೌನ್‌ ಆಗಿದ್ದರಿಂದ ಮತ್ತೆ ಅಲ್ಲಿಗೆ ತೆರಳಲು ಆಗಿಲ್ಲ. ಹೀಗಾಗಿ ಸರ್ಕಾರವೇ ವಿದ್ಯಾರ್ಥಿಗಳು ಇದ್ದ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಇದರಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 549 ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷೆಯ ಪರೀಕ್ಷೆ ಬರೆಯಲಿದ್ದಾರೆ.

ಮಾರ್ಚ್‌ 23ಕ್ಕೆ ಇಂಗ್ಲಿಷ್‌ ಭಾಷೆ ಪರೀಕ್ಷೆ ನಿಗದಿಯಾಗಿತ್ತು. ಅದಕ್ಕೂ ಮುಂಚೆ ಮಾರ್ಚ್‌ 22ರಂದು ಭಾರತ ಸಂಪೂರ್ಣ ಘೋಷಣೆ ಮಾಡಲಾಯಿತು. ಆನಂತರ ಮಾರ್ಚ್‌ 24ರಿಂದ ದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ಬಂದಿದ್ದರಿಂದ ಪರೀಕ್ಷೆ ಮುಂದೂಡಲ್ಪಟ್ಟಿತು. ಈಗ ಜೂನ್‌ 18ಕ್ಕೆ ಪರೀಕ್ಷೆ ನಿಗದಿಯಾಗಿದೆ.

ಅತಿ ಹೆಚ್ಚು ಸರ್ಕಾರಿ ಕಾಲೇಜಿನಲ್ಲಿ ಪರೀಕ್ಷೆ:

ಮೊದಲು 5,908 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದರು. ಈಗ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಸೇರಿ 6,457 ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ ಯಾದಗಿರಿಯ ಸರ್ಕಾರಿ ಪದವಿ ಪೂರ್ವ ಬಾಲಕ, ಬಾಲಕಿಯರ ಕಾಲೇಜಿನಲ್ಲಿಅತಿ ಹೆಚ್ಚುವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲಿದ್ದಾರೆ.

ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ 612, 238 ಬೇರೆ ಜಿಲ್ಲೆಯ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ506, 24 ಬೇರೆ ಜಿಲ್ಲೆಯ ಕಾಲೇಜಿನ ವಿದ್ಯಾರ್ಥಿಗಳು 54 ಕೋಣೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅದರಂತೆನ್ಯೂ ಕನ್ನಡ ಪಿಯು ಕಾಲೇಜಿನ 223 ವಿದ್ಯಾರ್ಥಿಗಳು, 22 ಬೇರೆ ಜಿಲ್ಲೆಯ ವಿದ್ಯಾರ್ಥಿಗಳು, ಜವಾಹರ ಕಾಲೇಜಿನ 413 ಕಾಲೇಜಿನ ವಿದ್ಯಾರ್ಥಿಗಳು, 27 ಬೇರೆ ಕಾಲೇಜಿನ ವಿದ್ಯಾರ್ಥಿಗಳು 47 ಕೋಣೆಗಳಲ್ಲಿ ಪರೀಕ್ಷೆ ಬರೆಯಲಿದ್ದು,ಸಿದ್ಧತೆ ಮಾಡಲಾಗಿದೆ.

13 ಕೇಂದ್ರಗಳನ್ನು ಕ್ವಾರಂಟೈನ್‌ಗೆ ಕೊಟ್ಟಿಲ್ಲ:

ಜಿಲ್ಲೆಯಲ್ಲಿರುವ ಶಾಲಾ–ಕಾಲೇಜು, ವಸತಿ ನಿಲಯಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗಳಾಗಿ ಪರಿವರ್ತಿಸಲಾಗಿತ್ತು. ಆದರೆ, ಇಂಗ್ಲಿಷ್‌ ಭಾಷೆಯ ಪರೀಕ್ಷೆ ನಡೆಯುವ 13 ಕೇಂದ್ರಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ನೀಡಲಾಗಿಲ್ಲ. ಅಲ್ಲದೆ ಮುನ್ನಚ್ಚರಿಕೆ ಕ್ರಮವಾಗಿ ಪರೀಕ್ಷೆಗೂ ಮುಂಚೆ ಸ್ಯಾನಿಟೈಸ್‌ ಮಾಡಿಸಲಾಗುವುದು ಎಂದು ಚಂದ್ರಕಾಂತ ಹಿಳ್ಳಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

* ನಮ್ಮ ಜಿಲ್ಲೆಯವರಲ್ಲದೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರಿಂದ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಕೋಣೆಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ

–ಚಂದ್ರಕಾಂತ ಜಿ.ಹಿಳ್ಳಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ

* ಥರ್ಮಲ್‌ ಸ್ಕ್ಯಾನಿಂಗ್‌, ಪೊಲೀಸ್‌ ಭದ್ರತೆ, ಸ್ಯಾನಿಟೈಸ್‌ ಮಾಡಲು ವಿವಿಧ ಇಲಾಖೆಗೆ ಪತ್ರ ಬರೆಯಲಾಗಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಎಲ್ಲ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ

– ಪೂಜಾರಿ ಗಣಪತಿ, ಸರ್ಕಾರಿ ಬಾಲಕರ ಕಾಲೇಜು ಪ್ರಭಾರಿಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT