ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ನರೇಗಾ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಉತ್ತಮ ಸ್ಪಂದನೆ

Last Updated 6 ಏಪ್ರಿಲ್ 2021, 16:30 IST
ಅಕ್ಷರ ಗಾತ್ರ

ಯಾದಗಿರಿ: ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಜನವರಿ 15ರಿಂದ ಮಾರ್ಚ್ 15ರ ವರೆಗೆ ನಡೆದ ‘ಮಹಿಳಾ ಕಾಯಕೋತ್ಸವ’ಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಕೂಲಿಕಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳ ಪೈಕಿ 60ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ನರೇಗಾ ಕೆಲಸಕ್ಕೆ ಬರುವ ಮಹಿಳೆಯರ ಪ್ರಮಾಣ ಶೇ 50ಕ್ಕಿಂತ ಕಡಿಮೆ ಇತ್ತು. ಇದನ್ನು ಹೆಚ್ಚು ಮಾಡುವ ಉದ್ದೇಶ ಹೊಂದಲಾಗಿತ್ತು.

ಅದರಂತೆ ‘ಮಹಿಳಾ ಕಾಯಕೋತ್ಸವ’ಕ್ಕೆ ಚಾಲನೆ ನೀಡಿದ ನಂತರ ಮನೆ ಮನೆ ಸಮೀಕ್ಷೆ ಮಾಡಿ ಮಹಿಳಾ ಕೂಲಿಕಾರರಿಗೆ ಯೋಜನೆ ಕುರಿತು ಮಾಹಿತಿ ನೀಡಲಾಗಿತ್ತು. ಕೂಲಿ ಕೆಲಸಕ್ಕೆ ಮಹಿಳೆಯರನ್ನು ನೇಮಿಸಿಕೊ
ಳ್ಳಲಾಗಿತ್ತು. ಕಾಮಗಾರಿ ಸ್ಥಳದಲ್ಲಿ ಮಕ್ಕಳ ಪಾಲನೆ ಮಾಡುವುದಕ್ಕಾಗಿ ವಯಸ್ಸಾದ ಮಹಿಳೆಯರನ್ನು ಸಹ ನೇಮಿಸಿಕೊಳ್ಳಲಾಗಿತ್ತು.

17,347 ಮಹಿಳೆಯರು ಹೆಚ್ಚಳ: ಮಹಿಳಾ ಕಾಯಕೋತ್ಸವಕ್ಕೂ ಮುಂಚೆ 52,041 ಜನ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದರು. ನಂತರ ಆ ಸಂಖ್ಯೆ 69,388 ಕ್ಕೆ ಹೆಚ್ಚಳವಾಯಿತು.

ಒಟ್ಟಾರೆ 17,347 ಜನ ಮಹಿಳಾ ಕೂಲಿ ಕಾರ್ಮಿಕರು ಹೊಸದಾಗಿ ಕೆಲಸ ಪಡೆದಿದ್ದಾರೆ.

9,255 ನೋಂದಣಿ ಮಾಡಿಕೊಳ್ಳಲಾಗಿದೆ.

‘ಮಹಿಳಾ ಕಾಯಕೋತ್ಸವದಿಂದ ಮಹಿಳೆಯರಿಗೆ ತಮ್ಮ ಸ್ವಂತ ಊರಿನಲ್ಲಿಯೇ ಕೂಲಿ ಸಿಗುತ್ತಿದೆ. ಇದರಿಂದ ಗುಳೆ ಹೋಗುವುದು ತಪ್ಪಲಿದೆ. ಮಹಿಳಾ ಕಾಯಕೋತ್ಸವ ಕಾರ್ಯಕ್ರಮದಿಂದ ಮಹಿಳಾ ಕೂಲಿಕಾರರ ಸಂಖ್ಯೆ ಹೆಚ್ಚಳವಾಗಿದೆ’ ಎನ್ನುತ್ತಾರೆ ಜಿ. ಪಂ ಸಿಇಒ ಶಿಲ್ಪಾ ಶರ್ಮಾ.

***

ಗಿಡ–ಮರ ನೆಡಲು ತಗ್ಗು, ತೋಪು ನಿರ್ಮಾಣ ಸೇರಿ ಇತರ ಕೆಲಸ ಮಾಡುತ್ತೇವೆ. ಯೋಜನೆ ಆಸರೆಯಾಗಿದೆ
ನಿಂಗಮ್ಮಚಂದ್ರಪ್ಪ ಮಗ್ದಂಪುರ, ಕಾರ್ಮಿಕ ಮಹಿಳೆ

***

ಕಾಯಕೋತ್ಸವದ ಮೂಲಕ ಮಹಿಳಾ ಕೂಲಿ ಕಾರ್ಮಿಕರಿಗೆ ಸ್ವಾವಲಂಬಿ ಜೀವನ ನಡೆಸಲು ಆತ್ಮಸ್ಥೈರ್ಯ ನೀಡಲಾಗಿದೆ
ಮುಕ್ಕಣ್ಣ ಕರಿಗಾರ, ನರೇಗಾ ನೋಡಲ್ ಅಧಿಕಾರಿ

***

ನರೇಗಾದಡಿ ₹275 ಕೂಲಿ ಸಿಗುತ್ತಿದೆ. ನಾವು ಸರ್ವೆ ಮಾಡಿದಾಗ ಹೊರಗಡೆ ₹130 ಸಿಗುತಿತ್ತು. ಹಾಗಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು
ಶಿಲ್ಪಾ ಶರ್ಮಾ, ಜಿ.ಪಂ ಸಿಇಒ

***

ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪಿದೆ. ಊರಿನಲ್ಲಿಯೇ ಉದ್ಯೋಗ ಸಿಕ್ಕಿದೆ. ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ

ಬನ್ನಮ್ಮ ಗೋಪಾಲ ಕಾಳಬೆಳಗುಂದಿ, ಕಾರ್ಮಿಕ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT