ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಭಯ: ಕಳೆಕುಂದಿದ ಯುಗಾದಿ ಹಬ್ಬ

ಮಡಕೆಗೂ ತಟ್ಟಿದ ಬಿಸಿ, ಮನೆಯಲ್ಲೆ ಉಳಿದ ಜನತೆ
Last Updated 27 ಮಾರ್ಚ್ 2020, 8:55 IST
ಅಕ್ಷರ ಗಾತ್ರ

ಯಾದಗಿರಿ: ಲಾಕ್‌ಡೌನ್‌ನಿಂದಾಗಿ ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬದ ಸಂಭ್ರಮ ಕಳೆಕುಂದಿತ್ತು. ಇದರಿಂದ ಮಡಕೆಗೆ ಬಿಸಿ ತಟ್ಟಿದೆ.

ಪ್ರತಿ ವರ್ಷ ಜನತೆ ಉತ್ಸಾಹದಿಂದ ಯುಗಾದಿ ಹಬ್ಬದ ಮುನ್ನ ಎಲ್ಲಾ ತರಹದ ಹಣ್ಣುಗಳನ್ನು ಹಾಗೂ ಹೊಸ ಬೇವಿನ ಮಡಿಕೆ ಖರೀದಿಸಿ, ಬೇವಿನ ಗಿಡದಿಂದ ಸ್ವಲ್ಪ ಎಲೆ ಕಿತ್ತು ಬೇವು ತಯಾರಿಸಿದ್ದರು. ಮೊದಲು ದೇವರಿಗೆ ಅರ್ಪಿಸಿ ಕುಟುಂಬದ ಎಲ್ಲಾ ಸದಸ್ಯರು ಸಂಭ್ರಮದಿಂದ ಕುಡಿದು, ಅಕ್ಕ-ಪಕ್ಕದ ಮನೆಯವರನ್ನು ಹಾಗೂ ಸ್ನೇಹಿತರನ್ನು ತಮ್ಮ ಮನೆಗೆ ಕರೆದು ಬೇವು ಕುಡಿಸುವ ಮೂಲಕ ಸಾಮರಸ್ಯದ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದರು. ಆದರೆ, ಪ್ರಸಕ್ತ ದಿನಗಳಲ್ಲಿ ಕೊರೊನಾ ವೈರಸ್ ಎಲ್ಲಾ ಭಾಗದಲ್ಲಿ ಹರಡಿರುವುದರಿಂದ ಜನರು ಆತಂಕದಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಸರ್ಕಾರ ಕೂಡ ವೈರಸ್ ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರು ಈ ವರ್ಷ ಯುಗಾದಿ ಹಬ್ಬವನ್ನು ಆಡಂಬರದಿಂದ ಆಚರಿಸದೇ ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಸೂಚಿಸಿರುವುದರಿಂದ ಜನರು ಮನೆಯಿಂದ ಹೊರಬರಲು ಬಂದಿಲ್ಲ.

ಯುಗಾದಿ ಹಬ್ಬ ಬಂದರೆ ಗ್ರಾಮೀಣ ಭಾಗದಲ್ಲಿರುವ ಗುಡಿ ಕೈಗಾರಿಕೆ ಮಾಡುವ ಕುಂಬಾರರು ಹೆಚ್ಚಿನ ಪ್ರಮಾಣದಲ್ಲಿ ಬೇವಿನ ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಆದರೆ, ಈ ವರ್ಷ ಕೊರೊನಾ ಸೋಂಕಿನ ಭೀತಿ ಅವರ ವ್ಯಾಪಾರದ ಮೇಲೆ ಕರಿ ನೆರಳು ಬೀರಿದೆ. ಇದರಿಂದ ಕುಂಬಾರರು ಕೂಡಾ ಸಂಕಷ್ಟ ಎದುರಿಸುವಂತಾಗಿದೆ.

ಮನೆಯಲ್ಲಿ ಕಳೆದರು

ಲಾಕ್‌ಡೌನ್‌ನಿಂದಾಗಿ ಹಬ್ಬದ ಸಂಭ್ರಮ ಕಂಡು ಬರಲಿಲ್ಲ. ಮನೆಗಳಲ್ಲಿಯೇ ಬೇವು, ಬೆಲ್ಲ, ಹೋಳಿಗೆ ತಯಾರಿಸಿಕೊಂಡು ಮನೆಯವರೆ ಸೇವಿಸಿದರು. ಅಕ್ಕಪಕ್ಕದ ಮನೆಯವರಿಗೆ ಕರಿದಿಲ್ಲ. ಕೆಲ ಮನೆಗಳಲ್ಲ ಹಬ್ಬವನ್ನೆ ಮುಂದೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT