ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಬೇವು ಬೆಳೆದು ಯಶ ಕಂಡ ವರ್ತಕ

ಒಂದೂವರೆ ಎಕರೆಯಲ್ಲಿ 50 ಸಾವಿರ ಗಿಡಗಳು
Last Updated 8 ಅಕ್ಟೋಬರ್ 2022, 6:31 IST
ಅಕ್ಷರ ಗಾತ್ರ

ಸುರಪುರ: ಮಸಲಾ ಅಡುಗೆಗಳಲ್ಲಿ, ಸಾಂಬಾರ್‌ನಲ್ಲಿ ಕರಿಬೇವಿಗೆ ಪ್ರಮುಖ ಸ್ಥಾನ. ಎಷ್ಟೂ ಜನ ಅದನ್ನು ತೆಗೆದು ಪಕ್ಕಕ್ಕಿಡುವುದೇ ಹೆಚ್ಚು. ಇಂಥ ಕರಿಬೇವು ಬೆಳೆದು ಹಣ ಸಂಪಾದಿಸಬಹುದು ಎಂದು ನಗರದ ವರ್ತಕ ಅನಿಲ ಕಂಡಾರೆ ನಿರೂಪಿಸಿದ್ದಾರೆ.

ರಸಗೊಬ್ಬರ ವ್ಯಾಪಾರಿಯಾಗಿರು ಅನಿಲ ಅವರಿಗೆ ತಮ್ಮ ಹತ್ತಿರ ಬರುತ್ತಿದ್ದ ಪ್ರಗತಿಪರ ರೈತರನ್ನು ಕಂಡು ತಾನೂ ರೈತನಾಗಬೇಕೆನ್ನುವ ಆಸೆಯಾಯಿತು.2 ಎಕರೆ ಹೊಲವನ್ನು ಲೀಸ್‍ಗೆ ಪಡೆದು ಮಾಹಿತಿ ಸಂಗ್ರಹಿಸಿ ಕರಿಬೇವು ಬೆಳೆಯಲು ನಿರ್ಧರಿಸಿದರು.

ಆಂಧ್ರದ ನೆಲ್ಲೂರಿನಿಂದ ಹೈಬ್ರಿಡ್ ತಳಿಯ ಕರಿಬೇವಿನ ಬೀಜ ತಂದು ನಾಟಿ ಮಾಡಿದರು. ಒಂದುವರೆ ಎಕರೆಯಲ್ಲಿ 50 ಸಾವಿರ ಗಿಡಗಳು ಸಮೃದ್ಧವಾಗಿ ಬೆಳೆದವು.

9 ತಿಂಗಳ ನಂತರ ಕಟಾವು ಆರಂಭಿಸಿದರು. ದಿನಕ್ಕೆ 50ಕ್ಕೂ ಕೆ.ಜಿಗೂ ಹೆಚ್ಚು ಕರಿಬೇವು ಬಿಕರಿಯಾಗತೊಡಗಿತು. ವ್ಯಾಪಾರಿಗಳು ತೋಟಕ್ಕೆ ಬಂದು ಕೆಜಿಗೆ ₹40–₹50ವರೆಗೆ ನೀಡಿ ಖರೀದಿಸತೊಡಗಿದರು.

ಒಂದು ತಿಂಗಳವರೆಗೂ ಕಟಾವು ಮಾಡಬಹುದು. ನಂತರ ಗಿಡ ಬೆಳೆಯಲು 3 ತಿಂಗಳು ಬೇಕು. ವರ್ಷಕ್ಕೆ 4 ಸಲ ಕಟಾವು ಮಾಡಬಹುದು. ನಿರಂತರ ಆದಾಯ. ನಿರ್ವಹಣೆ ವೆಚ್ಚ ತುಂಬಾ ಕಡಿಮೆ. ಗಿಡಗಳ ನಡುವಿನ ಅಂತರ ತುಂಬಾ ಕಡಿಮೆ. ಡಿಎಪಿ ಗೊಬ್ಬರ ನೀಡುತ್ತಾರೆ. ಸಾವಯವ ಎಣ್ಣೆ ಸಿಂಪಡಿಸುತ್ತಾರೆ. ಆಗಾಗ ಕಸ ತೆಗೆಯುತ್ತಾರೆ.
ತೋಟದಲ್ಲಿ ಬಾವಿ ಇದೆ.

15 ದಿನಕ್ಕೆ ಒಮ್ಮೆ ನೀರು ಹಾಯಿಸುತ್ತಾರೆ. ತೋಟ ನಿರ್ವಹಣೆ ಮಾಡಲು ಒಂದು ಕುಟುಂಬಕ್ಕೆ ತೋಟದಲ್ಲಿ ಶೆಡ್ ಹಾಕಿ
ಕೊಟ್ಟಿದ್ದಾರೆ.

5 ಅಡಿ ಎತ್ತರ ಬೆಳೆಯುವ ಈ ತಳಿಯ ಗಿಡವನ್ನು ಸುಲಭವಾಗಿ ಕಟಾವು ಮಾಡಬಹುದು. ಒಮ್ಮೆ ನಾಟಿ ಮಾಡಿದರೆ 25 ವರ್ಷಗಳವರೆಗೂ ಬಾಳಿಕೆ ಬರುತ್ತದೆ.

ಕರಿಬೇವಿನ ಜತೆ 150 ನುಗ್ಗೆ ಗಿಡಗಳನ್ನು ಹಾಕಿದ್ದಾರೆ. ಮೊದಲೇ ತೋಟದಲ್ಲಿ 50 ತೆಂಗಿನ ಮರಗಳಿವೆ. ನುಗ್ಗೆಕಾಯಿಯೂ ಕೆ.ಜಿಗೆ ₹60 ರಿಂದ 80 ರವರೆಗೆ ಮಾರಾಟವಾಗುತ್ತಿದೆ.

ಮಾರುಕಟ್ಟೆ ತೊಂದರೆ ಇಲ್ಲ. ಸಗಟು ಮಾರಾಟಗಾರರು ನೇರವಾಗಿ ತೋಟಕ್ಕೆ ಬಂದು ಸ್ಥಳದಲ್ಲೆ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ. ತೋಟ ಬಸ್‍ನಿಲ್ದಾಣದ ಪಕ್ಕದಲ್ಲೆ ಇರುವುದರಿಂದ ಸಂಪರ್ಕಕ್ಕೆ ತೊಂದರೆ ಇಲ್ಲ.
ಕರಿಬೇವನ್ನು ತೋಟಗಾರಿಕೆ ಬೆಳೆಯನ್ನಾಗಿ ಬೆಳೆದು ಹಣ ಗಳಿಸಬಹುದು ಎಂದು ಅನೀಲ ನಿರೂಪಿಸಿದ್ದಾರೆ. ಸಾಕಷ್ಟು ರೈತರು ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಅನಿಲ ಇತರ ರೈತರಿಗೆ
ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT