ಭಾನುವಾರ, ಜನವರಿ 19, 2020
26 °C

ಲಾರಿ–ಬಸ್‌ ಡಿಕ್ಕಿ: 1ಸಾವು, 20ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಪಟ್ಟಣದ ಹೊರವಲಯದ ಯಶೋಧಾ ಪೆಟ್ರೋಲ್ ಬಂಕ್ ಹತ್ತಿರ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಭಾನುವಾರ ಜರುಗಿದೆ.

ಇಬ್ಬರಿಗೆ ಗಂಭೀರ ಹಾಗೂ 20 ಜನರಿಗೆ ಸಣ್ಣಪುಟ್ಟ ಗಾಯಗ ಳಾಗಿವೆ. ಮೃತರನ್ನು ತೆಲಂಗಾಣ ರಾಜ್ಯದ ತಾಂಡೂರು ನಗರದ ವ್ಯಾಪ್ತಿಯ ಮಲ್ಲರೆಡ್ಡಿಪಲ್ಲಿ ಗ್ರಾಮದ ಚಂದ್ರಮ್ಮ ಬಿಚ್ಚಪ್ಪ (48) ಎಂದು ಗುರುತಿಸಲಾಗಿದೆ.

ಕೋಸಗಿ ಮೂಲದ ಯುವತಿ ಅಖಿಲಾ (17) ಅವರ ಎದೆಯ ಬಲಭಾಗದಲ್ಲಿ ಹಾಗೂ ಲಾರಿ ಚಾಲಕನಿಗೆ ಪಕ್ಕೆಲಬುಗಳಲ್ಲಿ ಕಬ್ಬಿಣದ ಸರಳು ನಾಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ ನಗರಕ್ಕೆ ಕಳುಹಿಸಲಾಗಿದೆ.

ಮೂಳೆ ಮುರಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸಾಮಾನ್ಯ ಪೆಟ್ಟುಗಳಾಗಿರುವವರಿಗೆ ಗುರುಮಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುಮಠಕಲ್ ಸಿಪಿಐ ಹೊಸಕೇರಪ್ಪ, ಪಿಎಸೈ ಶೀಲಾದೇವಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು