ವಡಗೇರಾ: ಕಣೇಕಲ್ ಗ್ರಾಮದ ರೈತರು ಬೆಳೆದ ತರಕಾರಿಯನ್ನು ಚಿತ್ರನಟ ಉಪೇಂದ್ರ ಖರೀದಿಸಿ ಅಭಿಮಾನಿಗಳ ಮೂಲಕ ಪಟ್ಟಣದಲ್ಲಿರುವ ಬಡವರಿಗೆ ನೀಡಿದ್ದಾರೆ.

ರೈತರೇ ನಿಗದಿಮಾಡಿದ ಬೆಲೆಗೆ 500 ಕೆಜಿ ಟೊಮೆಟೊ, 500 ಕೆಜಿ ಈರುಳ್ಳಿ, 500 ಕೆಜಿ ಬದನೆಕಾಯಿಗೆ ₹15,000 ಹಣ ಕೊಟ್ಟು ಅಭಿಮಾನಿಗಳು ತರಕಾರಿ ವಿತರಣೆ ಮಾಡಿದ್ದಾರೆ.

ಜಿಲ್ಲೆಯಾದ್ಯಂತ ಮೇ 28ರ ವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ತರಕಾರಿಗಳನ್ನು ಬೀದಿಗೆ ಹಾಕುವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಗಮನಿಸಿದ ಉಪೇಂದ್ರ ಅವರು ಅಭಿಮಾನಿಗಳಿಗೆ ಹಣ ನೀಡಿ ರೈತರ ಸಂಕಷ್ಟಕ್ಕೆ ನೆರವಾಗಿದ್ದಾರೆ.

ಉಪೇಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಸಾಬರೆಡ್ಡಿ ಉಪ್ಪಿ ಮಾತನಾಡಿ, ರೈತರಿಂದ ತರಕಾರಿ ಖರೀದಿಸಿ ಬಡ ಕುಟುಂಬಗಳಿಗೆ ಉಚಿತವಾಗಿ ನೀಡಬೇಕು ಎಂದು ಉಪೇಂದ್ರ ಅವರು ಹಣಕಾಸಿನ ನೆರವು ನೀಡಿದ್ದರು. ಅದರಂತೆ ಈ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಮುಖಂಡರಾದ ಸಿದ್ದನಗೌಡ ಕಾಡಂನೊರ, ಭಾಷುಮಿಯಾ ನಾಯ್ಕೋಡಿ, ಚಂದ್ರಕಲಾ ಬಾಗೂರ, ಮಲ್ಲಣ್ಣ ನೀಲಹಳ್ಳಿ, ಸಂತೋಷ್ ಬೊಜ್ಜಿ, ಫಕೀರ್ ಅಹಮದ್, ನಿಂಗು ಜಡಿ, ಶರಣು ಇಟಗಿ, ಸೈಯದ್ ಕಾರ್ಪೆಂಟರ್, ಮೈಮುದ್ ಸಾಬ್, ಯಲ್ಲಪ್ಪ, ನಿಂಗಣ್ಣ ಬೂದಿನಾಳ, ಅಂಜು ಉಪ್ಪಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.