ಗುರುಮಠಕಲ್: ಪಟ್ಟಣದ ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟದ ಅಂಗಡಿಗಳಿಗೆ ಬುಧವಾರ ಕೃಷಿ ಇಲಾಖೆಯ ಜಾರಿದಳದ ಸಹಾಯಕ ನಿರ್ದೇಶಕಿ ರೂಪಾ.ಎಂ. ಹಾಗೂ ತಂಡದವರು ಭೇಟಿ ನೀಡಿ, ಅಲ್ಲಿನ ರಸಗೊಬ್ಬರಗಳ ದಾಸ್ತಾನು, ದರ, ಮಾರಾಟದ ಮಾಹಿತಿ, ಬಿತ್ತನೆ ಬೀಜದ ಮಾದರಿಗಳನ್ನು ಪರಿಶೀಲಿಸಿದರು.

ಯಾವ ಕಂಪೆನಿ (ಬ್ರಾಂಡ್) ರಸಗೊಬ್ಬರ ಎಷ್ಟೆಷ್ಟು ದಾಸ್ತಾನಿನಲ್ಲಿದೆ. ಅದನ್ನು ಖರೀದಿಸಿದ್ದು ಹಾಗೂ ಮಾರಾಟ ಮಾಡಿದ ಕುರಿತ ಲೆಕ್ಕ ಮತ್ತು ಉಳಿದ ದಾಸ್ತಾನು ಎಷ್ಟು? ಈ ಭಾಗದ ಹೆಚ್ಚಿನ ಬೇಡಿಕೆ ಸ್ಪಿಕ್ ಬ್ರಾಂಡ್ ಡಿಎಪಿ. ಆದರೆ, ಈವರೆಗೆ ಯಾಕೆ ಇನ್ನೂ ತರಿಸಲಾಗಿಲ್ಲ ಎನ್ನುವ ಕುರಿತು ವ್ಯಾಪಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ವ್ಯಾಪಾರಿಗಳು, ‘ಸರಬರಾಜು ಮಾಡುವಲ್ಲಿಯೇ ದಾಸ್ತಾನು ಕೊರತೆಯಿದ್ದರಿಂದ ಏಪ್ರಿಲ್‌ನಲ್ಲಿಯೇ ಹಣ ಪಾವತಿಸಿದ್ದೂ ಇನ್ನು ಸರಕು ಬಂದಿಲ್ಲ’ ಎಂದು ಹೇಳಿದರು.

ರಸಗೊಬ್ಬರದ ದರ ದಿಢೀರನೆ ಏರಿಕೆಯಾಗಿದ್ದರಿಂದ ಸರ್ಕಾರ ರೈತರ ಅನುಕೂಲಕ್ಕಾಗಿ 50 ಕೆ.ಜಿ. ತೂಕದ ರಸಗೊಬ್ಬರದ ಚೀಲಗಳನ್ನು ₹ 1200 ಮಾರಾಟ ಮಾಡುವಂತೆ ನಿಗದಿಪಡಿಸಿದೆ. ಈಗ ಹೆಚ್ಚಿನ ದರದಲ್ಲಿ ಖರೀದಿಸಿದ್ದ ದಾಸ್ತಾನಿನ ವಿವರವನ್ನು ಆಯಾ ಸಂಸ್ಥೆಗಳ ಸರಬರಾಜುದಾರರಿಂದ ಪಡೆದುಕೊಂಡಿದ್ದು, ಅದಕ್ಕೂ ಸರ್ಕಾರ ಸಹಾಯಧನವನ್ನು ಕೊಡಲಿದೆ. ಆದ್ದರಿಂದ ನಿಗದಿ ಪಡಿಸಿದ ಹಣವನ್ನು ರೈತರಿಂದ ಪಡೆದು ರಸಗೊಬ್ಬರದ ಚೀಲ ನೀಡಬೇಕು ಎಂದು ಸೂಚಿಸಿದರು.

ಗಡಿ ಭಾಗವಾಗಿದುದರಿಂದ ಆಂಧ್ರ ಪ್ರದೇಶ, ತೆಲಂಗಾಣದಿಂದ ಹತ್ತಿ ಬಿತ್ತನೆ ಬೀಜವನ್ನು ಮಾರಾಟ ಮಾಡುವ ತಂಡಗಳು ಬರಲಿದ್ದು, ಕಳಪೆ ಮಟ್ಟದ ಬಿತ್ತನೆ ಬೀಜ ಮಾರಾಟ ಮಾಡುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಅಂತಹ ಅನಧಿಕೃತ ಮಾರಾಟಗಾರರಲ್ಲಿ ಬೀಜ ಖರೀದಿ ಮಾಡಬಾರದು ಎಂದು ಅವರು ರೈತರಿಗೆ ಮನವಿ ಮಾಡಿದ್ದಾರೆ.

ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್, ಸಂಜೀವಿನಿ ತಾತ್ರಿಕ ಸಹಾಯಕ ಶಿವಪುತ್ರ, ರೈತ ಸಂಪರ್ಕಕ ಕೇಂದ್ರದ ಸಿಬ್ಬಂದಿ ಇದ್ದರು.

ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿದಾಗ ಅಧಿಕೃತ ರಸೀದಿ ಪಡೆಯಬೇಕು. ನಿಮ್ಮಿಂದ ಹೆಚ್ಚುವರಿ ಹಣ ಪಡೆದರೆ ಕೂಡಲೆ ಕೃಷಿ ಇಲಾಖೆಯಲ್ಲಿ ದೂರು ನೀಡಬೇಕು
ರೂಪಾ ಎಂ. ಕೃಷಿ ಇಲಾಖೆಯ ಜಾರಿದಳದ ಸಹಾಯಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.