ಮಂಗಳವಾರ, ಜನವರಿ 31, 2023
19 °C
ವಿಶ್ವ ಏಡ್ಸ್ ದಿನಾಚರಣೆ, ಜಿಲ್ಲಾಧಿಕಾರಿ ಸೂಚನೆ

ಏಡ್ಸ್‌ ಪರೀಕ್ಷೆ ಹೆಚ್ಚಳ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಏಡ್ಸ್‌ ಕುರಿತು ಸಾರ್ವಜನಿಕ, ಯುವ ಸಮೂಹಕ್ಕೆ ಜಾಗೃತಿ ಮೂಡಿಸಬೇಕು. ಏಡ್ಸ್‌ ಪರೀಕ್ಷೆ ಹೆಚ್ಚಳ ಮಾಡಿ, ಪ್ರಕರಣ ಸಂಖ್ಯೆ ಶೂನ್ಯಕ್ಕೆ ತನ್ನಿ‘ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಅಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಹೊಸ ಬಸ್‌ ನಿಲ್ದಾಣ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ವಿಶ್ವದ್ಯಾದ್ಯಂತ ಏಡ್ಸ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಯುವಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಏಡ್ಸ್‌ಗೆ ಜಾಗೃತಿಯೊಂದೇ ಮದ್ದು. ಹೀಗಾಗಿ ಎಲ್ಲರೂ ಅರಿತು ಬಾಳಿದರೆ ಮಾರಕ ಕಾಯಿಲೆಗಳಿಗೆ ಬಲಿಯಾಗುವುದು ತಪ್ಪುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ನೆರೆಹೊರೆಯವರಿಗೆ ಮಾಹಿತಿ ನೀಡಬೇಕು‘ ಎಂದರು.

‘ಸಮಾನಗೊಳಿಸು ಅಂದರೆ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಗಳನ್ನು ಪರಿಹರಿಸೋಣ ಮತ್ತು ಏಡ್ಸ್‌ ಕೊನೆಗಾಣಿಸೋಣ’ ಎನ್ನುವ ಘೋಷ ವಾಕ್ಯ ಇದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ನಾಯ್ಕ್‌ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ‘ದೇಶದಲ್ಲಿ ಏಡ್ಸ್‌ ‍ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ತಿಳಿವಳಿಕೆ ಮೂಡಿಸಬೇಕು. ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯ ಪ್ರಕರಣಗಳಿದ್ದರೂ ಇವುಗಳನ್ನು ಇನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ‘ ಎಂದರು.

ಐಎಂಎ ಅಧ್ಯಕ್ಷ ಡಾ.ಭಗವಂತ ಅನವಾರ ಏಡ್ಸ್‌ ಕುರಿತು ಉಪನ್ಯಾಸ ನೀಡಿದರು.

ಇದಕ್ಕೂ ಮೊದಲು ವಿಶ್ವ ಏಡ್ಸ್ ದಿನ ಆಚರಣೆ ಅಂಗವಾಗಿ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದ ವರೆಗೆ ಜಾಥಾ ನಡೆಯಿತು.

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಡೀನ್‌ ಮತ್ತು ನಿರ್ದೇಶಕ ಡಾ.ಹಣಮಂತ ಪ್ರಸಾದ ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಗುರುರಾಜ ಹಿರೇಗೌಡರ್‌, ಡಾ.ಲಕ್ಷ್ಮೀಕಾಂತ, ಡಾ. ಮಲ್ಲಪ್ಪ ಕೆ., ಡಾ. ಮುಬಶಿರ್‌ ಅಹ್ಮದ ಸಾಜೀದ, ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ರವಿಶಂಕರ ಪತಂಗೆ, ಜಿಲ್ಲಾ ಏಡ್ಸ್‌ ಮತ್ತು ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಸಂಜೀವಕುಮಾರ್ ಸಿಂಗ್ ರಾಯಚೂರಕ‌ರ್‌, ಅಂಬರೀಶ ಎಚ್‌ ಭೂತಿ, ಎಚ್‌ಡಿಎಫ್‌ಸಿ ಬ್ಯಾಂಕ್, ವೈಆರ್‌ಜಿ ಕೇರ್, ಭಾಗ್ಯಜ್ಯೋತಿ ನೆಟ್‌ವರ್ಕ್‌ ಮತ್ತು ಲಾಲ್‌ಬಹದ್ದೂರ್‌ ಶಾಸ್ತ್ರಿ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು