ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಲು ಎಐಡಿಎಸ್‍ಒ ಆಗ್ರಹ

ನಾಮಫಲಕ ಹಿಡಿದು ಎಐಡಿಎಸ್‍ ಪ್ರತಿಭಟನೆ
Last Updated 17 ಜುಲೈ 2020, 16:32 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌–19 ತೀವ್ರಗತಿಯಲ್ಲಿ ಹರಡುತ್ತಿದ್ದು, ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸುವ ಎಲ್ಲ ವಿವಿಧ ಪರೀಕ್ಷೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌ಆರ್ಗನೈಸೇಷನ್ (ಎಐಡಿಎಸ್‍ಒ)ನಿಂದ ನಾಮಫಲಕಗಳನ್ನು ಹಿಡಿದು ಶುಕ್ರವಾರ ಪ್ರತಿಭಟಿಸಲಾಯಿತು.

‘ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಹಾಗೂಎಂಜಿನಿಯರಿಂಗ್‌ನ ಎಲ್ಲಾಮಾದರಿಯ ಪರೀಕ್ಷೆಗಳನ್ನು ನಡೆಸಬಾರದು.ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಪರೀಕ್ಷೆಯನ್ನು ನಡೆಸಬೇಡಿ. ಏಕರೂಪವಾದ, ತಾರತಮ್ಯವಿಲ್ಲದ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ವೈಜ್ಞಾನಿಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಿದ್ಧಪಡಿಸಿ ಉದ್ಯೋಗ ಭದ್ರತೆ ಖಾತ್ರಿಪಡಿಸಬೇಕು. ಎಲ್ಲ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಿ ಪರೀಕ್ಷಾ ಶುಲ್ಕ ರದ್ದುಗೊಳಿಸಿ, ಈಗಾಗಲೇ ಪಡೆದಿದ್ದಲ್ಲಿ ಹಿಂದಿರುಗಿಸಿ ಮತ್ತು ಸಿಇಟಿ ಪರೀಕ್ಷೆಯನ್ನು ಮುಂದೂಡಿ’ ಎಂದು ಒತ್ತಾಯಿಸಿದರು.

ಸತತ ನಾಲ್ಕು ತಿಂಗಳ ಲಾಕ್‍ಡೌನ್‍ನಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ಅತ್ಯಂತ ಯಾತನಾಮಯವಾಗುತ್ತಿದೆ. ಇದರಿಂದ ಜನಜೀವನ ಚೇತರಿಕೆ ಆಗುವುದಿರಲಿ, ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ.ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್, ಆಫ್‌ಲೈನ್‍ ಅಥವಾ ಎರಡೂ ರೀತಿಯನ್ನು ಬಳಸಿ ಪರೀಕ್ಷೆಯನ್ನು ನಡೆಸಬೇಕು ಎಂದುಕೇಂದ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಯುಜಿಸಿ ಶೈಕ್ಷಣಿಕ ಮಾರ್ಗಸೂಚಿಯನ್ನು ಹೊರತಂದಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರವು ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಹಾಗೂಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಇದೇತಿಂಗಳ ಕೊನೆಯಲ್ಲಿ ಸಿಇಟಿ ಪರೀಕ್ಷೆ ಮಾಡಲು ನಿರ್ಧರಿಸಿದೆ. ಈ ನಡೆ ಇಡೀ ರಾಜ್ಯದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ಅತ್ಯಂತ ಅಪ್ರಜಾತಂತಿಕ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ ಎಂದು ದೂರಿದರು.

ಎಐಡಿಎಸ್‍ಒ ರಾಜ್ಯ ಸಮಿತಿಯಿಂದ ನಡೆಸಿದ ಸಮೀಕ್ಷೆಯಲ್ಲಿ ಕೊರೊನಾಏರುಗತಿಯಲ್ಲಿ ಇರುವಾಗ ಪರೀಕ್ಷೆ ಬರೆಯಲು ನಮಗೆ ಜೀವಭಯವಾಗುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಪರೀಕ್ಷೆಗಳನ್ನು ರದ್ದು ಮಾಡಬೇಕು ಒತ್ತಾಯಿಸಿದರು.

‘ನಮ್ಮಜೀವ ಪಣಕ್ಕಿಟ್ಟು ನಡೆಸುವ ಪರೀಕ್ಷೆ ನಮಗೆ ಬೇಡ!’, ‘ಪ್ರಜಾತಾಂತ್ರಿಕವಲ್ಲ, ಏಕರೂಪವಲ್ಲದ, ತಾರತಮ್ಯವಾದ ಆನ್‌ಲೈನ್ ಶಿಕ್ಷಣ ಅಥವಾ ಆನ್‌ಲೈನ್ ಪರೀಕ್ಷೆ ನಮಗೆ ಬೇಡ’ ಎಂಬ ಫಲಕಗಳೊಂದಿಗೆ ವಿದ್ಯಾರ್ಥಿಗಳು ಯುಜಿಸಿ ಹಾಗೂರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನಿರ್ಧಾರದ ಬಗ್ಗೆ ತಮ್ಮಆಕ್ರೋಶವನ್ನು ವ್ಯಕ್ತಪಡಿಸಿದರು.

ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಈ ಆನ್‍ಲೈನ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಪಿ.ಸೈದಪ್ಪ,ಕಾರ್ಯದರ್ಶಿ ಬಿ.ಕೆ. ಸುಭಾಶ್ ಚಂದ್ರ, ಕೆ.ಎಸ್.ಚೇತನಾ, ಬಸವರಾಜ, ಭೀಮರಾಯ, ಭೀಮರಡ್ಡಿ, ವೆಂಕಟೇಶ, ಸೌಭಾಗ್ಯವತಿ, ವಿಶ್ವಾರಾಧ್ಯ, ಭೀಮರಾಯ, ಕಾಶಿ, ಮರಿಲಿಂಗ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT