ಯಾದಗಿರಿ: ಮೆಥೋಡಿಸ್ಟ್ ಚರ್ಚ್‌ನ ಧರ್ಮಾಧಿಕಾರಿ ಬಿಷಪ್ ಎನ್.ಎಲ್.ಕರ್ಕರೆ ಅವರುರಾಜ್ಯಕ್ಕೆ ಬಂದು 3 ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.ಬದಲಿಗೆ ಕ್ರೈಸ್ತ ಸಮುದಾಯದ ಆಸ್ತಿಪಾಸ್ತಿ ಅಕ್ರಮ ಮಾರಾಟಕ್ಕೆ ಕುಮ್ಮಕ್ಕು ನೀಡುವಂತಹ ಘಟನೆಗಳು ನಡೆಯುತ್ತಿವೆ ಎಂದು ಮೆಥೋಡಿಸ್ಟ್ ಚರ್ಚ್‌ನ ಸಭಾ ಸದಸ್ಯರು ಆರೋಪಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಿಷಪ್ ಕರ್ಕರೆಯವರು ಸಂಸ್ಥೆಯನ್ನು ರಾಜ್ಯದಲ್ಲಿ ಬೆಳೆಸುವ ಬದಲಿಗೆ ಅವರು ಈ ಸಂಸ್ಥೆಯ ಆಸ್ತಿಯನ್ನು ಅಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖಂಡರು ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತೀಯ ಮೆಥೋಡಿಸ್ಟ್ ಚರ್ಚ್‌ನ ಆಸ್ತಿ ಮಾರಾಟ ನಿರಂತರವಾಗಿ ನಡೆಯುತ್ತಿದ್ದು, ಇದರಿಂದ ಸಮುದಾಯಕ್ಕೆ ನಷ್ಟವಾಗು ತ್ತಿದೆಯೇ ಹೊರತು, ಇವರಿಂದ ಯಾವುದೇರೀತಿಯ ಲಾಭ ಸಂಸ್ಥೆಗೆ ಹಾಗೂ ಮೆಥೋಡಿಸ್ಟ್ ಸಭಾ ಸದಸ್ಯರಿಗೆ ಆಗುತ್ತಿಲ್ಲ ಎಂದು ಬಿಷಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈವೇಳೆಮಾತನಾಡಿದ ರೆವರೆಂಡ್ ಪಾಲ್ ಮಧುಕರ್, ಭಾರತದಲ್ಲಿ ಮೆಥೋಡಿಸ್ಟ್ ಸಭೆ ಸುಮಾರು ₹40 ಕೋಟಿ ನಷ್ಟದಲ್ಲಿ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಬಿಆರ್‌ಸಿ(ಬೆಂಗಳೂರು ರೀಜನಲ್ ಕಾನ್ಫರೆನ್ಸ್) ವ್ಯಾಪ್ತಿಯ ಮುಖ್ಯಸ್ಥರಾಗಿ ಇದನ್ನು ಅಭಿವೃದ್ಧಿ ಪಡಿಸುವುದು ಬಿಟ್ಟು ಇದರ ಬದಲಿಗೆ ಇಲ್ಲಿನ ಆಸ್ತಿ ಪಾಸ್ತಿ ಮಾರಾಟದಲ್ಲಿ ನಿರತರಾಗಿದ್ದಾರೆ. ಸಂಸ್ಥೆಯ ಆಸ್ತಿ ಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡುವುದು, ಆಸ್ತಿ ಒತ್ತೆ ಇಡುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ಮುಜರಾಯಿ ಇಲಾಖೆಗೆ ನಿರ್ದೇಶನ ನೀಡಿ ಕ್ರಮಕ್ಕೆ ಮುಂದಾಗಿ ನಷ್ಟ ತಪ್ಪಿಸಬೇಕು. ಅನ್ಯಾಯ ಸರಿಪಡಿಸದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ವಿಜಯಕುಮಾರ ಬೆನಕನಳ್ಳಿ, ಉದ ಯಕುಮಾರ, ಸಭಾಪತಿ ಇಮಾನುವೆಲ್ ಆರ್.ಬೆಳ್ಳಿ, ಸುಮಿತ್ರ ಬಳಿಚಕ್ರ, ಪಾಲರಾಜ್ ಯಡ್ಡಳ್ಳಿ, ಜಗದೀಶ ದಾಸನಕೇರಿ, ವಿಜಯಕುಮಾರ ಎಲ್ಹೇರಿ, ವಿಜಯಕುಮಾರ ಮಾಳಿಕೇರಿ, ರಾಜಪ್ಪ ದೊಡ್ಡಮನಿ, ಜಯಪ್ಪ ಮಾಧ್ವಾರ, ಜಯಪ್ಪ ಕಿಲ್ಲನಕೇರಾ, ಜ್ಞಾನಮಿತ್ರ ಕಣೇಕಲ್, ನತಾನಿಯೆಲ್, ಸಾಮುವೆಲ್ ಕಣೇಕಲ್, ಶಾಂತರಾಜ್ ಚಿಂತನಳ್ಳಿ, ರಾಜು ಆಶನಾಳ, ಶರಣಪ್ಪ ಕೌಳೂರು, ಡ್ಯಾನಿಯೆಲ್ ಬೆನಕನಳ್ಳಿ, ಲಾಜರ್ ತೊಟ್ಲೂರು, ಯೇಸು ಕಿಲ್ಲನಕೇರಾ, ನಿರಂಜನ ಕೋಟಗೇರಿ, ಯೇಸು ಬೆಳಗುಂದಿ, ಅನಿಲ್ ಕುಮಾರ ಸೈದಾಪುರ, ಸುಕುಮಾರ ಮೋಟ್ನಳ್ಳಿ, ಭಾಸ್ಕರ್ ಅಲ್ಲಿಪುರ, ಯೇಸಪ್ಪ ಠಾಣಗುಂದಿ, ಪ್ರವೀಣ ಹೊಸಳ್ಳಿ, ಜಾನವೆಸ್ಲಿ ಮುಂಡರಗಿ, ರಾಜು ಹೊಸಳ್ಳಿ, ಬೆಂಜಮಿನ್‌ಹಿರೇನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.