ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ಹೋಗಲಾಡಿಸಲು ವಚನ ಕ್ರಾಂತಿ

ಬಸವ ಜಯಂತಿ, ಕವಿಗೋಷ್ಠಿ: ಸಾಹಿತಿ ವೀರೇಶ ಹಳ್ಳೂರ ಅಭಿಮತ
Last Updated 8 ಮೇ 2022, 4:06 IST
ಅಕ್ಷರ ಗಾತ್ರ

ಹುಣಸಗಿ: ಮಹಿಳಾ ಶೋಷಣೆ, ಅಸಮಾನತೆ, ತಾರತಮ್ಯ ಮತ್ತಿತರ ಅನಿಷ್ಟ ಪದ್ಧತಿಗಳನ್ನು ಬಲವಾಗಿ ವಿರೋಧಿಸಿದ ಬಸವಣ್ಣನವರು, ಮೂಢನಂಬಿಕೆಗಳನ್ನು ತೊಲಗಿಸಲು ತಮ್ಮ ವಚನಗಳ ಮೂಲಕ ಬಹು ದೊಡ್ಡ ಕ್ರಾಂತಿಯನ್ನೆ ಮಾಡಿದ ಮಹಾ ಮಾನವತಾವಾದಿ ಎಂದು ಸಾಹಿತಿ ವೀರೇಶ ಹಳ್ಳೂರ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಬಸವ ಜಯಂತಿ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವೇಶ್ವರರ ಬದುಕಿನ ಹಲವು ಘಟನೆಗಳ ಕುರಿತಂತೆ ತಿಳಿಸುತ್ತ ಅವರ ವಚನಗಳಲ್ಲಿ ಸಾರವನ್ನು ಎಳೆ
ಎಳೆಯಾಗಿ ಬಿಡಿಸಿಟ್ಟರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಸುಮಾರು 15 ಕವಿಗಳು ತಮ್ಮ ಕವನಗಳ ವಾಚನ ಮಾಡುವ ಮೂಲಕ ಬಸವ ತತ್ವ, ಆರ್ಥಿಕ ಅಸಮಾನತೆ, ಪರಿಸರ ಪ್ರೇಮ, ಕೃಷ್ಣೆಯ ಕೃಪೆ , ಪ್ರೀತಿ, ಪ್ರೇಮ, ಢೋಂಗಿ ಜಾತ್ಯತೀತತೆ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ಕವನಗಳ ಮೂಲಕ ಪ್ರಸ್ತಾಪಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಸಣ್ಣ ಗೊಡ್ರಿ ಮಾತನಾಡಿ, ಕವಿಗಳಾದವರು ಪಾಲಿಸಬೇಕಾದ ಹಾಗೂ ಅನುಸರಿಸಬೇಕಾಗಿರುವ ಕೆಲ ಕರ್ತವ್ಯಗಳ ಕುರಿತು ವಿವರಿಸಿದರು. ಅಲ್ಲದೇ ಉದಯೋನ್ಮುಖ ಕವಿಗಳು ನಿತ್ಯವೂ ಅಧ್ಯಯನ ಶೀಲತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ಹುಣಸಗಿ ತಾಲ್ಲೂಕಿನಾದ್ಯಂತ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸವ ಮೂಲಕ ವಿದ್ಯಾರ್ಥಿಗಳು ಸೇರಿದಂತೆ ಕನ್ನಡ ಮನಸ್ಸುಗಳನ್ನು ಬೆಸೆಯುವ ಕಾರ್ಯ ನಿರಂತರವಾಗಿ ಮಾಡುವ ಯೋಜನೆ ಹಮ್ಮಿಕೊಂಡಿರುವದಾಗಿ ಅವರು ತಿಳಿಸಿದರು.

ಕವಿಗಳಾದ ನಬಿಲಾಲ್ ಮಕಾನದಾರ್, ವೆಂಕಟೇಶಗೌಡ ಮಾಲಿ ಪಾಟೀಲ್, ಹೆಚ್.ರಾಠೋಡ್, ಸುರೇಶ ಪತ್ತಾರ್, ಭೀಮಶೇನರಾವ್ ಕುಲಕರ್ಣಿ, ಅಬ್ದುಲ್ ಸುಭಾನ್ ಅಲಿ ಡೆಕ್ಕನ್, ಈರಯ್ಯ ಕೊಳ್ಳಿಮಠ, ಶಿವಲೀಲಾ ಮುರಾಳ, ಬೋರಮ್ಮ ಯಡಿಯೂರಮಠ, ಮಹ್ಮದ ರಫೀ,ನಾಗನಗೌಡ ಪಾಟೀಲ್, ಗುರುನಾಥ ನಾವದಗಿ, ಬಸವರಾಜ ಕೋಳಕೂರ, ಕಾಂತೇಶ ಹಲಗಿಮನಿ, ಭೀಮಣ್ಣ ನಾಯ್ಕೋಡಿ, ಚಳಿಗೆಪ್ಪ ಕಟ್ಟಿಮನಿ, ಮಶಾಕ ಯಾಳಗಿ, ರಮೇಶ ಮೀರಜಕರ್ ಭಾಗವಹಿಸಿದ್ದರು.ರಾಘವೇಂದ್ರ ಕಾಮನಟಗಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಮೇಲಿನಮನಿ ನಿರೂಪಿಸಿದರು. ಮಲ್ಲಣ್ಣ ಡಂಗಿ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT