ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ವಾರದ ಮಾರುಕಟ್ಟೆ; ಸೊಪ್ಪುಗಳ ದರ ಇಳಿಕೆ

ಬೀನ್ಸ್‌, ಗಜ್ಜರಿ ಬೆಲೆ ಯಥಾಸ್ಥಿತಿ, ಕೆಲ ತರಕಾರಿಗಳ ದರವೂ ಸ್ಥಿರ
Last Updated 13 ನವೆಂಬರ್ 2022, 6:24 IST
ಅಕ್ಷರ ಗಾತ್ರ

ಯಾದಗಿರಿ: ತರಕಾರಿ ಮಾರುಕಟ್ಟೆಯಲ್ಲಿ ಈ ಬಾರಿ ಸೊಪ್ಪುಗಳ ದರ ಇಳಿಕೆಯಾಗಿದ್ದು, ಕೆಲ ತರಕಾರಿಗಳ ಬೆಲೆಯೂ ಕಡಿಮೆಯಾಗಿದೆ.

ಹಲವು ದಿನಗಳಿಂದ ಏರುಗತಿಯಲ್ಲಿದ್ದ ಬೀನ್ಸ್‌, ಗಜ್ಜರಿ ಬೆಲೆ ಸ್ಥಿರವಾಗಿದ್ದು, ಟೊಮೆಟೊ ಬೆಲೆಯೂ ಇಳಿಕೆಯಾಗಿದೆ. ಕಳೆದ ಮೂರು ವಾರಗಳಿಂದ ಹೆಚ್ಚಿದ್ದ ತರಕಾರಿ ಬೆಲೆ ಈಗ ₹25 ರಿಂದ 30 ಟೊಮೆಟೊಗೆ ಇಳಿಕೆಯಾಗಿದೆ.

ಹೊಸ ಈರುಳ್ಳಿ ₹40ರಿಂದ 45 ಕೆಜಿ ಇದ್ದರೆ, ಹಳೆ ಈರುಳ್ಳಿ ₹50 ಕೆಜಿ ಇದೆ. ಬದನೆಕಾಯಿ ಕಳೆದ ವಾರ ₹70–80 ಇದ್ದರೆ ಈ ವಾರ ₹50–60 ಕೆಜಿ ದರ ಇದೆ. ಬೀನ್ಸ್, ಗಜ್ಜರಿ ₹80-90 ಕೆಜಿ ಇದೆ. ತೊಂಡೆಕಾಯಿ, ಅವರೆಕಾಯಿ ₹60–70, ಮೆಣಸಿನಕಾಯಿ ಕಳೆದ ವಾರಕ್ಕಿಂತ ₹10 ಹೆಚ್ಚಳವಾಗಿದೆ.


ಅಗ್ಗವಾದ ಸೊಪ್ಪುಗಳ ದರ:

ಕಳೆದ ವಾರಕ್ಕಿಂತ ಈ ವಾರ ಸೊಪ್ಪುಗಳ ದರ ಅಗ್ಗವಾಗಿದೆ. ಮೆಂತ್ಯೆ ಸೊಪ್ಪು ಮಾತ್ರ ದರ ಹೆಚ್ಚಳವಾಗಿದ್ದು, ಉಳಿದ ಸೊಪ್ಪುಗಳು ₹5ಗೆ ಒಂದು ಕಟ್ಟು ಸಿಗುತ್ತಿದೆ. ಹಲವು ದಿನಗಳಿಂದ ₹10ಗೆ ಒಂದು ಕಟ್ಟು, ₹20ಗೆ ಮೂರು ಕಟ್ಟು ಮಾರಾಟ ಮಾಡಲಾಗುತ್ತಿದೆ.

ಮೆಂತ್ಯೆ ಸೊಪ್ಪು ₹20–25 ಒಂದು ಕಟ್ಟು, ಸಬ್ಬಸಗಿ, ಪಾಲಕ್‌, ಪುಂಡಿ ಪಲ್ಯೆ, ರಾಜಗಿರಿ, ₹5ಗೆ ಒಂದು ಕಟ್ಟು ಸೊಪ್ಪು ಮಾರಾಟ ಮಾಡಲಾಗುತ್ತಿದೆ. ಕೊತಂಬರಿ ₹15–20 ಒಂದು ಕಟ್ಟು, ಪುದೀನಾ ₹15–20 ಒಂದು ಕಟ್ಟು, ಕರಿಬೇವು ₹70–80 ಕೆಜಿ, ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ₹100–120, ಶುಂಠಿ ₹60–70, ನಿಂಬೆಹಣ್ಣು ದರ ₹10ಗೆ ಮೂರು ಇದೆ. ₹5ಗೆ ಒಂದು ಮಾರಾಟವಾಗುತ್ತಿದ್ದು, ಈಗ ಅಗ್ಗವಾಗಿದೆ.

*****

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ;25–30
ಆಲೂಗಡ್ಡೆ;30–35
ಈರುಳ್ಳಿ;40–45
ಬದನೆಕಾಯಿ;50–60
ಬೆಂಡೆಕಾಯಿ;40–50
ದೊಣ್ಣೆಮೆಣಸಿನಕಾಯಿ;60–70
ಎಲೆಕೋಸು;50–60
ಹೂಕೋಸು;60–70
ಚವಳೆಕಾಯಿ;60–70
ಬೀನ್ಸ್; 80–90
ಗಜ್ಜರಿ;80-90
ಸೌತೆಕಾಯಿ; 50–60
ಮೂಲಂಗಿ;40-50
ಮೆಣಸಿನಕಾಯಿ;60-70
ಸೋರೆಕಾಯಿ;50–60
ಬಿಟ್‌ರೂಟ್;60-70
ಹೀರೆಕಾಯಿ;50-60
ಹಾಗಲಕಾಯಿ;50-60
ತೊಂಡೆಕಾಯಿ;60-70
ಅವರೆಕಾಯಿ;60–70

***

ತರಕಾರಿ, ಸೊಪ್ಪುಗಳ ದರ ಇಳಿಕೆಯಾಗಿದ್ದು, ಸೊಪ್ಪುಗಳ ಆವಕ ಆಗುತ್ತಿದ್ದರಿಂದ ಬೆಲೆ ಕಡಿಮೆಯಾಗಿದೆ

ಗೋವಿಂದ ಹೊಸಮನಿ ಶೆಟ್ಟಗೇರಾ, ತರಕಾರಿ ವ್ಯಾಪಾರಿ

***

ಕಳೆದ ವಾರಕ್ಕಿಂತ ಈ ವಾರ ತರಕಾರಿ, ಸೊಪ್ಪುಗಳ ದರ ಇಳಿಕೆಯಾಗಿದ್ದು, ಗ್ರಾಹಕರಿಗೆ ಸ್ವಲ್ಪಮಟ್ಟಿಗಿನ ಹೊರೆ ಕಡಿಮೆಯಾಗಿದೆ

ಸಾಬರೆಡ್ಡಿ ಕೌಳೂರು, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT