ಭಾನುವಾರ, ಆಗಸ್ಟ್ 14, 2022
20 °C

ಯಾದಗಿರಿ: ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಭಾರತ್ ಬಂದ್ ಅಂಗವಾಗಿ ಮಂಗಳವಾರ ನಗರದ ಹೊಸ ಬಸ್ ನಿಲ್ದಾಣ ಬಳಿ ರೈತ, ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಕಾರ್ಮಿಕ, ರೈತ ಪರ ಸಂಘಟನೆಗಳ ಪದಾಧಿಕಾರಿಗಳು ಧಿಕ್ಕಾರ ಕೂಗಿದರು.

ನಗರದ ಪ್ರಮುಖ ವೃತ್ತಗಳ ಸಮೀಪ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೂ, ಹಣ್ಣು, ತಳ್ಳುಗಾಡಿಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಅಂಗಡಿ ಮುಗ್ಗಟ್ಟುಗಳು ತೆಗೆದಿವೆ. ಆಟೊ, ಬಸ್ ಸಂಚಾರ ವ್ಯತ್ಯಯವಾಗಿಲ್ಲ.

ಇದನ್ನೂ ಓದಿ: LIVE | ‘ಭಾರತ್‌ ಬಂದ್‌': ರಾಜ್ಯದಲ್ಲೂ ಪ್ರತಿಭಟನೆಯ ಕಾವು!

ಪ್ರತಿಭಟನೆಯಲ್ಲಿ ಆರ್ ಕೆಎಸ್, ಎಐಡಿಎಸ್ಒ, ಎಐಯುಟಿಯುಸಿ‍ ಸೇರಿದಂತೆ ಕಾರ್ಮಿಕ, ರೈತ ಸಂಘಟನೆಗಳು ಭಾಗವಹಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು