ಮಂಗಳವಾರ, ಮಾರ್ಚ್ 2, 2021
31 °C

ಯಾದಗಿರಿ: ಇಳೆಗೆ ತಂಪೆರದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದೆ.

ನಗರದ ಚಿತ್ತಾಪುರ ರಸ್ತೆಯಲ್ಲಿ ಮಳೆ ನೀರು ನಿಂತು ಆವಾಂತರ ಸೃಷ್ಟಿಯಾಗಿತ್ತು. ಸ್ಟೇಷನ್‌ ರಸ್ತೆಯಲ್ಲಿ ಮಳೆಯಿಂದ ನೀರು ರಸ್ತೆ ಮೇಲೆ ನಿಂತಿತು. ಗಾಂಧಿ ವೃತ್ತದ ತಗ್ಗು ಪ‍್ರದೇಶದಲ್ಲಿ ನೀರು ನಿಂತಿತ್ತು. ಬಿಸಿಲಿನ ಬೇಗೆಯಿಂದ ನರಳುತ್ತಿದ್ದ ಜನತೆಗೆ ಮಳೆಯ ನಂತರ ತಂಪಿನ ಅನುಭವಾಯಿತು.

ಸುರಪುರ, ಸೈದಾಪುರ, ವಡಗೇರಾ, ಯರಗೋಳ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬೆಳಿಗ್ಗೆಯಿಂದ ಪ್ರಖರ ಬಿಸಿಲಿನ ವಾತಾರವಣ ಇತ್ತು. ಸಂಜೆ ವೇಳೆಗೆ ಬಿರುಗಾಳಿ ಬೀಸಿದ ನಂತರ ಮಳೆಯಾಯಿತು.

ಗ್ರಾಮೀಣ ಭಾಗದಲ್ಲಿ ಮುಂಗಾರು ಬಿತ್ತನೆಗೆ ಸಿದ್ಧತೆಯಲ್ಲಿ ತೊಡಗಿದ್ದು, ಮಳೆಯೂ ಭೂಮಿಗೆ ತಂಪನ್ನು ತಂದಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು