ಕಕ್ಕೇರಾ: ಸಮೀಪದ ಶಾಂತಪೂರ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಕಾರ್ಯಕರ್ತರು ಶಾಸಕ ರಾಜೂಗೌಡರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರಿದರು.
ಈ ವೇಳೆ ಮಾತನಾಡಿದ ಶಾಸಕ ರಾಜೂಗೌಡ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ತಾಲ್ಲೂಕಿನಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಶ್ರಮಿಸಿ ಅಭಿವೃದ್ಧಿ ಕೆಲಸಗಳನ್ನು ಮನೆಮನೆಗೆ ತಲುಪಿಸಿ, ಬೂತ್ ಮಟ್ಟದ ಕೆಲಸವಾಗಬೇಕು ಎಂದು ಹೇಳಿದರು.
ಮುಖಂಡರಾದ ಯಲ್ಲಪ್ಪ ಕುರಕುಂದಿ, ಹೆಚ್.ಸಿ.ಪಾಟೀಲ, ದೇವಿಂದ್ರಪ್ಪಗೌಡ ಮೇಟಿ, ಮಲ್ಕಪ್ಪ ಉಡೇದ, ರತ್ನರಾಜ ಶಾಲಿಮನಿ, ಮಲ್ಲು ದಂಡಿನ್, ಬಸವರಾಜ ದಳಪತಿ, ಸೋಪಣ್ಣ ಹಾಲಭಾವಿ, ಸೋಪಣ್ಣ ಸಾಹುಕಾರ್, ಮಲ್ಲು ಹಾಲಭಾವಿ, ಬಸಪ್ಪ ಹಾಲಭಾವಿ, ಜಗದೇವ ಹುಜರತ್ತಿ, ಭೀಮಣ್ಣ ಹುಲಕಲ್, ಹೈಯ್ಯಾಳಪ್ಪ ಕುರಕುಂದಿ, ಭೀಮಣ್ಣ ಗುಡಗುಂಟಿ, ಸಿದ್ದಪ್ಪ ಚನ್ನೂರ, ಸೋಮಲಿಂಗಪ್ಪ ಐದಬಾವಿ, ಅಂಬ್ರೇಶ ಹುಜರತ್ತಿ, ಪರಮಣ್ಣ ಹಾಲಭಾವಿ, ನೂರಾರು ಜನ ಕಾರ್ಯಕರ್ತರು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.