ಬುಧವಾರ, ಮೇ 25, 2022
22 °C

‘ಬೌದ್ಧಿಕ ಹಕ್ಕು ಕಾನೂನುಸದ್ಬಳಕೆ ಮಾಡಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಬೌದ್ಧಿಕ ಹಕ್ಕು ಕಾನೂನು (ಐ.ಪಿ.) ವಾಣಿಜ್ಯ ಕಾರ್ಯ ಸಾಧ್ಯತೆ, ಬಳಕೆ, ಮಾರುಕಟ್ಟೆ, ವಿತರಣೆ, ಮಾಲೀಕತ್ವ, ಬಳಕೆಯ ಹಕ್ಕುಗಳು, ಉಲ್ಲಂಘನೆ ಅಥವಾ ನಕಲು ಇತರವುಗಳ ಮೇಲೆ ಅಗತ್ಯ ರಕ್ಷಣೆ ನೀಡುತ್ತದೆ. ಐ.ಪಿ. ಕಾನೂನನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದು ಐ.ಪಿ. ಕಾನೂನು ತಜ್ಞ ಖರಗಪುರ ಐಐಟಿ ಪದವೀಧರ ಜ್ಞಾನತೇಜ ಹೇಳಿದರು.

ನಗರದ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಿವಂಗತ ಬಸವರಾಜಪ್ಪ ಅಪ್ಪಾ ಮತ್ತು ನಳಿನಿ ತಾಯಿ ಸ್ಮರಣಾರ್ಥ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾ ರದಲ್ಲಿ ಅವರು ಮಾತನಾಡಿದರು.

‘ಐ.ಪಿ. ಮಾನವನ ಬುದ್ಧಿ ಶಕ್ತಿಯ ಅಮೂರ್ತ ಸೃಷ್ಠಿಯನ್ನು ಒಳಗೊಂಡಿರುವ ಆಸ್ತಿಯ ಒಂದು ವರ್ಗ. ಇದು ಆವಿಷ್ಕಾರ, ಚಿಹ್ನೆಗಳು, ಹೆಸರುಗಳು, ಚಿತ್ರಗಳಂತಹ ಮನಸ್ಸಿನ ಸೃಷ್ಠಿಯನ್ನು ಸೂಚಿಸುತ್ತದೆ. ಕೃತಿಸೌಮ್ಯ, ಪೇಟೆಂಟ್, ಟ್ರೇಡ್‍ಮಾರ್ಕ್, ಕೈಗಾರಿಕಾ ವಿನ್ಯಾಸ, ವ್ಯಾಪಾರ ರಹಸ್ಯ, ಭೌಗೋಳಿಕ ಸೂಚನೆಗಳು ಬೌದ್ಧಿಕ ಆಸ್ತಿಗಳಾಗಿವೆ’ ಎಂದರು.

‘ವಿವಿಧ ರೀತಿಯ ಬೌದ್ಧಿಕ ಸರಕುಗಳ ರಚನೆಯನ್ನು ಉತ್ತೇಜಿಸುವುದು ಐ.ಪಿ. ಕಾನೂನಿನ ಉದ್ದೇಶ. ಆವಿಷ್ಕರಿಸಿದ, ರಚಿಸುವುದರಿಂದ ಮಾನ್ಯತೆ ಪಡೆದು ಆರ್ಥಿಕ ಲಾಭಗಳನ್ನು ಗಳಿಸಲು ಇದು ಸಶಕ್ತಗೊಳಿಸುತ್ತದೆ. ಸೃಜನಶೀಲತೆ, ನಾವೀನ್ಯತೆ, ಅಭಿವೃದ್ಧಿ ಹೊಂದುವ ವಾತಾವರಣವನ್ನು ಬೆಳೆಸಲು ಸಹಕರಿಸುತ್ತದೆ’ ಎಂದು ವಿವರಿಸಿದರು.

ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಕಾರ್ಯಾಗಾರ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಶರಣಬಸಪ್ಪ ಸಾಲಿ ಅಧ್ಯಕ್ಷತೆ ವಹಿಸಿದ್ದರು.

ಮೋಹನರೆಡ್ಡಿ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ವಿದ್ಯಾರ್ಥಿಗಳು ಜ್ಞಾನತೇಜ ಅವರೊಂದಿಗೆ ಸಂವಾದ ನಡೆಸಿದರು. ಗಂಗಾಧರ ಹೂಗಾರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು