ಯಾದಗಿರಿ: ಕೋವಿಡ್–19 ಬಗ್ಗೆ ಹೊರಗಡೆ ಇರುವ ಸ್ಥಿತಿಗೂ ಆಸ್ಪತ್ರೆಯಲ್ಲಿರುವ ವಾಸ್ತವಿಕ ಪರಿಸ್ಥಿತಿಗೂ ತುಂಬಾ ಭಿನ್ನತೆಯಿದೆ. ಕೋವಿಡ್ ಸೋಂಕಿನ ಕುರಿತ ಅರಿವಿಗಿಂತ ಭಯ ಹೆಚ್ಚಿದೆ. ಇದರಿಂದ ಆತಂಕ ಸಹಜ. ಆದರೆ, ಆತ್ಮಸ್ಥೈರ್ಯ ಜೊತೆಗಿದ್ದರೆ ಕೊರೊನಾ ನಮಗೇನೂ ಮಾಡಲ್ಲ. ಮೊದಲು ಭಯ ಮುಕ್ತರಾಗಬೇಕು.

ಆಸ್ಪತ್ರೆಯಲ್ಲಿ ಇರುವಾಗ ಬೆಳಿಗ್ಗೆ ಮತ್ತು ಸಂಜೆ ವೇಳೆ ಯೋಗ, ಧ್ಯಾನ ಮಾಡುತ್ತಿದ್ದೆ. ಇದು ಮೊದಲಿಂದ ಅಭ್ಯಾಸ ಇರುವುದರಿಂದ ಸಹಜವಾಗಿ ಮಾಡುತ್ತಿದ್ದೇನೆ. ಮನೆಯಲ್ಲಿ ವಾಸವಿಲ್ಲ ಎಂಬುದು ಹೊರತುಪಡಿಸಿದರೆ ಸಹಜವಾಗಿಯೇ ಇದ್ದೆ. ಕೋವಿಡ್ ಬಂತೆಂದು ಭಯ ಬೀಳುವುದು ಬೇಡ. ಅದೊಂದು ಸೋಂಕು ಅಷ್ಟೆ. ನಮ್ಮ ಧೈರ್ಯವೇ ನಮ್ಮನ್ನು ಸೋಂಕಿನ ವಿರುದ್ಧ ಪುಟಿದೇಳುವಂತೆ ಮಾಡುತ್ತದೆ.

ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಮಾಸ್ಕ್ ಧರಿಸಿ, ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಿ. ಆಗಾಗ್ಗೆ ಬಿಸಿ ನೀರು ಸೇವಿಸಿ. ಮನೆ ಮದ್ದು ಬಳಸಿ. ಭಯಪಡುವುದು ಬೇಡ. ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಗಮನ ಹರಿಸಬೇಕು.

ಅನಿಲ ದೇಶಪಾಂಡೆ, ಕೋವಿಡ್ ಗೆದ್ದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.