ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮತ್ತೆ 22 ಜನರಿಗೆ ಕೋವಿಡ್‌ ದೃಢ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 809ಕ್ಕೆ ಏರಿಕೆ
Last Updated 14 ಜೂನ್ 2020, 16:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಭಾನುವಾರ 4 ವರ್ಷದ ಬಾಲಕಿ ಸೇರಿದಂತೆ 22 ಜನರಿಗೆ ಕೋವಿಡ್‌ ದೃಢಪಟ್ಟಿದೆ.

ಯಾದಗಿರಿ ನಗರದ 41 ವರ್ಷದ ಪುರುಷ, ಮೈಲಾಪುರ ಅಗಸಿಯ 62 ವರ್ಷದ ಪುರುಷ, 29 ವರ್ಷದ ಪುರುಷ, 25 ವರ್ಷದ ಮಹಿಳೆ, 21 ವರ್ಷದ ಮಹಿಳೆ, ತಾಲ್ಲೂಕಿನ ಯರಗೋಳ ತಾಂಡಾದ 28 ವರ್ಷದ ಮಹಿಳೆ, 10 ವರ್ಷದ ಬಾಲಕಿ, 4 ವರ್ಷದ ಬಾಲಕಿ, ಅಲ್ಲಿಪುರ ತಾಂಡಾದ 8 ವರ್ಷದ ಬಾಲಕಿ, ಶಹಾಪುರ ತಾಲ್ಲೂಕಿನ ಉಕ್ಕಿನಾಳ ಗ್ರಾಮದ 33 ವರ್ಷದ ಮಹಿಳೆ, ಗುರುಮಠಕಲ್ ತಾಲ್ಲೂಕಿನ ಕೊಂಕಲ್ ಗ್ರಾಮದ 32 ವರ್ಷದ ಪುರುಷ, ಗಾಜರಕೋಟದ 50 ವರ್ಷದ ಪುರುಷ, 24 ವರ್ಷದ ಮಹಿಳೆ, ಕರಣಗಿ ಗ್ರಾಮದ 17 ವರ್ಷದ ಯುವತಿ, ವಡಗೇರಾದ 21 ವರ್ಷದ ಪುರುಷ, ನಾಯ್ಕಲ್ ಗ್ರಾಮದ 18 ವರ್ಷದ ಯುವತಿ, 6 ವರ್ಷದ ಬಾಲಕಿಸೇರಿದಂತೆ 22 ಜನರಿಗೆ ಕೋವಿಡ್‌ ದೃಢಪಟ್ಟಿದೆ.

ಸುರಪುರ ತಾಲ್ಲೂಕಿನ ಕೆಂಭಾವಿಯ 22 ವರ್ಷದ ಮಹಿಳೆ, ಮಲ್ಲಾ ಬಿ. ಗ್ರಾಮದ 28 ವರ್ಷದ ಪುರುಷ, 26 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 22 ಜನ ಸೋಂಕಿತರಲ್ಲಿ 15 ಮಹಿಳೆಯರು, 7 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಬಂದವರು.

ಕ್ವಾರಂಟೈನ್‌ನಲ್ಲಿದ್ದ ಮೂವರಿಗೆ ಕೋವಿಡ್

ಕೆಂಭಾವಿ: ಪಟ್ಟಣದಲ್ಲಿ ಭಾನುವಾರ ಮತ್ತೆ ಮೂರು ಜನರಿಗೆಕೋವಿಡ್‌ಸೋಂಕು ತಗುಲಿದ್ದು, ಇದರಿಂದ ಪಟ್ಟಣದ ಜನತೆಯಲ್ಲಿ ಮತ್ತೆ ಆತಂಕ ಶುರು ಆಗಿದೆ.

ಮಹಾರಾಷ್ಟ್ರ ರಾಜ್ಯದಿಂದ ಬಂದ ವಲಸಿಗರು ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೈಂಟನ್ ಒಳಪಟ್ಟಿದ್ದರು. ಪಟ್ಟಣದ ವಾರ್ಡ್ ನಂ.16ರ 22 ವರ್ಷದ ಯುವತಿ ಮತ್ತು ಸಮೀದ ಮಲ್ಲಾ ಗ್ರಾಮದ 28 ವರ್ಷದ ಯುವಕ ಹಾಗೂ 26 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದ್ದು, ಅವರನ್ನು ಜಿಲ್ಲಾ ಕೇಂದ್ರದಕೋವಿಡ್‌ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕಂದಾಯ ನಿರೀಕ್ಷಕ ರಾಜೇಸಾಬ ಕಂದಗಲ್ ತಿಳಿಸಿದರು.

ಕಳೆದ ಹದಿನೈದು ದಿನಗಳಲ್ಲಿ ಪಟ್ಟಣದಲ್ಲಿ 3 ಮತ್ತು ವಲಯದಲ್ಲಿ 5ಕೋವಿಡ್‌ಕೇಸ್‍ಗಳು ದೃಢಪಟ್ಟಿದ್ದು, ಮುಂದಿನ ದಿನಗಳಲ್ಲಿ ಇಡೀ ಪಟ್ಟಣವೆ ಸೀಲ್‍ಡೌನ್ ಆಗುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT