ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | 2 ವರ್ಷದ ಬಾಲಕನಿಗೆ ಕೋವಿಡ್ ದೃಢ

ಜಿಲ್ಲೆಯಲ್ಲಿ 11ಕ್ಕೆ ಏರಿಕೆಯಾದ ಕೋವಿಡ್‌–19 ಸೋಂಕಿತರ ಸಂಖ್ಯೆ
Last Updated 19 ಮೇ 2020, 15:48 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ ಎರಡು ವರ್ಷದಬಾಲಕನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದರಿಂದ ಕೋವಿಡ್-19 ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಯಾದಗಿರಿ ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಎರಡು ವರ್ಷದ ಬಾಲಕ (ರೋಗಿ ಸಂಖ್ಯೆ ಪಿ-1256) ಕೊರೊನಾ ಸೋಂಕಿಗೆ ತುತ್ತಾಗಿದ್ದಾನೆ. ಪೋಷಕರು ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈನಿಂದ ಟೆಂಪೋ ವಾಹನದಲ್ಲಿ ಜಿಲ್ಲೆಗೆ ಮೇ 14ರಂದು ಜಿಲ್ಲೆಗೆ ಬಂದಿದ್ದರು. ಈಬಾಲಕನ ಕುಟುಂಬವನ್ನುಗುರುಮಠಕಲ್ ತಾಲ್ಲೂಕಿನ ಗುಂಜನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಮಗುವಿನ ಗಂಟಲು ದ್ರವದ ಮಾದರಿ ಪಾಸಿಟಿವ್ ಬಂದ ನಂತರ ಯಾದಗಿರಿಯ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಅವಲೋಕನೆಗಾಗಿ ಇರಿಸಲಾಗಿದೆ.

174 ಜನ ಕ್ವಾರಂಟೈನ್‌ನಲ್ಲಿ: ಗುಂಜನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಲ್ಲಿ 174 ಜನರಿದ್ದಾರೆ.ಪ್ರಾಥಮಿಕ ಸಂಪರ್ಕದಲ್ಲಿ 17 ಜನ, ದ್ವಿತೀಯ ಸಂಪರ್ಕದಲ್ಲಿ 156 ಜನರಿದ್ದಾರೆ. ತಂದೆ ತಾಯಿಯನ್ನು ಯಾದಗಿರಿಯ ಐಸೊಲೇಷನ್‌ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಆದರೆ, ಸೋಂಕಿತ ಬಾಲಕನ ಅಕ್ಕಳಿಗೆ ನೆಗೆಟಿವ್‌ ವರದಿ ಬಂದಿದೆ. ಹೀಗಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

38,409 ಜನರ ಜ್ವರ ತಪಾಸಣೆ: ಜಿಲ್ಲೆಯಲ್ಲಿ ತೆರೆಯಲಾದ 5 ಜ್ವರ ತಪಾಸಣೆ ಕೇಂದ್ರಗಳಲ್ಲಿ ಮಂಗಳವಾರ 602 ಜನ ಸೇರಿದಂತೆ ಮೇ 19ರವರೆಗೆ ಒಟ್ಟು 38,409 ಜನರ ಜ್ವರ ತಪಾಸಣೆ ಮಾಡಲಾಗಿದೆ ಎಂದುಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಣಸಗಿ ತಾಲ್ಲೂಕಿನ ಸರ್ಕಾರಿ ಬಾಲಕರ ಪ್ರೌಢಶಾಲೆ ಕೇಂದ್ರದಲ್ಲಿ ಮಂಗಳವಾರ 79 ಜನ ಸೇರಿದಂತೆ ಒಟ್ಟು 4,542 ಜನ, ಸುರಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 22 ಸೇರಿದಂತೆ ಒಟ್ಟು 8,664 ಜನ, ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಯುಕೆಪಿ ಆಸ್ಪತ್ರೆಯಲ್ಲಿ 108 ಸೇರಿದಂತೆ ಒಟ್ಟು 6,426 ಜನ, ಗುರುಮಠಕಲ್‍ನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ 90 ಸೇರಿದಂತೆ ಒಟ್ಟು 4,777 ಜನ, ಯಾದಗಿರಿ ಆಯುಷ್‌ಆಸ್ಪತ್ರೆಯಲ್ಲಿ 303 ಸೇರಿದಂತೆ ಒಟ್ಟು 14,000 ಜನರ ಜ್ವರ ತಪಾಸಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

***
ಜಿಲ್ಲೆಯ 119 ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಮೇ 19ರಂದು ಸೇರ್ಪಡೆಯಾಗಿರುವ 853 ಜನ ಸೇರಿದಂತೆ 8,520 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.
-ಪ್ರಕಾಶ್ ಜಿ.ರಜಪೂತ್, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT