ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ | ಸ್ಥಳೀಯ ಮಡಕೆಗೆ ಹೊರ ರಾಜ್ಯದಲ್ಲೂ ಬೇಡಿಕೆ

ಯರಗೋಳ ಸಮೀಪದ ಬೊಮ್ಮಶೆಟ್ಟಹಳ್ಳಿ ಕುಂಬಾರರು
Published 31 ಮಾರ್ಚ್ 2024, 6:06 IST
Last Updated 31 ಮಾರ್ಚ್ 2024, 6:06 IST
ಅಕ್ಷರ ಗಾತ್ರ

ಯರಗೋಳ: ದಿನೇ ದಿನೇ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಸಾರ್ವಜನಿಕರು ಮಣ್ಣಿನ ಮಡಕೆಗಳ ಬಳಕೆಯತ್ತ ಚಿತ್ತ ಹರಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಕುಂಬಾರರು ತಯಾರಿಸುವ ಸಾಂಪ್ರದಾಯಿಕ ಮಡಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ.

ಇಲ್ಲಿಗೆ ಸಮೀಪದ ಬೊಮ್ಮಶೆಟ್ಟಹಳ್ಳಿ 800 ಜನಸಂಖ್ಯೆ ವಾಸ ಮಾಡುವ ಬೊಮ್ಮಶೆಟ್ಟಹಳ್ಳಿ ಗ್ರಾಮದಲ್ಲಿ 12ಕ್ಕು ಹೆಚ್ಚು ಕುಂಬಾರರ ಕುಟುಂಬಗಳು, ಸಾಂಪ್ರದಾಯಿಕ ಶೈಲಿಯ ಕೆರೆಯ ಜೇಡಿ ಮಣ್ಣು ಬಳಸಿ, ಕಪ್ಪು ಮತ್ತು ಕೆಂಪು ಮಡಿಕೆ ತಯಾರಿಸಿ, ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ರಫ್ತು ಮಾಡುತ್ತಿದ್ದಾರೆ.

ಕೆರೆಯಲ್ಲಿ ನೀರು ಕಡಿಮೆಯಾದಾಗ ಫಲವತ್ತದ ಕಪ್ಪು ಮಣ್ಣನ್ನು ಟ್ರ್ಯಾಕ್ಟರ್ ಸಹಾಯದಿಂದ ಮನೆಯ ಅಂಗಳದಲ್ಲಿ ಸಂಗ್ರಹಿಸಿ, ಯಂತ್ರದ ನೆರವಿನಿಂದ ಮಣ್ಣು ಪುಡಿ ಮಾಡಿ, ಹರಳು ಇರದಂತೆ ಸೋಸಿ, ಒಂದು ಪ್ರದೇಶದಲ್ಲಿ ಗುಡ್ಡೆ ಹಾಕುತ್ತಾರೆ. ಚಳಿಗಾಲದ ಹೊತ್ತಲ್ಲಿ ಮಡಿಕೆ ತಯಾರಿಸುವ ಕುಂಬಾರರು ಉಸುಕು ಮತ್ತು ಕಪ್ಪು ಮಣ್ಣನು ಮಿಶ್ರಣ ಮಾಡಿ, ಯಂತ್ರದಿಂದ ಸಹಾಯದಿಂದ ಮೃದುಗೊಳಿಸಿ, ವಿವಿಧ ರೀತಿಯ ಮಡಕೆಗಳು, ಗೃಹ ಉಪಯೋಗಿ ಸಾಮಗ್ರಿಗಳು ತಯಾರಿಸುತ್ತಾರೆ.

‘ಮಡಕೆಗಳ ದರ ₹10ರಿಂದ ₹350 ತನಕ ಇದೆ. 5,10,15, 20 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಮಡಕೆಗಳಿಗೆ ಬೇಡಿಕೆ ಹೆಚ್ಚಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣದ ವ್ಯಾಪಾರಿಗಳು ಗ್ರಾಮಕ್ಕೆ ಬಂದು, ಮಡಕೆಗಳನ್ನು ಖರೀದಿಸಿ, ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಕೋವಿಡ್‌  ಸಮಯದಲ್ಲಿ ಮಡಕೆ ವ್ಯಾಪಾರ ಕುಂದಿತ್ತು. ಕಳೆದ ವರ್ಷ 2022-23ನೇ ಸಾಲಿನಲ್ಲಿ ₹5 ಲಕ್ಷದಷ್ಟು ವಹಿವಾಟು ಆಗಿತ್ತು. ಖರ್ಚು ತೆಗೆದು ₹2 ಲಕ್ಷದಷ್ಟು ಲಾಭ ಸಿಕ್ಕಿತ್ತು’ ಎಂದು ಕುಂಬಾರರೊಬ್ಬರು ಹೇಳಿದರು.

27yargole11.jpg
27yargole11.jpg

‘ಈ ವರ್ಷ ರಾಜ್ಯದ ಬದಾಮಿ, ವಿಜಯಪುರ, ಬಾಗಲಕೋಟೆ, ರಾಯಚೂರು, ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ದೊಡ್ಡ ಗಾತ್ರದ ಮಡಕೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಕಾರ್ಮಿಕರ ಕೊರತೆ ಮತ್ತು ಮಡಕೆಗಳ ಸಂಗ್ರಹಕ್ಕೆ ಜಾಗದ ಕೊರತೆ ಇರುವುದರಿಂದ ಬೇಡಿಕೆ ಪೂರೈಸಲು ಆಗುತ್ತಿಲ್ಲ’ ಎಂದು ಎಂದು ಭೀಮರಾಯ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಂಬಾರಿಕೆ ವೃತ್ತಿ ನಮಗೆ ಹೊಟ್ಟೆ ತುಂಬಿಸಿದೆ. ಕೈ ತುಂಬಾ ಕೆಲಸವನ್ನೂ ನೀಡಿದೆ. ಸಂತೃಪ್ತಿಯಿಂದ ಜೀವನ ಸಾಗಿಸುತ್ತಿದ್ದೇವೆ’ ಎಂದು ಮಡಕೆ ತಯಾರಿಸುವ ಮಹಿಳೆ ದುರ್ಗಮ್ಮ ಖುಷಿ ಹಂಚಿಕೊಂಡರು.

ಬೇಸಿಗೆಯ ನಾಲ್ಕು ತಿಂಗಳಷ್ಟೇ ಮಡಕೆ ಮಾರಾಟ ಮಾಡುವ ಕುಂಬಾರರು, ಚಳಿಗಾಲದಲ್ಲಿ ಮಡಕೆ ತಯಾರಿಸುತ್ತಾರೆ. ಮಳೆಗಾಲದಲ್ಲಿ ಕೃಷಿ ಮತ್ತು ಕಟ್ಟಡ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ‘ಸರ್ಕಾರದ ನೆರವು ನೀಡಿದರೆ ಮಡಕೆ ತಯಾರಿಕೆಯಲ್ಲಿ ಇನ್ನಷ್ಟು ಸೃಜನಶೀಲತೆ, ಕೌಶಲ ಪ್ರದರ್ಶಿಸಬಹುದು’ ಎಂಬುದು ಕುಂಬಾರರ ಆಶಯ.

ಸಾಬರೆಡ್ಡಿ ಕುಂಬಾರ
ಸಾಬರೆಡ್ಡಿ ಕುಂಬಾರ
ನಾವು ತಯಾರಿಸಿದ ಮಡಕೆಗಳಿಗೆ ಹೊರ ರಾಜ್ಯಗಳು ಹೆಚ್ಚಿನ ಬೇಡಿಕೆ ಇವೆ. ನಮಗೆ ಸರ್ಕಾರದ ಆರ್ಥಿಕ ನೆರವು ಇನ್ನಷ್ಟು ತರಬೇತಿಯ ಸಿಗಬೇಕಿದೆ
ಸಾಬರೆಡ್ಡಿ ಕುಂಬಾರ ಕುಂಬಾರ ಕುಟುಂಬದ ಯುವಕ
ಜಮಲ್ ಸಾಬ್ ಹೆಡಗಿಮದ್ರ
ಜಮಲ್ ಸಾಬ್ ಹೆಡಗಿಮದ್ರ
ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಶೈಲಿಯ ಮಡಕೆ ತಯಾರಿಸುವ ಕುಂಬಾರರ ಕ್ಷೇಮಾವೃದ್ಧಿಗೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯವರು ವಿವಿಧ ಆರ್ಥಿಕ ಯೋಜನೆಗಳ ಮಾಹಿತಿ ತರಬೇತಿ ನೀಡಬೇಕು
ಜಮಲ್ ಸಾಬ್ ಹೆಡಗಿಮದ್ರ ಕಾರ್ಮಿಕ ಸಂಘಟನೆ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT