ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯಕ್ಕೆ ಬುನಾದಿ: ಮನ್ನೆ

Last Updated 8 ಏಪ್ರಿಲ್ 2022, 5:27 IST
ಅಕ್ಷರ ಗಾತ್ರ

ಗುರುಮಠಕಲ್: ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಅವರು ಭದ್ರವಾದಬುನಾದಿ ಹಾಕಿದರು ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಹೇಳಿದರು.

ಇಲ್ಲಿನ ಪುರಸಭೆ ಆವರಣದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಚಳವಳಿ ಆರಂಭಿಸಿ, ಜನ ಸಾಮಾನ್ಯರಿಗೆ ಅರ್ಥ ಆಗುವಂತೆ ರಚಿಸಿದರು. ಈ ಮೂಲಕ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದರು. ಇದಕ್ಕೆ ಅಡಿಪಾಯ ಹಾಕಿದ್ದವರು ದೇವರ ದಾಸಿಮಯ್ಯ ಎಂದರು.

ದಾಸಿಮಯ್ಯ ತಮ್ಮ ವಚನಗಳಲ್ಲಿ ತಾತ್ವಿಕ ಚಿಂತನೆಗಳ ಹೊಸ ಮಾರ್ಗವ ತೋರಿಸಿಕೊಟ್ಟ ದಾರ್ಶನಿಕ. ರಾಮನಾಥ ಅಂಕಿತನಾಮದೊಂದಿಗೆ ಅವರು ಬರೆದ ವಚನಗಳಲ್ಲಿ ಮೌಢ್ಯ, ಡಾಂಭಿಕತೆಯನ್ನು ಖಂಡಿಸಿ, ಸಾಮಾಜಿಕ ಕಳಕಳಿಯನ್ನು ಭಿತ್ತಿದ್ದರು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಸದಸ್ಯರಾದ ಆಶನ್ನ ಬುದ್ದ, ಬಾಬು ತಲಾರಿ, ಅನ್ವರ ಅಹಮ್ಮದ್, ಪ್ರಮುಖರಾದ ಆನಂದ ಬೋಯಿನ್, ಫಯಾಜ್ ಅಹಮ್ಮದ್, ರವೀಂದ್ರರೆಡ್ಡಿ ಗವಿನೋಳ್, ಕಾಶಪ್ಪ, ಜಗದೀಶ ಅವುಂಟಿ, ಶರಣು, ಲಿಂಗರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT