ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ದಾಸಿಮಯ್ಯ ಪ್ರಜಾಪ್ರಭುತ್ವದ ಪ್ರತಿಪಾದಕ; ಲಕ್ಷ್ಮಿಕಾಂತ

Last Updated 7 ಏಪ್ರಿಲ್ 2022, 4:08 IST
ಅಕ್ಷರ ಗಾತ್ರ

ಸುರಪುರ: ‘ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಸಮಬಾಳು ಬಗ್ಗೆ ಧ್ವನಿ ಎತ್ತಿ, ಮಾನವೀಯ ಮೌಲ್ಯಗಳನ್ನು ವಿಶ್ವಕ್ಕೆ ಸಾರಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 11ನೇ ಶತಮಾನದಲ್ಲಿ ಜಗತ್ತಿಗೆ ಪರಿಚಯಿಸಿದ್ದರು’ ಎಂದು ಚಿಂತಕ ಲಕ್ಷ್ಮಿಕಾಂತ ದೇವರಗೋನಾಲ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿ, ಧರ್ಮಗಳ ಸಂಘರ್ಷ, ಮೇಲು, ಕೀಳುನಂತಹ ಸಾಮಾಜಿಕ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ನೈತಿಕ ಮೌಲ್ಯಗಳಿಂದ ಕೂಡಿದ ವಚನ ಸಾಹಿತ್ಯವನ್ನು ಮಕ್ಕಳಿಗೆ ಕಲಿಸಿಕೊಡುವುದು ಇಂದಿನ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ, ‘ದೇವರ ದಾಸಿಮಯ್ಯನವರ ವಚನಗಳು ತಾತ್ವಿಕ ಚಿಂತನೆಗಳಿಂದ ಕೂಡಿವೆ. ಎಲ್ಲರಂತೆ ಬಾಳಿ ಬದುಕಿದ ದಾಸಿಮಯ್ಯ ಪ್ರಪಂಚದೊಂದಿಗೆ ಪಾರಮಾರ್ಥವನ್ನು ಜಯಿಸಿದ ಮಹಾನ್ ಶರಣ’ ಎಂದರು.

‘ಕಾಯಕದೊಂದಿಗೆ ಸರಳ ಮತ್ತು ಮಹಾಂತ ಜೀವನವನ್ನು ಸರಿದೂಗಿಸಿ ಪಾರಮಾರ್ಥವನ್ನು ಗೆಲ್ಲುವ ಬಗೆಯನ್ನು ಪ್ರಪಂಚಕ್ಕೆ ಪರಿಚಯಿಸಿದ ದಾಸಿಮಯ್ಯರ ಚರಿತ್ರೆ ಸಾರ್ವಕಾಲಿಕ ಶ್ರೇಷ್ಠವಾಗಿದೆ’ ಎಂದು ಹೇಳಿದರು.
ಉಪ ಖಜಾನೆ ಅಧಿಕಾರಿ ಡಾ.ಎಂ.ಎಸ್. ಶಿರವಾಳ, ಬಿಸಿಎಂ ಅಧಿಕಾರಿ ತಿಪ್ಪಾರೆಡ್ಡಿ ಮಾತನಾಡಿದರು. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ, ಚುನಾವಣೆ ಇಲಾಖೆ ಶಿರಸ್ತೇದಾರ ಪುರುಷೋತ್ತಮ ಇದ್ದರು.

ಬನಶಂಕರಿ ದೇವಸ್ಥಾನದ ಅರ್ಚಕ ಮಂಜುನಾಥ ಸ್ವಾಮಿ ಸಾನಿಧ್ಯ ವಹಿಸಿದ್ದರು. ರವಿ ನಾಯಕ ಸ್ವಾಗತಿಸಿದರು, ಚನ್ನಬಸಪ್ಪ ನಿರೂಪಿಸಿ ದರು, ಭೀಮು ಯಾದವ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT